AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮಾಲಿಯಾದ ಹೋಟೆಲ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, 32 ಮಂದಿ ಸಾವು, 63 ಜನರಿಗೆ ಗಾಯ

ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನ ಬೀಚ್ ಹೋಟೆಲ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, 63 ಜನರು ಗಾಯಗೊಂಡಿದ್ದಾರೆ. ಅಲ್-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್-ಶಬಾಬ್ ತನ್ನ ರೇಡಿಯೋ ಸ್ಟೇಷನ್ ಮೂಲಕ ತನ್ನ ಹೋರಾಟಗಾರರು ದಾಳಿ ನಡೆಸಿದ್ದಾರೆ ಎಂದು ಹೇಳಿದೆ.

ಬಾಂಬ್ ದಾಳಿ
ನಯನಾ ರಾಜೀವ್
|

Updated on: Aug 04, 2024 | 9:37 AM

Share

ಸೋಮಾಲಿಯಾದ ರಾಜಧಾನಿ ಮೊಗಾದಿಶುವಿನ ಬೀಚ್ ಹೋಟೆಲ್​ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, 63 ಜನರು ಗಾಯಗೊಂಡಿದ್ದಾರೆ. ಅಲ್-ಖೈದಾದ ಪೂರ್ವ ಆಫ್ರಿಕಾದ ಅಂಗಸಂಸ್ಥೆ ಅಲ್-ಶಬಾಬ್ ತನ್ನ ರೇಡಿಯೋ ಸ್ಟೇಷನ್ ಮೂಲಕ ತನ್ನ ಹೋರಾಟಗಾರರು ದಾಳಿ ನಡೆಸಿದ್ದಾರೆ ಎಂದು ಹೇಳಿದೆ.

ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಉಳಿದವರು ನಾಗರಿಕರು ಎಂದು ಪೊಲೀಸ್ ವಕ್ತಾರ ಮೇಜರ್ ಅಬ್ದಿಫತಾ ಆದಾನ್ ಹಸನ್ ಪತ್ರಕರ್ತರಿಗೆ ತಿಳಿಸಿದ್ದಾರೆ. ದಾಳಿಯಲ್ಲಿ ಮತ್ತೊಬ್ಬ ಯೋಧ ಕೂಡ ಗಾಯಗೊಂಡಿದ್ದಾರೆ ಎಂದು ಹಾಸನ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿರುವುದಾಗಿ ತಿಳಿಸಿದ್ದಾರೆ.

ಸೊಮಾಲಿಯಾದಲ್ಲಿ ಅಂತಾರಾಷ್ಟ್ರೀಯ ಬೆಂಬಲ ಪಡೆದಿರುವ ಫೆಡರಲ್ ಸರ್ಕಾರದ ವಿರುದ್ಧ ಬಂಡೆದ್ದಿರುವ ಅಲ್​ಖೈದಾದ ಜತೆ ಸಂಪರ್ಕವಿರುವ ಅಲ್​-ಶದಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಮತ್ತಷ್ಟು ಓದಿ: ಕರಾಚಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, ಜಪಾನಿನ ಐವರು ಪಾರು, ಮೂವರಿಗೆ ಗಾಯ

ಓರ್ವ ಪ್ರತ್ಯಕ್ಷದರ್ಶಿ ಮೊಹಮ್ಮದ್ ಮೊಲಿದ್ ಎಂಬುವವರು, ಆ ವ್ಯಕ್ತಿ ಹೋಟೆಲ್​ನನ್ನು ತನ್ನನ್ನು ತಾನು ಸ್ಫೋಟಿಸಿಕೊಳ್ಳುವುದಕ್ಕೂ ಮುನ್ನ ಸ್ಫೋಟಕ ಉಡುಪನ್ನು ಧರಿಸಿದ ದಾಳಿಕೋರನನ್ನು ತಾನು ನೋಡಿದ್ದಾಗಿ ವಿವರಿಸಿದ್ದಾರೆ.

ಹೋಟೆಲ್​ನಲ್ಲಿ ಅವರೊಂದಿಗಿದ್ದ ಕೆಲವು ಸ್ನೇಹಿತರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ. ಕಳೆದ ವರ್ಷ ನಡೆದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದರು. ಅಲ್​ ಶಬಾಬ್ ದಕ್ಷಿಣ ಮತ್ತು ಮಧ್ಯ ಸೊಮಾಲಿಯಾದ ಭಾಗಗಳನ್ನು ನಿಯಂತ್ರಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು

ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು

ಬಿಗ್​​ಬಾಸ್​​ ಸಂಭಾವನೆ, ಆದ ಖರ್ಚು ಮತ್ತು ಪಿಆರ್ ಬಗ್ಗೆ ಕಾವ್ಯಾ ಮಾತು

ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ

ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?

ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!

ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ

ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!

ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ