AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ರೆಯ ಮನೆಯೊಂದರಿಂದ ಶಸ್ತ್ರಾಸ್ತ್ರ ವಶ ಪಡಿಸಿದ ಪೊಲೀಸ್; ಇದು ಖಲಿಸ್ತಾನ್ ಪರ ಕಾರ್ಯಕರ್ತನದ್ದು ಎಂದು ಆರೋಪ

ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಅಥವಾ ಆರ್‌ಸಿಎಂಪಿಯ ಸರ್ರೆ ತಂಡ ಗುರುವಾರ ಬೆಳಿಗ್ಗೆ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೊ ಬಗ್ಗೆ ನಮಗೆ ತಿಳಿದು ಬಂತು. ಅಲ್ಲಿ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ಜನರ ಗುಂಪನ್ನು ಸರ್ರೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ

ಸರ್ರೆಯ ಮನೆಯೊಂದರಿಂದ ಶಸ್ತ್ರಾಸ್ತ್ರ ವಶ ಪಡಿಸಿದ ಪೊಲೀಸ್; ಇದು ಖಲಿಸ್ತಾನ್ ಪರ ಕಾರ್ಯಕರ್ತನದ್ದು ಎಂದು ಆರೋಪ
ಹರ್ಜೀತ್ ಸಿಂಗ್ ಪತ್ತಾರ್
ರಶ್ಮಿ ಕಲ್ಲಕಟ್ಟ
|

Updated on: Aug 03, 2024 | 6:03 PM

Share

ಟೊರೊಂಟೊ ಆಗಸ್ಟ್ 03: ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ (Surrey) ನಡೆದ ಕಾರ್ಯಕ್ರಮವೊಂದರಲ್ಲಿ ಜನರು ಶಸ್ತ್ರಾಸ್ತ್ರಗಳೊಂದಿಗೆ ಜಮಾಯಿಸಿರುವ ವಿಡಿಯೊ ಪ್ರಸಾರವಾದ ನಂತರ ಕೆನಡಾದ ಕಾನೂನು ಜಾರಿ ಅಧಿಕಾರಿಗಳು ಹಲವಾರು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದ ಹಾಗೆ ವಿಡಿಯೊದಲ್ಲಿ ಕಂಡ ವ್ಯಕ್ತಿಗಳು ಅಥವಾ ನಿವಾಸದ ಮಾಲೀಕರನ್ನು ಪೊಲೀಸರು ಗುರುತಿಸಿಲ್ಲ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಖಾತೆಗಳು ಮಾಲೀಕರನ್ನು ಹರ್ಜಿತ್ ಸಿಂಗ್ ಪತ್ತಾರ್ ಎಂದು ಗುರುತಿಸಿವೆ. ಈತ ಕಳೆದ ವರ್ಷ ಜೂನ್ 18 ರಂದು ಕೊಲ್ಲಲ್ಪಟ್ಟ ಖಲಿಸ್ತಾನ್ ಪರ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಅವರ ಸಹವರ್ತಿ. ಪತ್ತಾರ್ ಅವರ ಪರಿಚಯವಿರುವ ವ್ಯಕ್ತಿಯೊಬ್ಬರು ಈ ವಿಡಿಯೊ ಅವರ ಮಗನ ಮದುವೆಯ ಪೂರ್ವ ಸಮಾರಂಭದ ವಿಡಿಯೊ ಎಂದು ಹೇಳಿದ್ದಾರೆ . ಪತ್ತಾರ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ ಜೊತೆ ಸಂಬಂಧ ಹೊಂದಿದ್ದರು.

ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಅಥವಾ ಆರ್‌ಸಿಎಂಪಿಯ ಸರ್ರೆ ತಂಡ ಗುರುವಾರ ಬೆಳಿಗ್ಗೆ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವಿಡಿಯೊ ಬಗ್ಗೆ ನಮಗೆ ತಿಳಿದು ಬಂತು. ಅಲ್ಲಿ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ಜನರ ಗುಂಪನ್ನು ಸರ್ರೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಸರ್ರೆ ಆರ್‌ಸಿಎಂಪಿಯ ಸೌತ್ ಕಮ್ಯುನಿಟಿ ರೆಸ್ಪಾನ್ಸ್ ಯುನಿಟ್ (ಎಸ್‌ಸಿಆರ್‌ಯು) ತನಿಖೆಯನ್ನು ನಡೆಸಿದ್ದು, ನಂತರ ದಿನದಲ್ಲಿ ವಿಡಿಯೊವನ್ನು ಚಿತ್ರೀಕರಿಸಿದ ವಿಳಾಸವನ್ನು ದೃಢಪಡಿಸಿತು. ಕ್ರಿಮಿನಲ್ ಕೋಡ್ ತನಿಖೆಯನ್ನು ಪ್ರಾರಂಭಿಸಿ ಆಸ್ತಿ ಮಾಲೀಕರೊಂದಿಗೆ ಸಂಪರ್ಕವನ್ನು ಮಾಡಲಾಯಿತು. ಗುರುವಾರ ಸಂಜೆ 5.30 ರ ಸುಮಾರಿಗೆ, “ಎಸ್‌ಸಿಆರ್‌ಯು ಆಸ್ತಿ ಮಾಲೀಕರಿಂದ ಹಲವಾರು ಬಂದೂಕುಗಳನ್ನು ವಶಪಡಿಸಿಕೊಂಡಿದೆ.

“ವಿಡಿಯೊದಲ್ಲಿರುವ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ತನಿಖೆ ಮುಂದುವರಿದಿದೆ. ತನಿಖೆಯನ್ನು ಮುನ್ನಡೆಸಲು SCRU ಬಹು ಪಾಲುದಾರ ಏಜೆನ್ಸಿಗಳನ್ನು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಇರಾನ್ ದಾಳಿಯ ಸುಳಿವು ಸಿಗುತ್ತಿದ್ದಂತೆ ಇಸ್ರೇಲ್​ಗೆ ಯುದ್ಧನೌಕೆ, ಫೈಟರ್ ಜೆಟ್ ಕಳುಹಿಸಿದ ಅಮೆರಿಕಾ

“ಈ ಘಟನೆಯು ಸಮುದಾಯಕ್ಕೆ ಅತ್ಯಂತ ಆತಂಕಕಾರಿಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ಸರ್ರೆ RCMP ಯ ಸಮುದಾಯ ಸೇವೆಗಳ ಅಧಿಕಾರಿ ಸೂಪರಿಂಟೆಂಡೆಂಟ್ ಹಾರ್ಮ್ ಡೋಸಾಂಗೆ ಹೇಳಿದ್ದಾರೆ. “ಸಾರ್ವಜನಿಕ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಬಂದೂಕುಗಳನ್ನು ವಶಪಡಿಸಿಕೊಳ್ಳಲು ನಮ್ಮ ಅಧಿಕಾರಿಗಳು ತ್ವರಿತವಾಗಿ ಕೆಲಸ ಮಾಡಿದರು” ಎಂದು ಅವರು ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್