AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangladesh Crisis: ಶೇಖ್ ಹಸೀನಾಳನ್ನು ಹಸ್ತಾಂತರಿಸದಿದ್ದರೆ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ

ಕಳೆದ ಶುಕ್ರವಾರ (ಆಗಸ್ಟ್ 9) ಢಾಕಾದಲ್ಲಿ ನಡೆದ ‘ಸಾಮರಸ್ಯ ರ‍್ಯಾಲಿ’ಯಲ್ಲಿ ಮಾತನಾಡಿದ ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್, ‘ಭಾರತದೊಂದಿಗೆ ಕೈದಿಗಳ ವಿನಿಮಯ ಒಪ್ಪಂದ ಮಾಡಿಕೊಂಡಿದ್ದೇವೆ. ಶೇಖ್ ಹಸೀನಾಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು ಕೂಡಲೇ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಭಾರತೀಯ ಹೈಕಮಿಷನರ್ ಅವರನ್ನು ಪೀಪಲ್ಸ್ ರೈಟ್ಸ್ ಕೌನ್ಸಿಲ್ ಸುತ್ತುವರೆದಿರುತ್ತದೆ ಎಂದಿದ್ದಾರೆ.

Bangladesh Crisis: ಶೇಖ್ ಹಸೀನಾಳನ್ನು ಹಸ್ತಾಂತರಿಸದಿದ್ದರೆ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ
ನೂರುಲ್ ಹಕ್ ನೂರ್ - ಶೇಖ್ ಹಸೀನಾ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Aug 12, 2024 | 1:55 PM

Share

ಢಾಕಾ ಆಗಸ್ಟ್ 12: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾಗೆ (sheikh hasina) ಆಶ್ರಯ ನೀಡಿದ ಭಾರತದ ವಿರುದ್ಧ ಬಿಎನ್‌ಪಿ (BNP) ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಸಿಟ್ಟಿಗೆದ್ದಿವೆ. ಬಿಎನ್​​ಪಿ ಪ್ರಸ್ತುತ ಮಧ್ಯಂತರ ಸರ್ಕಾರದಲ್ಲಿ ಪ್ರಬಲ ಪ್ರಭಾವ ಹೊಂದಿದೆ. ಗಣ ಅಧಿಕಾರ್ ಪರಿಷತ್ ಅಧ್ಯಕ್ಷ ವಿಪಿ ನೂರುಲ್ ಹಕ್ ನೂರ್ ಅವರು ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದು, ಆಕೆಯನ್ನು ಕೂಡಲೇ ಬಾಂಗ್ಲಾದೇಶಕ್ಕೆ ಹಸ್ತಾಂತರಿಸದಿದ್ದರೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಕಳೆದ ಶುಕ್ರವಾರ (ಆಗಸ್ಟ್ 9) ಢಾಕಾದಲ್ಲಿ ನಡೆದ ‘ಸಾಮರಸ್ಯ ರ‍್ಯಾಲಿ’ಯಲ್ಲಿ ಮಾತನಾಡಿದ ಅವರು, ‘ಭಾರತದೊಂದಿಗೆ ಕೈದಿಗಳ ವಿನಿಮಯ ಒಪ್ಪಂದ ಮಾಡಿಕೊಂಡಿದ್ದೇವೆ. ಶೇಖ್ ಹಸೀನಾಳನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು ಕೂಡಲೇ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಇಲ್ಲವಾದಲ್ಲಿ ಭಾರತೀಯ ಹೈಕಮಿಷನರ್ ಅವರನ್ನು ಪೀಪಲ್ಸ್ ರೈಟ್ಸ್ ಕೌನ್ಸಿಲ್ ಸುತ್ತುವರೆದಿರುತ್ತದೆ ಎಂದಿದ್ದಾರೆ.

ಅಂದಹಾಗೆ, ಪೀಪಲ್ಸ್ ರೈಟ್ಸ್ ಕೌನ್ಸಿಲ್ ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಪಕ್ಷವಾಗಿದೆ. 2022 ರಲ್ಲಿ ರೆಜಾ ಕಿಬ್ರಿಯಾ ಮತ್ತು ನೂರುಲ್ ಹಕ್ ನೂರ್ ಅವರ ನೇತೃತ್ವದಲ್ಲಿ ರಚನೆಯಾದ ಪಕ್ಷವಿದು. 2018 ರಲ್ಲಿ ಬಾಂಗ್ಲಾದೇಶದಲ್ಲಿ ಕೋಟಾ ಸುಧಾರಣಾ ಚಳವಳಿಯ ಪ್ರಮುಖ ಮುಂದಾಳುಗಳಾಗಿದ್ದಾರೆ ಇವರು. ಈ ಬಾರಿಯೂ ಕೋಟಾ ವಿರೋಧಿ ಆಂದೋಲನಕ್ಕೆ ಗಣ ಅಧಿಕಾರ ಪರಿಷತ್ತು ಮೊದಲಿನಿಂದಲೂ ಬೆಂಬಲ ನೀಡಿತ್ತು. ಆದ್ದರಿಂದ, ಉಸ್ತುವಾರಿ ಸರ್ಕಾರದಲ್ಲಿಯೂ ಅವರಿಗೆ ಸಾಕಷ್ಟು ಪ್ರತಿಷ್ಠೆ ಇದೆ. ಆದರೆ, ನೂರ್ ತುಂಬ ನಿಗೂಢ ಪಾತ್ರ. ಕಳೆದ ವರ್ಷ ಜನವರಿಯಲ್ಲಿ ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ, ಅವರು ದುಬೈನಲ್ಲಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಏಜೆಂಟ್‌ನೊಂದಿಗೆ ಭೇಟಿಯಾಗುತ್ತಿರುವುದು ಕಂಡುಬಂದಿದೆ.

ಶೇಖ್ ಹಸೀನಾಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕೆಂದು ಅವರು ಒತ್ತಾಯಿಸಿದ್ದಲ್ಲದೆ, ಬಾಂಗ್ಲಾದೇಶದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪದ ಬಗ್ಗೆ ನೂರುಲ್ ಹಕ್ ನೂರ್ ಗಂಭೀರ ದೂರು ನೀಡಿದರು. ಶುಕ್ರವಾರದ ಸಭೆಯಲ್ಲಿ, 2014, 2018 ಮತ್ತು 2024 ರ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತವು ಶೇಖ್ ಹಸೀನಾ ಅವರನ್ನು ಏಕಾಂಗಿಯಾಗಿ ಬೆಂಬಲಿಸಿದೆ ಎಂದು ಅವರು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ‘ಇಡೀ ವಿಶ್ವವೇ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವದ ಪರವಾಗಿ ಮಾತನಾಡುತ್ತಿದ್ದರೂ ಭಾರತ ಹಸೀನಾಳನ್ನು ಅಧಿಕಾರಕ್ಕೆ ತರಲು ಹವಣಿಸುತ್ತಿದೆ. ನಮ್ಮ ನೆರೆಯ ಭಾರತಕ್ಕೆ ನಾನು ಹೇಳುತ್ತೇನೆ, ನೀವು ನಮ್ಮೊಂದಿಗೆ ಸಾಮಾನ್ಯ ಸಂಬಂಧವನ್ನು ಇಟ್ಟುಕೊಳ್ಳಬೇಕು. ಇದಕ್ಕಾಗಿ ಸಂಬಂಧವನ್ನು ಹಾಳು ಮಾಡಬೇಡಿ.” ಎಂದು ಗಣ ಅಧಿಕಾರ್ ಪರಿಷತ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: Bangladesh Violence: ಬಾಂಗ್ಲಾದೇಶದಲ್ಲಿ ತಮ್ಮ ಮೇಲಿನ ಹಿಂಸಾಚಾರ ಖಂಡಿಸಿ ಹಿಂದೂಗಳಿಂದ ಬೃಹತ್ ಪ್ರತಿಭಟನೆ

ಶೇಖ್ ಹಸೀನಾ ಅವರ ಆಶ್ರಯದಿಂದ ಅಸಂತೋಷಗೊಂಡಿರುವ ಅವಾಮಿ ಲೀಗ್‌ನ ಪ್ರಮುಖ ಪ್ರತಿಸ್ಪರ್ಧಿ ಬಾಂಗ್ಲಾದೇಶದ ಬಿಎನ್‌ಪಿ. ಬಿಎನ್‌ಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಜ್ಞಾನೇಶ್ವರ್ ರಾಯ್, “ಬಾಂಗ್ಲಾದೇಶವು ಭಾರತದೊಂದಿಗೆ ಸಹಕಾರಿ ಸಂಬಂಧವನ್ನು ಹೊಂದಿರಬೇಕು ಎಂದು ಬಿಎನ್‌ಪಿ ಭಾವಿಸುತ್ತದೆ. ಭಾರತ ಸರ್ಕಾರ ಅದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು. ಅವರು ನಮ್ಮ ಎದುರಾಳಿಯನ್ನು ಬೆಂಬಲಿಸಿದರೆ, ಆ ಸಹಕಾರ ಸಂಬಂಧವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
1 ಲಕ್ಷ ರೂ. ಬಾಡಿಗೆ, 10 ಸಾವಿರ ರೂ. ಮುಂಗಡಕ್ಕೆ ಜಿಬಿಎ ಆಜ್ಞೆ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?