ನಾಯಿ ಕಚ್ಚಿದ್ದಕ್ಕೆ 29 ನಾಯಿಗಳನ್ನು ಗುಂಡಿಕ್ಕಿ ಕೊಂದರು; ಕತಾರ್ನಲ್ಲಿನ ಕ್ರೂರ ಕೃತ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ
ನಾಯಿಯೊಂದು ಅವರ ಮಕ್ಕಳಿಗೆ ಕಚ್ಚಿದೆ ಹಾಗಾಗಿ ಈ ನಾಯಿಗಳನ್ನು ಗುಂಡಿಕ್ಕಿ ಕೊಂದಿದ್ದೇವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇಬ್ಬರು ವ್ಯಕ್ತಿಗಳು ಗನ್ ಹಿಡಿದುಕೊಂಡು ಬಂದಿದ್ದು ಅವರನ್ನು ನೋಡಿ ಭದ್ರತಾ ಸಿಬ್ಬಂದಿ ಕೂಡಾ ಹೆದರಿದ್ದಾರೆ.
ಯಾರಾದ್ದೋ ಒಬ್ಬ ವ್ಯಕ್ತಿಯ ಮಗನಿಗೆ ನಾಯಿಯೊಂದು(Dog) ಕಚ್ಚಿತ್ತು. ಈ ಸಿಟ್ಟಿನಲ್ಲಿ ಕತಾರ್ನಲ್ಲಿ(Qatar) ಸಶಸ್ತ್ರಧಾರಿಗಳಾದ ಜನರು ಬಂದು 29 ನಾಯಿಗಳನ್ನು ಸಾಯಿಸಿದ್ದು, ಹಲವಾರು ನಾಯಿಗಳ ಮೇಲೆ ಗಾಯಗಳೂ ಆಗಿವೆ. ಈ ಬಗ್ಗೆ ದೋಹಾ ಮೂಲದ ಪ್ರಾಣಿಗಳ ರಕ್ಷಣಾ ಸಂಘ PAWS ರೆಸ್ಕ್ಯೂ ಕತಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ್ದು, ಪ್ರಾಣಿಗಳ ಮೇಲೆ ದಾಳಿ ನಡೆಸುವವರು ಸುರಕ್ಷಿತವಾದ ಕಾರ್ಖಾನೆಯ ಪ್ರದೇಶದಲ್ಲಿ ಕಾಣಿಸಿಕೊಂಡರು. ಅಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕುವ, ನೋಡಿಕೊಳ್ಳುವ ಪ್ರದೇಶಕ್ಕೆ ಹೋಗಲು ಅಲ್ಲಿಂದ ಭದ್ರತಾ ಸಿಬ್ಬಂದಿಯನ್ನು ಹೆದರಿಸಿದರು. ಅವರು ನಾಯಿಮರಿಗಳು ಸೇರಿದಂತೆ 29 ನಾಯಿಗಳನ್ನು ಕೊಂದರು. ಹಲವು ನಾಯಿಗಳಿಗೆ ಗಾಯಗಳಾಗಿವೆ ಎಂದು PAWS ಬರೆದಿದೆ. ನಾಯಿಯೊಂದು ಅವರ ಮಕ್ಕಳಿಗೆ ಕಚ್ಚಿದೆ ಹಾಗಾಗಿ ಈ ನಾಯಿಗಳನ್ನು ಗುಂಡಿಕ್ಕಿ ಕೊಂದಿದ್ದೇವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇಬ್ಬರು ವ್ಯಕ್ತಿಗಳು ಗನ್ ಹಿಡಿದುಕೊಂಡು ಬಂದಿದ್ದು ಅವರನ್ನು ನೋಡಿ ಭದ್ರತಾ ಸಿಬ್ಬಂದಿ ಕೂಡಾ ಹೆದರಿದ್ದಾರೆ. ನಾಯಿಗಳ ಮೇಲೆ ಗುಂಡು ಹಾರಿಸುವುದನ್ನ ತಡೆಯಲು ಅವರು ಪ್ರಯತ್ನಿಸಿದರು ಆದರೆ ತಮ್ಮ ಜೀವವೂ ಅಪಾಯದಲ್ಲಿದೆ ಅಂದು ಅವರು ಹಿಂದೆ ಸರಿದರು. ಒಂದು ನಾಯಿ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿದೆ. ಈ ನಾಯಿಗಳು ಯಾರಿಗೂ ತೊಂದರೆ ಕೊಟ್ಟಿಲ್ಲ. ಅವು ತುಂಬಾ ಪ್ರೀತಿಯ ನಾಯಿಗಳು ಎಂದು PAWS ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದೆ. ದೋಹಾ ನ್ಯೂಸ್ ಪ್ರಕಾರ ಈ ಕೃತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘೋರ ಕೃತ್ಯ ಕತಾರಿ ಸಮಾಜಕ್ಕೆ ಬೆದರಿಕೆ ಎಂದು ಪ್ರಾಣಿಗಳ ಹಕ್ಕುಗಳನ್ನು ಸಂರಕ್ಷಿಸುವ ಬ್ರಾಂಡ್ ರೋನಿ ಹೆಲೊ ಹೇಳಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅದು ಒತ್ತಾಯಿಸಿದೆ.
Published On - 4:40 pm, Wed, 20 July 22