Basava Jayanti 2022: ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಲಂಡನ್‌ನಲ್ಲಿ 889ನೇ ಬಸವ ಜಯಂತಿ ಆಚರಣೆ

ಯುನೈಟೆಡ್ ಕಿಂಗ್‌ಡಮ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಬಸವೇಶ್ವರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಜಂಟಿಯಾಗಿ ಆಚರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ.

Basava Jayanti 2022: ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಲಂಡನ್‌ನಲ್ಲಿ 889ನೇ ಬಸವ ಜಯಂತಿ ಆಚರಣೆ
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಲಂಡನ್‌ನಲ್ಲಿ 889ನೇ ಬಸವ ಜಯಂತಿ ಆಚರಣೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 03, 2022 | 5:00 PM

ಲಂಡನ್‌: ಲಂಡನ್‌ನ ಬಸವೇಶ್ವರ ಪ್ರತಿಮೆಗೆ ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಶ್ರೀಮತಿ ಗಾಯಿತ್ರಿ ಇಸ್ಸಾರ್ ಕುಮಾರ್ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಬಸವೇಶ್ವರರ 889ನೇ ಜನ್ಮದಿನವನ್ನು (Basava Jayanti) ಆಚರಿಸಿದರು. ಯುನೈಟೆಡ್ ಕಿಂಗ್‌ಡಮ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನವು ಬಸವೇಶ್ವರ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಜಂಟಿಯಾಗಿ ಆಚರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಸುನೀಲ್ ಕುಮಾರ್​ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಿತ್ತು. ಆದರೆ ಪತ್ರದ ಮೂಲಕ ಪ್ರತಿಕ್ರಿಯೇ ನೀಡಿದ್ದು, ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್‌ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬಸವ ಹಾಗೂ ಅಂಬೇಡ್ಕರ್ ಇಬ್ಬರೂ ಸಮಾನತೆಯ ಹರಿಕಾರರು. ಇಬ್ಬರ ಕಾಲಾವಧಿಗಳು ಬೇರೆ ಬೇರೆ ಇದ್ದರೂ ಅವರ ಧೈಯ ಮತ್ತು ಆಶಯಗಳು ಒಂದೇ ಆಗಿದ್ದವು. ಈ ಇಬ್ಬರೂ ಚೇತನಗಳು ಭಾರತಕ್ಕೆ ಮಾತ್ರವೇ ಸೇರದೇ ವಿಶ್ವಪಥದಲ್ಲಿ ಸಾಗಿದವರು. ಅಂಥಾ ಮಹಾನ್ ಹರಿಕಾರರ ಸ್ಮೃತಿಯಲ್ಲಿ ಲಂಡನ್ನಿನ ಲ್ಯಾಂಬೆತ್ ಫೌಂಡೇಶನ್ ಪ್ರತಿವರ್ಷ ಬಸವೇಶ್ವರರ ಮತ್ತು ಅಂಬೇಡ್ಕರರ ಜಯಂತಿಯನ್ನು ಜಂಟಿಯಾಗಿ ಆಚರಿಸುತ್ತ ಬಂದಿದೆ. ಅಂಬೇಡ್ಕರ್ ಮತ್ತು ಬಸವರ ತತ್ವಾದರ್ಶಗಳನ್ನು ಜಗತ್ತಿಗೇ ಸಾರುತ್ತಿರುವುದು ಅತ್ಯಂತ ಶ್ಲಾಘನೀಯವಾದ ವಿಚಾರ. ಲ್ಯಾಂಬೆತ್ ಫೌಂಡೇಶನ್ ಸಂಸ್ಥೆಯು 2015ರಲ್ಲಿ ಬಸವೇಶ್ವರರ ಪ್ರತಿಮೆಯನ್ನು ಲಂಡನ್ನಿನ ಬ್ರಿಟಿಷ್ ಸಂಸತ್ತಿನ ಬಳಿ ಸ್ಥಾಪಿಸುವುದರ ಮೂಲಕ ಬಸವ ತತ್ವ ಪರಿಪಾಲನೆ ಮತ್ತು ಅಂಬೇಡ್ಕರ್‌ ಅವರ ಮನೆಯನ್ನು ಅನಾವರಣಗೊಳಿಸುವ ಮೂಲಕ ಅಂಬೇಡ್ಕರರ ತತ್ವಾದರ್ಶಗಳನ್ನು ಎತ್ತಿ ಹಿಡಿದಿದೆ. ಬಸವೇಶ್ವರ ಹಾಗೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಕ್ರೋಢೀಕರಿಸಿ, ಜಗತ್ತಿಗೆ ಸಮಾನತೆಯ ಸಂದೇಶ ನೀಡುತ್ತಿರುವ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್‌ನ ಎಲ್ಲರಿಗೂ ಹಾಗೂ ಇಂಗ್ಲೆಂಡಿನಲ್ಲಿ ಭಾರತದ ಹೈ ಕಮಿಷನರ್ ಆಗಿರುವ ಘನತೆವೆತ್ತ ಶ್ರೀಮತಿ ಗಾಯತ್ರಿ ಕುಮಾರ್ ಅವರಿಗೂ ಹೃತೂರ್ವಕ ಕೃತಜ್ಞತೆಗಳು ಎಂದು ಸುನೀಲ್ ಕುಮಾರ್​ ಹೇಳಿದ್ದಾರೆ.

ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯವನ್ನು ಹೋಗಲಾಡಿಸುವ ಹೋರಾಟದಲ್ಲಿ ಬಸವೇಶ್ವರರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ನಡುವಿನ ಪರಿಕಲ್ಪನಾ ಸಂಬಂಧವನ್ನು ಎತ್ತಿ ಹಿಡಿದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಪ್ರಯತ್ನವನ್ನು ಶ್ಲಾಘಿಸಲಾಗಿದೆ. ಈ ಮಹತ್ವದ ಸಂದರ್ಭದಲ್ಲಿ ಯುಕೆ ಮೂಲದ ಎರಡು ಪ್ರಮುಖ ಕನ್ನಡ ಸಂಘಟನೆಗಳಾದ ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಮುಖ್ಯಸ್ಥರಾದ ಡಾ. ಸ್ನೇಹಾ ಕುಲಕರ್ಣಿ ಮತ್ತು ಶ್ರೀ ಗಣಪತಿ ಭಟ್ ಉಪಸ್ಥಿತರಿದ್ದರು. ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಕಳೆದ 39 ಮತ್ತು 17 ವರ್ಷಗಳಿಂದ ಯುಕೆಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿವೆ.

ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.