ಒಂದೇ ಮೆದುಳು ಹೊಂದಿದ್ದ ಬ್ರೆಜಿಲಿಯನ್ ಸಂಯೋಜಿತ ಅವಳಿಗಳ ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿ

ಕ್ರಾನಿಯೊಪಾಗಸ್ ಟ್ವಿನ್ಸ್ ಎಂದು ಕರೆಯಲ್ಪಡುವ ಅವಳಿಗಳ ಬೆಸೆದ ಮಿದುಳುಗಳನ್ನು ಬೇರ್ಪಡಿಸಲು ಕೊನೆಯ ಎರಡು ಶಸ್ತ್ರಚಿಕಿತ್ಸೆಗಳು 33 ಗಂಟೆಗಳ ಕಾಲ ನಡೆದಿದ್ದು 100 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇದಕ್ಕೆ ನೆರವಾಗಿದ್ದರು.

ಒಂದೇ ಮೆದುಳು ಹೊಂದಿದ್ದ ಬ್ರೆಜಿಲಿಯನ್ ಸಂಯೋಜಿತ ಅವಳಿಗಳ ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿ
ಬ್ರೆಜಿಲ್ ದೇಶದ ಅವಳಿಗಳುImage Credit source: Gemini Untwined
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 03, 2022 | 3:16 PM

ಒಂದೇ ತಲೆ ಹೊಂದಿದ್ದ ಬ್ರೆಜಿಲ್ ದೇಶದ ಸಂಯೋಜಿತ ಅವಳಿಗಳನ್ನು (Brazilian twins) ಯುಕೆ ಮೂಲದ ಸರ್ಜನ್ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ ಎಂದು ಇಂಡಿಪೆಂಡೆಂಟ್‌ ವರದಿ ಮಾಡಿದೆ. 4ರ ಹರೆಯದ ಬರ್ನಾರ್ಡೊ ಮತ್ತು ಆರ್ಥರ್ ಲಿಮಾ ರಿಯೊ ಡಿ ಜನೈರೊದಲ್ಲಿ ಕನಿಷ್ಠ ಏಳು ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. ಲಂಡನ್‌ನ ಗ್ರೇಟ್ ಒರ್ಮಂಡ್ ಸ್ಟ್ರೀಟ್ ಆಸ್ಪತ್ರೆಯ ಡಾ ನೂರ್ ಉಲ್ ಒವಾಸೆ ಜೀಲಾನಿ ಶಸ್ತ್ರಚಿಕಿತ್ಸೆಗೆ ಮಾರ್ಗದರ್ಶನ ನೀಡಿದ್ದಾರೆ. ಕ್ರಾನಿಯೊಪಾಗಸ್ ಟ್ವಿನ್ಸ್ ಎಂದು ಕರೆಯಲ್ಪಡುವ ಅವಳಿಗಳ ಬೆಸೆದ ಮಿದುಳುಗಳನ್ನು ಬೇರ್ಪಡಿಸಲು ಕೊನೆಯ ಎರಡು ಶಸ್ತ್ರಚಿಕಿತ್ಸೆಗಳು 33 ಗಂಟೆಗಳ ಕಾಲ ನಡೆದಿದ್ದು 100 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇದಕ್ಕೆ ನೆರವಾಗಿದ್ದರು. ಸರ್ಜನ್ ವಾಸ್ತವದಲ್ಲಿ ಸೂಕ್ಷ್ಮವಾದ ಕಾರ್ಯವಿಧಾನವನ್ನು ಪ್ರಾರಂಭಿಸುವ ಮೊದಲು ವರ್ಚುವಲ್ ರಿಯಾಲಿಟಿನಲ್ಲಿ ವಿವಿಧ ತಂತ್ರಗಳನ್ನು ತಿಂಗಳುಗಳ ಕಾಲ ಅಭ್ಯಸಿಸಿದ್ದರು. ಇನ್ಸಿಟ್ಯೂಟೊ ಎಸ್ಟಾದುಲ್ ಡು ಸೆರೆಬ್ರೋ ನೇಮಿಯರ್​​ನಲ್ಲಿ(Instituto Estadual do Cerebro Paulo Niemeyer) ಮುಖ್ಯ ಸರ್ಜನ್  ಡಾ ಗೇಬ್ರಿಯಲ್ ಮುಫಾರೆಜ್ ಅವರು ಡಾ ಜೀಲಾನಿ ಅವರೊಂದಿಗೆ ಶಸ್ತ್ರಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಇಂಡಿಪೆಂಡೆಂಟ್ ಹೇಳಿದೆ. ಯುಕೆ ಮೂಲದ ಮಕ್ಕಳ ಸರ್ಜನ್ ಈ ಕಾರ್ಯಾಚರಣೆಯನ್ನು “ಗಮನಾರ್ಹ ಸಾಧನೆ” ಎಂದು ವಿವರಿಸಿದ್ದಾರೆ.

ಅವಳಿಗಳಿಗೆ ಸುಮಾರು ನಾಲ್ಕು ವರ್ಷ ವಯಸ್ಸಾಗಿರುವುದರಿಂದ, ಬೇರ್ಪಟ್ಟ ಮಿದುಳುಗಳನ್ನು ಹೊಂದಿರುವ  ಕ್ರಾನಿಯೊಪಾಗಸ್ ಅವಳಿಗಳು ಅವರು ಎಂದು ಇಂಡಿಪೆಂಡೆಂಟ್ ವರದಿಯಲ್ಲಿ ಹೇಳಿದೆ.

ಎರಡೂವರೆ ವರ್ಷಗಳ ಹಿಂದೆ ಈ ಅವಳಿಗಳ ಪೋಷಕರು ಬ್ರೆಜಿಲಿಯನ್ ಆಸ್ಪತ್ರೆಗೆ ಬಂದಿದ್ದರು ಎಂದು ಡಾ ಮುಫಾರೆಜ್ ಹೇಳಿರುವುದಾಗಿ ಯುಕೆ ಮೂಲದ ಮೆಟ್ರೋ ಉಲ್ಲೇಖಿಸಿದೆ. ಜೀಲಾನಿ ಸ್ಥಾಪಿಸಿದ ಚಾರಿಟಿ ಜೆಮಿನಿ ಅನ್​​​ಟ್ವಿನ್ಡ್ ಹುಡುಗರ ಪೋಷಕರಿಗೆ ಶಸ್ತ್ರಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡಿತು. ಬರ್ನಾರ್ಡೊ ಮತ್ತು ಆರ್ಥರ್ ಅವರನ್ನು ಬೇರ್ಪಡಿಸುವುದು ಇದುವರೆಗೆ ಪೂರ್ಣಗೊಂಡಿರುವ ಅತ್ಯಂತ ಸಂಕೀರ್ಣವಾದ ಪ್ರತ್ಯೇಕತೆಯ ಪ್ರಕ್ರಿಯೆಗಳಲ್ಲಿ ಒಂದಾಗಿದೆ ಎಂದು ಚಾರಿಟಿ ಹೇಳಿದೆ. ಇಬ್ಬರೂ ಬಾಲಕರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಜೆಮಿನಿ ಅನ್​​​ಟ್ವಿನ್ಡ್ ಅಂಕಿಅಂಶಗಳ ಪ್ರಕಾರ, 60,000 ಜನನಗಳಲ್ಲಿ ಒಂದು ಸಂಯೋಜಿತ ಅವಳಿಗಳಿಗೆ ಕಾರಣವಾಗುತ್ತದೆ ಮತ್ತು ಇವುಗಳಲ್ಲಿ ಕೇವಲ ಶೇ 5 ಮಕ್ಕಳು ಕ್ರಾನಿಯೊಪಾಗಸ್ ಆಗಿರುತ್ತಾರೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್