Ukraine Crisis | ಉಕ್ರೇನ್ (Russia Ukraine Crisis) ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಹೋರಾಟವನ್ನು ನಿಲ್ಲಿಸಿದರೆ, ರಷ್ಯಾ ಉಕ್ರೇನ್ನೊಂದಿಗೆ ಮಾತುಕತೆಗೆ ಸಿದ್ಧವಿದೆ ಎಂದು ರಷ್ಯಾದ (Russia) ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಹೇಳಿದ್ದಾರೆ. ಸಚಿವರ ಹೇಳಿಕೆಯನ್ನು ರಾಯಿಟರ್ಸ್ ವರದಿ ಮಾಡಿದೆ. ರಷ್ಯಾದ ಮಿಲಿಟರಿ ಪಡೆಗಳು ಉಕ್ರೇನ್ ರಾಜಧಾನಿ ಕೈವ್ನತ್ತ ಮುನ್ನಡೆಯುತ್ತಿರುವಾಗ ಈ ಹೇಳಿಕೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ಉಕ್ರೇನ್ ಅನ್ನು ಆಳಲು ‘ನವ-ನಾಜಿಗಳು’ ಬಯಸುವುದಿಲ್ಲ ಎಂದು ಲಾವ್ರೊವ್ ಹೇಳಿದರು. ಉಕ್ರೇನಿಯನ್ ಜನರು ಸ್ವತಂತ್ರವಾಗಿರಲು ಮತ್ತು ಅವರ ಹಣೆಬರಹವನ್ನು ಮುಕ್ತವಾಗಿ ವ್ಯಾಖ್ಯಾನಿಸಲು ರಷ್ಯಾ ಬಯಸುತ್ತದೆ ಎಂದು ಅವರು ಘೋಷಿಸಿದರು. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಜಿ ಸೋವಿಯತ್ ಸದಸ್ಯರ ತಟಸ್ಥ ಸ್ಥಿತಿಯನ್ನು ಚರ್ಚಿಸಲು ಸಿದ್ಧ ಎಂದು ಹೇಳಿದ ಹೇಳಿಕೆಯನ್ನು ಉಲ್ಲೇಖಿಸಿ ರಷ್ಯಾ ಸಚಿವರು, ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ರಷ್ಯಾದ ಆಕ್ರಮಣಶೀಲತೆಯ ನಡತೆಯ ಕುರಿತು ಪ್ರತಿಕ್ರಿಯೆಗಳು ಬರುತ್ತಿರುವಂತೆಯೇ, ಉಕ್ರೇನ್ನಲ್ಲಿ ಪ್ರಜಾಪ್ರಭುತ್ವವಿದೆ ಎಂದು ಹೇಳುವ ಯಾವುದೇ ಗುರುತು ಇಲ್ಲ ಎಂದು ಲಾವ್ರೊವ್ ಹೇಳಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್ ಮೇಲೆ ದಾಳಿಯನ್ನು ಘೋಷಿಸಿದ್ದರು. ಇದು ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ರಾಷ್ಟ್ರದ ಮೇಲೆ ನಡೆದ ಅತಿದೊಡ್ಡ ದಾಳಿ ಎಂದು ಹೇಳಲಾಗಿದೆ.
ಹೋರಾಟದ ಮೊದಲ ದಿನದಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 137 ಉಕ್ರೇನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಎರಡೂ ಇತರರ ಮಿಲಿಟರಿ ಪಡೆಗಳಲ್ಲಿ ದೊಡ್ಡ ನಷ್ಟವಾಗಿದೆ. ಯುದ್ಧವು ಇಂದು ಮತ್ತಷ್ಟು ಮುಂದುವರೆದಿದ್ದು, ಟ್ಯಾಂಕರ್ಗಳು ಮತ್ತು ಕ್ಷಿಪಣಿ ಲಾಂಚರ್‌ಗಳೊಂದಿಗೆ ರಷ್ಯಾದ ಭೂ ಪಡೆಗಳು ಉಕ್ರೇನ್ ರಾಜಧಾನಿ ಕೈವ್‌ಅನ್ನು ಸುತ್ತುವರೆಯುತ್ತಿವೆ ಎಂದು ವರದಿಗಳು ಹೇಳಿವೆ.
ಈ ಕುರಿತ ಎಎನ್ಐ ಟ್ವೀಟ್ ಇಲ್ಲಿದೆ:
We are ready for talks once Ukraine’s Army stops fighting, says Russian Foreign Minister Sergey Lavrov, reports Reuters
(file photo) pic.twitter.com/Vq4KjeWrNt
— ANI (@ANI) February 25, 2022
ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕ ವಿದ್ಯಾರ್ಥಿಗಳ ಮಾಹಿತಿಗೆ ವೆಬ್ ಪೋರ್ಟಲ್:
ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ಪೋರ್ಟಲ್ ಸ್ಥಾಪಿಸಿದೆ. ಉಕ್ರೇನ್ನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.
ವೆಬ್ಪೋರ್ಟಲ್ ಲಿಂಕ್: http://Ukraine.Karnataka.tech
ಇದನ್ನೂ ಓದಿ:
‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು
ಉಕ್ರೇನ್ನಲ್ಲಿ ಓದುತ್ತಿರುವ ಭಾರತೀಯ ಮಕ್ಕಳು ಬಂಕರ್ ನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಎದುರಾಗಿದೆ
Published On - 4:35 pm, Fri, 25 February 22