700 ಅಡಿ ಬಂಡೆಯಿಂದ ಬಿದ್ದ ಪರ್ವತಾರೋಹಿ: ಹೆಲಿಕಾಪ್ಟರ್ ಮೂಲಕ ರೋಚಕ ರಕ್ಷಣೆ

ಕ್ಯಾಲಿಫೋರ್ನಿಯಾದ ಪವರ್ ಡೋಮ್ ಬಂಡೆಯ ಮೇಲೆ 700 ಅಡಿ ಬಿದ್ದು ಗಾಯಗೊಂಡಿದ್ದ ಪರ್ವತಾರೋಹಿಯೊಬ್ಬರನ್ನು ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ರಕ್ಷಿಸಲಾಗಿದೆ. ಇದು ಕಡಿದಾದ ಪ್ರದೇಶದಲ್ಲಿ ನಡೆದ ರೋಮಾಂಚಕ ಪಾರುಗಾಣಿಕಾ ಕಾರ್ಯಾಚರಣೆಯಾಗಿತ್ತು. ಸಿಎಚ್‌ಪಿ ಮತ್ತು ಫ್ರೆಸ್ನೋ ಶೆರಿಫ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ವಿಶೇಷ ತಂತ್ರಜ್ಞಾನ ಬಳಸಿ ಗಾಯಾಳುವನ್ನು ಮೇಲಕ್ಕೆತ್ತಿದರು. ಈ ಸಾಹಸಮಯ ಕಾರ್ಯಾಚರಣೆಗೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ.

700 ಅಡಿ ಬಂಡೆಯಿಂದ ಬಿದ್ದ ಪರ್ವತಾರೋಹಿ: ಹೆಲಿಕಾಪ್ಟರ್ ಮೂಲಕ ರೋಚಕ ರಕ್ಷಣೆ
ಪರ್ವತಾರೋಹಿ
Image Credit source: NDTV

Updated on: Sep 16, 2026 | 8:04 AM

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 16: ಅಮೆರಿಕದ ಕ್ಯಾಲಿಫೋರ್ನಿಯಾದ ಫ್ರೆಸ್ನೋ ಕೌಂಟಿಯಲ್ಲಿ ಸುಮಾರು 700 ಅಡಿ ಎತ್ತರದ ಬೃಹತ್ ಕಡಿದಾದ ಗ್ರಾನೈಟ್ ಬಂಡೆಯಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದ ಪರ್ವತಾರೋಹಿಯೊಬ್ಬರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಸಿಯೆರಾ ನೆವಾಡಾ ಪರ್ವತ ಶ್ರೇಣಿಯ ‘ಪವರ್ ಡೋಮ್’ ಬಂಡೆಯ ಬಳಿ ಸಂಭವಿಸಿದ ಈ ಘಟನೆಯಲ್ಲಿ, ರಕ್ಷಣಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಆಕಾಶ ಮಾರ್ಗದ ಮೂಲಕ ಗಾಯಾಳುವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಯೆರಾ ನೆವಾಡಾ ಪರ್ವತ ಶ್ರೇಣಿಯ ಕೋರ್ಟ್‌ರೈಟ್ ಜಲಾಶಯದ ಸಮೀಪವಿರುವ ‘ಪವರ್ ಡೋಮ್’ ಎಂಬ ಕಡಿದಾದ ನೈಸರ್ಗಿಕ ಗ್ರಾನೈಟ್ ಬಂಡೆಯ ಮೇಲೆ ಪರ್ವತಾರೋಹಣ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ನೆಲಮಾರ್ಗವಾಗಿ ತಲುಪಲು ಅಸಾಧ್ಯವಾಗಿದ್ದ ಕಡಿದಾದ ಜಾಗಕ್ಕೆ ಪಾಸೊ ರೋಬಲ್ಸ್ ನೆಲೆದಿಂದ ‘ಎಚ್​-70’ ಹೆಲಿಕಾಪ್ಟರ್ ದೌಡಾಯಿಸಿತು. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಹಾಗೂ ಫ್ಲೈಟ್ ಆಫೀಸರ್, ಪ್ಯಾರಾಮೆಡಿಕ್ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾದರು. ಕ್ಯಾಲಿಫೋರ್ನಿಯಾ ಹೆದ್ದಾರಿ ಪೆಟ್ರೋಲ್ ಮತ್ತು ಫ್ರೆಸ್ನೋ ಕೌಂಟಿ ಶೆರಿಫ್ ಕಚೇರಿಯ ಹೆಲಿಕಾಪ್ಟರ್ ಪಾರುಗಾಣಿಕಾ ತಂತ್ರಜ್ಞರು (HRT) ಜಂಟಿಯಾಗಿ ಕೇಬಲ್ ಹಗ್ಗದ ಸಹಾಯದಿಂದ ಗಾಯಾಳುವನ್ನು ಯಶಸ್ವಿಯಾಗಿ ಮೇಲೆತ್ತಿದರು.

ಆಸ್ಪತ್ರೆಗೆ ದಾಖಲು: ಬಂಡೆಯಿಂದ ಮೇಲಕ್ಕೆತ್ತಿದ ತಕ್ಷಣ ಪರ್ವತಾರೋಹಿಯನ್ನು ಕೆಳಗೆ ಕಾಯುತ್ತಿದ್ದ ತುರ್ತು ಆಂಬ್ಯುಲೆನ್ಸ್‌ಗೆ ಹಸ್ತಾಂತರಿಸಲಾಯಿತು. ಅವರ ಗುರುತು ಹಾಗೂ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಅಧಿಕಾರಿಗಳು ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದಾರೆ.

ಮತ್ತಷ್ಟು ಓದಿ:Video: ಮಗನ ಜತೆಗೆ ಹೆತ್ತವರ ಮೊದಲ ವಿಮಾನ ಪ್ರಯಾಣ, ವೈರಲ್ ಆಯ್ತು ದೃಶ್ಯ

ಪವರ್ ಡೋಮ್ ನೈಸರ್ಗಿಕ ಸವಾಲು: ಕೋರ್ಟ್‌ರೈಟ್ ಪ್ರದೇಶದಲ್ಲಿರುವ ಪವರ್ ಡೋಮ್ ಬಂಡೆಗಳು ನುಣುಪಾದ ಗ್ರಾನೈಟ್ ಮೇಲ್ಮೈಯನ್ನು ಹೊಂದಿದ್ದು, ಜಗತ್ತಿನ ಸಾಹಸಿ ಪರ್ವತಾರೋಹಿಗಳನ್ನು ಆಕರ್ಷಿಸುತ್ತವೆ. ಆದರೆ ಸ್ವಲ್ಪ ಕಾಲು ಜಾರಿದರೂ ನೂರಾರು ಅಡಿ ಆಳಕ್ಕೆ ಬೀಳುವ ಅಪಾಯವಿರುವುದರಿಂದ ಇಲ್ಲಿ ಪಾರುಗಾಣಿಕಾ ಕಾರ್ಯಾಚರಣೆ ನಡೆಸುವುದು ಪೈಲಟ್‌ಗಳಿಗೆ ತೀವ್ರ ಸವಾಲಿನ ಕೆಲಸವಾಗಿರುತ್ತದೆ.

ವಿಡಿಯೋ

ಹೆಲಿಕಾಪ್ಟರ್ ಗಾಳಿಯಲ್ಲೇ ಸಮತೋಲನ ಕಾಯ್ದುಕೊಂಡು, ಹಗ್ಗದ ಮೂಲಕ ಗಾಯಾಳು ಟ್ರೆಕ್ಕರ್‌ನನ್ನು ಸುರಕ್ಷಿತವಾಗಿ ಮೇಲಕ್ಕೆಳೆದುಕೊಳ್ಳುವ ರೋಮಾಂಚಕ ವಿಡಿಯೋವನ್ನು ಸಿಎಚ್‌ಪಿ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ರಕ್ಷಣಾ ತಂಡದ ಕೌಶಲ್ಯಕ್ಕೆ ಜಗತ್ತಿನಾದ್ಯಂತ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us