ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಫೋಟ; 4 ಮಂದಿ ಸಾವು, ಹಲವರಿಗೆ ಗಾಯ
ಆರಂಭಿಕ ವರದಿಗಳ ಪ್ರಕಾರ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ರಕ್ಷಣಾ ಮತ್ತು ಭದ್ರತಾ ಏಜೆನ್ಸಿಗಳು ಸ್ಥಳವನ್ನು ತಲುಪಿದರು. ಪ್ರದೇಶಗಳನ್ನು ಸುತ್ತುವರೆದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಕರಾಚಿ: ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ(University of Karachi) ಸಂಭವಿಸಿದ ವ್ಯಾನ್ ಸ್ಫೋಟದಲ್ಲಿ (Blast) ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ಮಂಗಳವಾರ ವರದಿ ಮಾಡಿದೆ. ಸಾವಿಗೀಡಾದವರಲ್ಲಿ ಮೂವರು ಚೀನಾದವರು ವರದಿಗಳ ಪ್ರಕಾರ, ಈ ಘಟನೆಯು ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ (Confucius Institute)ಬಳಿ ಸಂಭವಿಸಿದೆ. ಆರಂಭಿಕ ವರದಿಗಳ ಪ್ರಕಾರ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ರಕ್ಷಣಾ ಮತ್ತು ಭದ್ರತಾ ಏಜೆನ್ಸಿಗಳು ಸ್ಥಳವನ್ನು ತಲುಪಿದರು. ಪ್ರದೇಶಗಳನ್ನು ಸುತ್ತುವರೆದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ವ್ಯಾನ್‌ನಲ್ಲಿ ಏಳರಿಂದ ಎಂಟು ಜನರಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಸಾವುನೋವುಗಳ ನಿಖರವಾದ ಸಂಖ್ಯೆಯನ್ನು ಇನ್ನೂ ವರದಿ ಮಾಡಬೇಕಾಗಿದೆ. ಸ್ಫೋಟವು ಗ್ಯಾಸ್ ಸಿಲಿಂಡರ್‌ನಿಂದ ಉಂಟಾಯಿತು ಎಂದು ಆರಂಭದಲ್ಲಿ ವರದಿಯಾಗಿದೆ. ಆದಾಗ್ಯೂ, ಸ್ಫೋಟದ ಸ್ವರೂಪದ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಸಾವಿಗೀಡಾದವರು ಕರಾಚಿ ವಿಶ್ವವಿದ್ಯಾನಿಲಯದ ಚೀನೀ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ನಿಂದ ಹಿಂದಿರುಗುತ್ತಿದ್ದವರು ಎಂದು ಎಂದು ಮೂಲಗಳು ಹೇಳಿವೆ.
Breaking: Car blast in Karachi university.. Apparently Chinese nationals were target several feared dead.. pic.twitter.com/6ZwKyJQbfL
— Waseem Abbasi (@Wabbasi007) April 26, 2022
ಕರಾಚಿ ವಿಶ್ವವಿದ್ಯಾನಿಲಯದ ಚೀನೀ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ವ್ಯಾನ್‌ನಲ್ಲಿ ಮಧ್ಯಾಹ್ನ 1:52 ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ, ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶಗಳನ್ನು ಸುತ್ತುವರೆದಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಮೃತ ಚೀನಿ ಪ್ರಜೆಗಳನ್ನು ಕನ್‌ಫ್ಯೂಷಿಯಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಹುವಾಂಗ್ ಗೈಪಿಂಗ್, ಡಿಂಗ್ ಮುಪೆಂಗ್, ಚೆನ್ ಸಾಯಿ ಮತ್ತು ಅವರ ಪಾಕಿಸ್ತಾನಿ ಚಾಲಕ ಖಾಲಿದ್ ಎಂದು ಗುರುತಿಸಲಾಗಿದೆ. ವ್ಯಾನ್‌ನಲ್ಲಿ ಏಳರಿಂದ ಎಂಟು ಜನರಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದಾಗ್ಯೂ, ಸಾವುನೋವುಗಳ ನಿಖರವಾದ ಸಂಖ್ಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ವ್ಯಾನ್ ಮಸ್ಕಾನ್ ಗೇಟ್ ಮೂಲಕ ಆವರಣವನ್ನು ಪ್ರವೇಶಿಸಿತು ಎಂದು ಅವರು ಹೇಳಿದರು.
ಗಾಯಗೊಂಡವರಲ್ಲಿ ಇಬ್ಬರನ್ನು ಚೀನಾದ ಪ್ರಜೆ ವಾಂಗ್ ಯುಕಿಂಗ್ ಮತ್ತು ಹಮೀದ್ ಎಂಬ ಗಾರ್ಡ್ ಎಂದು ಗುರುತಿಸಲಾಗಿದೆ. ಈ ಮಧ್ಯೆ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವಾರು ರೇಂಜರ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ವ್ಯಾನ್ ಸ್ಫೋಟಗೊಂಡ ಸ್ಥಳವಾದ ಇಲಾಖೆಯ ಕಡೆಗೆ ಇಬ್ಬರು ವಿದೇಶಿಗರು ಅತಿಥಿ ಗೃಹದಿಂದ ಹೋಗುತ್ತಿದ್ದರು ಎಂದು ಅಲ್ಲಿದ್ದವರು ಜಿಯೋ ನ್ಯೂಸ್‌ಗೆ ತಿಳಿಸಿದ್ದಾರೆ.
ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಪೂರ್ವ ಉಪ ಪೊಲೀಸ್ ಮಹಾನಿರೀಕ್ಷಕ (ಡಿಐಜಿ) ಮುಕದ್ದಾಸ್ ಹೈದರ್ ಪತ್ರಕರ್ತರಿಗೆ ತಿಳಿಸಿದರು. ಏತನ್ಮಧ್ಯೆ, ಸ್ಫೋಟವು ಭಯೋತ್ಪಾದಕ ಕೃತ್ಯವೇ ಅಥವಾ ಅಪಘಾತವೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಗುಲ್ಶನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ತಿಳಿಸಿದ್ದಾರೆ. ಎಸ್‌ಪಿ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿದ್ದು, ಮೃತರು ಮತ್ತು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Prashant Kishor ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್
Published On - 3:55 pm, Tue, 26 April 22