AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ, ಚೀನಾ ಏಷ್ಯಾದ ಡಬಲ್ ಎಂಜಿನ್‌ಗಳು; ಟ್ರಂಪ್ ಸುಂಕದ ವಿರುದ್ಧ ಭಾರತಕ್ಕೆ ಬೀಜಿಂಗ್ ಬೆಂಬಲ

ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣ ನೀಡಿ ಅಮೆರಿಕ ಭಾರತದ ಮೇಲೆ ಶೇ. 50ರಷ್ಟು ವ್ಯಾಪಾರ ಸುಂಕ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿನ ಚೀನಾ ರಾಯಭಾರಿ ಕ್ಸು ಫೀಹಾಂಗ್, ಅಮೆರಿಕ ಭಾರತದ ಮೇಲೆ ಶೇ. 50ರವರೆಗೆ ಸುಂಕಗಳನ್ನು ವಿಧಿಸಿ, ಇನ್ನೂ ಹೆಚ್ಚಿನ ಸುಖ ವಿಧಿಸುವ ಬೆದರಿಕೆ ಹಾಕಿರುವುದನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಭಾರತ, ಚೀನಾ ಏಷ್ಯಾದ ಡಬಲ್ ಎಂಜಿನ್‌ಗಳು; ಟ್ರಂಪ್ ಸುಂಕದ ವಿರುದ್ಧ ಭಾರತಕ್ಕೆ ಬೀಜಿಂಗ್ ಬೆಂಬಲ
Modi With China President
ಸುಷ್ಮಾ ಚಕ್ರೆ
|

Updated on: Aug 21, 2025 | 9:50 PM

Share

ನವದೆಹಲಿ, ಆಗಸ್ಟ್ 21: ಭಾರತ ಮತ್ತು ಚೀನಾದ ನಡುವಿನ ಸಂಬಂಧ ಇತ್ತೀಚೆಗೆ ಕೊಂಚ ಸುಧಾರಿಸುತ್ತಿದೆ. ಇದೀಗ ಭಾರತದ ವಿರುದ್ಧ ಅಮೆರಿಕ (US Tariff)  ಹೇರಿರುವ ಹೆಚ್ಚುವರಿ ಸುಂಕವನ್ನು ವಿರೋಧಿಸುವ ಮೂಲಕ ಚೀನಾ ಭಾರತಕ್ಕೆ ಬಹಿರಂಗವಾಗಿ ಬೆಂಬಲ ನೀಡಿದೆ. ಅಮೆರಿಕದ ಜೊತೆ ಉತ್ತಮ ಸಂಬಂಧ ಹೊಂದಿಲ್ಲದ ಚೀನಾ ಈ ವಿಷಯದಲ್ಲಿ ಭಾರತದ ಪರ ಬ್ಯಾಟಿಂಗ್ ಮಾಡಿದೆ. ಭಾರತದ ಮೇಲೆ ಶೇ. 50ರಷ್ಟು ವ್ಯಾಪಾರ ಸುಂಕ ವಿಧಿಸಿರುವ ಟ್ರಂಪ್ ನಿರ್ಧಾರವನ್ನು ಟೀಕಿಸಿರುವ ಭಾರತದಲ್ಲಿನ ಚೀನಾ ರಾಯಭಾರಿ ಕ್ಸು ಪೀಹಾಂಗ್ “ನಮ್ಮ ಮೌನವು ಗೂಂಡಾಗಿರಿಗೆ ಧೈರ್ಯ ತುಂಬುತ್ತದೆ. ಚೀನಾ ಭಾರತದೊಂದಿಗೆ ದೃಢವಾಗಿ ನಿಲ್ಲುತ್ತದೆ. ಭಾರತ ಮತ್ತು ಚೀನಾ ಎರಡೂ ಏಷ್ಯಾದ ಡಬಲ್ ಎಂಜಿನ್​ಗಳು” ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಸಹಕಾರವು ಎರಡೂ ದೇಶಗಳ ಅಭಿವೃದ್ಧಿಗೆ ಮಾತ್ರವಲ್ಲದೆ ಜಾಗತಿಕ ಸ್ಥಿರತೆಗೂ ಅತ್ಯಗತ್ಯ ಎಂದು ಚೀನಾ ರಾಯಭಾರಿ ಹೇಳಿದ್ದಾರೆ. “ಇಷ್ಟು ದೊಡ್ಡದಾದ ಎರಡು ನೆರೆಯ ರಾಷ್ಟ್ರಗಳಿಗೆ ಏಕತೆ ಮತ್ತು ಸಹಕಾರವು ಸಾಮಾನ್ಯ ಅಭಿವೃದ್ಧಿಯನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ. ನಾವೆರಡೂ ದೇಶಗಳು ಏಷ್ಯಾದಲ್ಲಿ ಆರ್ಥಿಕ ಬೆಳವಣಿಗೆಯ ಡಬಲ್ ಎಂಜಿನ್‌ಗಳು. ಭಾರತ ಮತ್ತು ಚೀನಾದ ಏಕತೆಯು ಜಗತ್ತಿಗೆ ದೊಡ್ಡ ಪ್ರಯೋಜನವನ್ನು ನೀಡುತ್ತದೆ”ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರಂಪ್ ಸುಂಕ ವಿವಾದದ ನಡುವೆ ಪ್ರಧಾನಿ ಮೋದಿಯನ್ನು ಭೇಟಿಯಾದ ಚೀನಾದ ವಿದೇಶಾಂಗ ಸಚಿವ, ಮೊದಲಿನಂತಾಗುತ್ತಾ ಉಭಯ ದೇಶಗಳ ಸಂಬಂಧ?

“ಮುಕ್ತ ವ್ಯಾಪಾರದಿಂದ ಅಮೆರಿಕ ದೀರ್ಘಕಾಲದಿಂದ ಲಾಭ ಪಡೆದಿದೆ. ಆದರೆ ಈಗ ಸುಂಕಗಳನ್ನು ಚೌಕಾಶಿ ಸಾಧನಗಳಾಗಿ ಪರಿಗಣಿಸುತ್ತಿದೆ” ಎಂದು ಕ್ಸು ಫೀಹಾಂಗ್ ಟೀಕಿಸಿದ್ದಾರೆ. “ಅಮೆರಿಕ ಭಾರತದ ಮೇಲೆ ಶೇ. 50ರವರೆಗೆ ಸುಂಕಗಳನ್ನು ವಿಧಿಸಿದೆ. ನಾವು ಮೌನವಾಗಿರುವುದು ಬೆದರಿಸುವವರಿಗೆ ಧೈರ್ಯವನ್ನು ತುಂಬುತ್ತದೆ. ಇದು ಅವರ ಗೂಂಡಾಗಿರಿಯನ್ನು ಹೆಚ್ಚಿಸುತ್ತದೆ. ಚೀನಾ ಭಾರತದೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತದೊಂದಿಗೆ ಸುಂಕ ಯುದ್ಧ, ಟ್ರಂಪ್ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದ ಅಮೆರಿಕ ಅರ್ಥಶಾಸ್ತ್ರಜ್ಞ

“ಚೀನಾದ ಮಾರುಕಟ್ಟೆಗೆ ಹೆಚ್ಚಿನ ಭಾರತೀಯ ಸರಕುಗಳನ್ನು ಪ್ರವೇಶಿಸಲು ನಾವು ಸ್ವಾಗತಿಸುತ್ತೇವೆ. ಭಾರತವು ಐಟಿ, ಸಾಫ್ಟ್‌ವೇರ್ ಮತ್ತು ಬಯೋಮೆಡಿಸಿನ್‌ನಲ್ಲಿ ಬಹಳ ಮುಂದಿದೆ. ಆದರೆ ಚೀನಿಯರು ಎಲೆಕ್ಟ್ರಾನಿಕ್ ಉತ್ಪಾದನೆ, ಮೂಲಸೌಕರ್ಯ ನಿರ್ಮಾಣ ಮತ್ತು ಹೊಸ ಇಂಧನ ಕ್ಷೇತ್ರಗಳಲ್ಲಿ ತ್ವರಿತ ವಿಸ್ತರಣೆಯನ್ನು ನೋಡುತ್ತಿದ್ದಾರೆ” ಎಂದು ಫೀಹಾಂಗ್ ಹೇಳಿದ್ದಾರೆ. ಚೀನಾ ಮತ್ತು ಭಾರತದ ನಡುವಿನ ಕಾರ್ಯತಂತ್ರದ ನಂಬಿಕೆ ಮತ್ತು ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಕ್ಸು ಫೀಹಾಂಗ್ ಒತ್ತಿ ಹೇಳಿದರು. ಹಾಗೇ, ಎರಡೂ ದೇಶಗಳು ಪ್ರತಿಸ್ಪರ್ಧಿಗಳಲ್ಲ; ಪಾಲುದಾರರು. ಏನೇ ಸಮಸ್ಯೆಯಿದ್ದರೂ ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಚೀನಾ ಪವಿತ್ರ ಪರ್ವತ ಮತ್ತು ಸರೋವರಕ್ಕೆ ಭಾರತೀಯ ಯಾತ್ರಿಕರ ಭೇಟಿಯನ್ನು ಪುನರಾರಂಭಿಸಿದೆ. ಭಾರತವು ಚೀನೀ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸಿದೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್