ಅತಿದೊಡ್ಡ ಮೊತ್ತ! ಚೀನಾದ ಯುವ ವ್ಯಾಪಾರಿ ಗೆದ್ದೇ ಬಿಟ್ಟ 795 ಕೋಟಿ ರೂ ಲಾಟರಿ

China lottery jackpot : ಚೀನಾದ ಯುವ ಉದ್ಯಮಿ $96 ಮಿಲಿಯನ್ ಅಂದರೆ 795 ಕೋಟಿ ರೂ ಲಾಟರಿಯನ್ನು ಗೆದ್ದಿದ್ದಾರೆ. ಇದುವರೆಗಿನ ದೇಶದ ಅತಿದೊಡ್ಡ ಲಾಟರಿ ಇದಾಗಿದೆ. ಆದರೆ, ಲಾಟರಿ ನಡೆಸಿದ ಲಾಟರಿ ಪೂಲ್ ಕಂಪನಿಯು ವಿಜೇತನ ಗುರುತನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ವಾಡಿಕೆಯಂತೆ, ಬಹುಮಾನ ವಿಜೇತರಿಗೆ 680 ಮಿಲಿಯನ್ ಯುವಾನ್ (USD 96 ಮಿಲಿಯನ್) ಅತಿದೊಡ್ಡ ಮೊತ್ತವನ್ನು ಸ್ವೀಕರಿಸಲು ಆ ಯುವಕ ಅರ್ಹತೆ ಪಡೆದಿದ್ದಾನೆ ಎಂದು ತಿಳಿಸಿದೆ.

ಅತಿದೊಡ್ಡ ಮೊತ್ತ! ಚೀನಾದ ಯುವ ವ್ಯಾಪಾರಿ ಗೆದ್ದೇ ಬಿಟ್ಟ 795 ಕೋಟಿ ರೂ ಲಾಟರಿ
ಚೀನಾದ ಯುವ ವ್ಯಾಪಾರಿ ಗೆದ್ದೇ ಬಿಟ್ಟ 795 ಕೋಟಿ ರೂ ಲಾಟರಿ
Follow us
ಸಾಧು ಶ್ರೀನಾಥ್​
|

Updated on: Feb 22, 2024 | 12:21 PM

ಚೀನಾದಲ್ಲಿ (China) 28 ವರ್ಷ ವಯಸ್ಸಿನ ಯುವಕನೊಬ್ಬ 680 ಮಿಲಿಯನ್ ಯುವಾನ್ yuan (USD 96 ಮಿಲಿಯನ್ -795 ಕೋಟಿ ರೂ) ಲಾಟರಿ ಜಾಕ್‌ಪಾಟ್ (lottery jackpot) ಅನ್ನು ಗೆದ್ದಿದ್ದಾನೆ. ಇದು ಇಲ್ಲಿಯವರೆಗೆ ದೇಶದಲ್ಲಿ ನಡೆದಿರುವ ಅತಿ ದೊಡ್ಡ ಮೊತ್ತದ ಲಾಟರಿ ಆಗಿದೆ. ವಿಜೇತ ಯುವ ವ್ಯಾಪಾರಿ ನೈಋತ್ಯ ಚೀನಾದ ಗೈಝೌ ಪ್ರಾಂತ್ಯದವರು (Guizhou province in southwestern China) ಎಂದು ಸರ್ಕಾರಿ ಬೆಂಬಲಿತ ಸಂಘಟಕ ಚೀನಾ ವೆಲ್ಫೇರ್ ಲಾಟರಿಯ ವೆಬ್‌ಸೈಟ್‌ನಲ್ಲಿ (website) ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ವಿಜಯೀ ಯುವಕ ತಲಾ ಎರಡು ಯುವಾನ್ (USD 28 ಸೆಂಟ್ಸ್) ನಲ್ಲಿ 133 ಟಿಕೆಟ್‌ಗಳನ್ನು ಖರೀದಿಸಿದ್ದ, ಪ್ರತಿ ಬಾರಿಯೂ ಏಳು ಸಂಖ್ಯೆಗಳ ಒಂದೇ ಗುಂಪಿನ ಸಂಖ್ಯೆಯ ಮೇಲೆ ಆತ ಬೆಟ್ಟಿಂಗ್ ಮಾಡುತ್ತಿದ್ದ. ಈಗ ಪ್ರತಿಯೊಂದು ಟಿಕೆಟ್‌ಗೂ 5.16 ಮಿಲಿಯನ್ ಯುವಾನ್ (USD 725,000) ಬಹುಮಾನವನ್ನು ಗೆದ್ದಿದ್ದಾನೆ ಎಂದು ಸ್ಥಳೀಯ ಸರ್ಕಾರಿ ದೂರದರ್ಶನ ಕೇಂದ್ರ ವರದಿ ಮಾಡಿದೆ.

ಅಪರಿಚಿತ ಯುವಕ ಜಾಕ್‌ಪಾಟ್ ವಿಜೇತ ತಾನು ಎಂದು ತಿಳಿದಾಗಿನಿಂದ ಆತ ತುಂಬಾ ಉತ್ಸುಕನಾಗಿದ್ದಾನೆ, ಆತನಿಗೆ ನಿದ್ರೆ ಬಂದಿಲ್ಲ ಎಂದು ವರದಿಯಾಗಿದೆ. ಮೊದಲಿಗೆ ನಾನು ಅದನ್ನು ನಂಬಲಿಲ್ಲ, ಆದ್ದರಿಂದ ಹಲವಾರು ಬಾರಿ ನಾನು ಅದನ್ನು ಪರಿಶೀಲಿಸಿದೆ. ನಾನು ನಿದ್ದೆ ಬಿಟ್ಟು ತುಂಬಾ ಥ್ರಿಲ್ ಆಗಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ. ಫೆಬ್ರವರಿ 7 ರಂದು ವಿಜೇತ ಯುವಕ ಬಹುಮಾನದ ಹಣವನ್ನು ತೆಗೆದುಕೊಳ್ಳಲು ಬಂದಿದ್ದ ಎಂದು ಪ್ರಾಂತೀಯ ಕಲ್ಯಾಣ ಲಾಟರಿ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.

ವೈಯಕ್ತಿಕ ಆದಾಯ ತೆರಿಗೆ ಕಾನೂನು ನಿಯಮಗಳ ಪ್ರಕಾರ, ಅವರು ತಮ್ಮ ಲಾಟರಿ ಆದಾಯದ ಐದನೇ ಒಂದು ಭಾಗವನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ ಎಂದು ವರದಿ ಹೇಳಿದೆ. ಅನ್ಶುನ್ ನಗರದಲ್ಲಿ ಸಣ್ಣ ವ್ಯಾಪಾರವನ್ನು ಹೊಂದಿರುವ ವ್ಯಕ್ತಿ, ಮರುದಿನ ಮುಂಜಾನೆ ತನ್ನ ಬಹುಮಾನ ವಿಜೇತ ಚೆಕ್ ಅನ್ನು ಸಂಗ್ರಹಿಸಲು ಗೈಝೌ ಪ್ರಾಂತ್ಯದ ರಾಜಧಾನಿಯಾದ ಗುಯಾಂಗ್‌ಗೆ ತೆರಳಿದರು. ಹಿಂದಿನ ವಿಜೇತ ಟಿಕೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಂಖ್ಯೆಗಳ ಪ್ರವೃತ್ತಿಯನ್ನು ನಾನು ಸಂಶೋಧಿಸುತ್ತಿದ್ದೇನೆ. ನಾನು ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿಕೊಂಡೆ ಮತ್ತು ಬಾಜಿ ಕಟ್ಟಲು ನನ್ನದೇ ಆದ ಅದೃಷ್ಟ ಸಂಖ್ಯೆಗಳಲ್ಲಿ ಒಂದನ್ನು ಸೇರಿಸಿದೆ ಎಂದು ಅವರು ಹೇಳಿದರು.

ನಾನು ಈ ಅಂಕಿ ಅಂಶಗಳ ಮೇಲೆ ದೀರ್ಘಕಾಲ ಬಾಜಿ ಕಟ್ಟಿದ್ದೇನೆ. ಚಳಿಗಾಲದ ಹಬ್ಬದ ರಜಾದಿನಗಳಲ್ಲಿ ನಾನು ನನ್ನ ಕುಟುಂಬದೊಂದಿಗೆ ಈ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

Also Read: Gold mine collapse video – ಭಯಾನಕ ದೃಶ್ಯಗಳು… ಚಿನ್ನದ ಆಸೆಗಾಗಿ ಗಣಿ ತೋಡುವಾಗ ಗುಡ್ಡ ಕುಸಿದು 30 ಮಂದಿ ಸಾವು!

ಅವರ 680 ಮಿಲಿಯನ್ ಯುವಾನ್‌ನ ಲಾಟರಿ ಗೆಲುವು ಚೀನಾದ ಹಿಂದಿನ ದಾಖಲೆಯಾದ 570 ಮಿಲಿಯನ್ ಯುವಾನ್ (USD 81 ಮಿಲಿಯನ್) ಅನ್ನು ಮೀರಿದೆ, 2012 ರಲ್ಲಿ ಬೀಜಿಂಗ್‌ನಲ್ಲಿ ವಾಸಿಸುವ ವ್ಯಕ್ತಿ ಗೆದ್ದಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಪೂರ್ವ ಜಿಯಾಂಗ್‌ಕ್ಸಿ ಪ್ರಾಂತ್ಯದ ವ್ಯಕ್ತಿಯೊಬ್ಬರು ಲಾಟರಿ ಟಿಕೆಟ್‌ಗಳನ್ನು ಖರೀದಿಸಲು 100,000 ಯುವಾನ್‌ಗಳನ್ನು ಖರ್ಚು ಮಾಡಿದರು ಮತ್ತು 200 ಮಿಲಿಯನ್ ಯುವಾನ್ ಬಹುಮಾನವನ್ನು ಗಳಿಸಿದರು.

ಗುವಾಂಗ್ಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು 2022 ರಲ್ಲಿ 218 ಮಿಲಿಯನ್ ಯುವಾನ್ (USD 40 ಮಿಲಿಯನ್) ಗೆದ್ದ ನಂತರ ಟೀಕೆಗೆ ಗುರಿಯಾದರು. ಏಕೆಂದರೆ ಆತ ತನ್ನ ಹೆಂಡತಿ ಅಥವಾ ಮಕ್ಕಳಿಗೆ ಲಾಟರಿ ಗೆಲುವಿನ ಬಗ್ಗೆ ಹೇಳದಿರಲು ನಿರ್ಧರಿಸಿಬಿಟ್ಟ. ಏಕೆಂದರೆ ಅವರು ಹೊಟ್ಟೆಕಿಚ್ಚು ಪಡುತ್ತಾರೆ ಮತ್ತು ಮುಂದೆ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಆತ ಭಾವಿಸಿದ್ದ ಎಂದು ಪೋಸ್ಟ್ ವರದಿ ಹೇಳಿದೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?