Conspiracy Theory: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ

Mike Benz Interview to Tucker Carlsen: ಸೋಷಿಯಲ್ ಮೀಡಿಯಾ ಕಂಪನಿಗಳು ಅಮೆರಿಕನ್ ಮಿಲಿಟರಿಯ ಕೈಗೊಂಬೆಗಳಾಗಿವೆ ಎಂದು ಮಾಜಿ ಗೃಹ ಇಲಾಖೆ ಅಧಿಕಾರಿ ಮೈಕ್ ಬೆಂಜ್ ಆರೋಪಿಸಿದ್ದಾರೆ. ಫ್ರೀ ಸ್ಪೀಚ್ ಹೆಸರಿನಲ್ಲಿ ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯ ಕಸಿಯಲಾಗುತ್ತಿದೆ ಎಂದೂ ಟಕರ್ ಕಾರ್ಲ್ಸನ್​ಗೆ ನೀಡಿದ ಸಂದರ್ಸನದಲ್ಲಿ ಬೆಂಜ್ ಹೇಳಿದ್ದಾರೆ. ಫೇಸ್​ಬುಕ್, ಟ್ವಿಟ್ಟರ್​ಗಳನ್ನು ಬಳಸಿ ಇರಾನ್, ಈಜಿಪ್ಟ್ ಮೊದಲಾದ ಕಡೆ ಜನಕ್ರಾಂತಿ ಸೃಷ್ಟಿಸಿ ಸರ್ಕಾರಗಳನ್ನು ಕೆಡವುವ ಪ್ರಯತ್ನಗಳಾಗಿದ್ದವಂತೆ.

Conspiracy Theory: ಅಮೆರಿಕದ ‘ದರ್ಪ’ ಶಕ್ತಿ; ಬೇಡದ ಸರ್ಕಾರಗಳ ಉರುಳಿಸಲು ಹೊಸ ಮೀಡಿಯಾ ಅಸ್ತ್ರಗಳು; ಮಾಜಿ ಅಧಿಕಾರಿ ಸ್ಫೋಟಕ ಮಾಹಿತಿ
ಅಮೆರಿಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 22, 2024 | 2:21 PM

ವಾಷಿಂಗ್ಟನ್, ಫೆಬ್ರುವರಿ 22: ಯಾವುದಾದರೂ ಒಂದು ಪ್ರಮುಖ ಜಾಗತಿಕ ವಿದ್ಯಮಾನ ನಡೆದರೆ, ಅದು ನಾವು ಕಂಡಂತಿರುವುದಿಲ್ಲ. ಇನ್ಯಾವುದೋ ಘಟನೆ, ಅಥವಾ ಸಂಚಿನ ಫಲಶ್ರುತಿಯಾಗಿರಬಹುದು. ಅದರಲ್ಲೂ ಜಾಗತಿಕ ರಾಜಕೀಯ ಘಟನೆಗಳು (geopolitical incidents) ಇಂಥವೇ ಸಂಚುಗಳ ಭಾಗವೇ ಆಗಿರುತ್ತವೆ. ಇಂಥ ಕಾನ್ಸ್​ಪಿರಸಿ ಥಿಯರಿಗಳನ್ನು ಸಾಕಷ್ಟು ಕೇಳಿರುತ್ತೇವೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರ ಮೊದಲಾದವರ ದುರ್ಮರಣದ ಸುತ್ತ ಇಂಥವೇ ಸಂಚಿನ ಕಥೆಗಳನ್ನು ಕೇಳಬಹುದು. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಅಮೆರಿಕ ಮತ್ತು ರಷ್ಯಾ ನಡುವೆ ಕೆಲ ದಶಕಗಳ ಕಾಲ ನಡೆದ ಶೀತಲ ಸಮರದಲ್ಲಿ ಇಂಥ ಬಹಳಷ್ಟು ಸಂಚು ಕಥೆಗಳು ಓಡಾಡಿದ್ದವು. ಈಗಲೂ ಕೂಡ ಇವು ನಿಂತಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಮೈಕ್ ಬೆಂಜ್ (Mike Benz) ಎಂಬ ಮಾಜಿ ಗೃಹ ಇಲಾಖೆ ಅಧಿಕಾರಿ ಸದ್ದು ಮಾಡುತ್ತಿದ್ದಾರೆ. ಫ್ರೀ ಸ್ಪೀಚ್ ಹೆಸರಿನಲ್ಲಿ ಅಮೆರಿಕ ಸರ್ಕಾರವೇ ವಾಕ್​ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ. ಟಕರ್ ಕಾರ್ಲ್ಸನ್ (Tucker Carlsen) ಎಂಬ ಅಮೆರಿಕನ್ ಪತ್ರಕರ್ತರಿಗೆ ಮೊನ್ನೆ ಮೊನ್ನೆ ನೀಡಿದ ಸಂದರ್ಶನದಲ್ಲಿ ಮೈಕ್ ಬೆಂಜ್ ಬಹಳಷ್ಟು ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

ಸೋಷಿಯಲ್ ಮೀಡಿಯಾ ಕಂಪನಿಗಳು ಹೇಗೆ ಅಮೆರಿಕನ್ ಮಿಲಿಟರಿಯ ಕೈಗೊಂಬೆಗಳಾಗಿವೆ ಅಥವಾ ಅಸ್ತ್ರಗಳಾಗಿವೆ ಎಂಬುದನ್ನು ಅವರು ವಿವಿಧ ನಿದರ್ಶನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಫೇಸ್​ಬುಕ್, ಟ್ವಿಟ್ಟರ್​ನಲ್ಲಿ ಹರಿದುಬರುವ ಟ್ರೆಂಡಿಂಗ್ ಅನ್ನು ಬಳಸಿ ತಮಗೆ ಎದುರುಬಿದ್ದ ಸರ್ಕಾರಗಳನ್ನು ಉರುಳಿಸಲು ಹೇಗೆಲ್ಲಾ ಬಳಸಲಾಗುತ್ತಿದೆ ಎಂಬುದನ್ನು ಮೈಕ್ ಬೆಂಜ್ ವಿವರಿಸಿದ್ದಾರೆ.

ಇದನ್ನೂ ಓದಿ: ಏರ್ ಫೋರ್ಸ್ ಒನ್ ಹತ್ತುವಾಗ ಎರಡು ಬಾರಿ ಮುಗ್ಗರಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಅಮೆರಿಕದ DARPA ಪ್ರಾಜೆಕ್ಟ್

ಮೈಕ್ ಬೆಂಜ್ ಅವರು ಗೂಗಲ್ ಕಂಪನಿ ಸ್ಥಾಪನೆಯ ಹಿಂದಿನ ಕುತೂಹಲದ ಸಂಗತಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಗೂಗಲ್ ಕಂಪನಿ ಅಮೆರಿಕದ ಗೃಹ ಇಲಾಖೆ ಅಧೀನದ ದರ್ಪ ಗ್ರ್ಯಾಂಟ್ (DARPA grant) ಅಡಿಯಲ್ಲಿ ಸ್ಥಾಪನೆಯಾಗಿದೆ. ಸಿಐಎ ಮತ್ತು ಎನ್​ಎಸ್​ಎ ಜಂಟಿ ಯೋಜನೆಯಲ್ಲಿ ಸಿಕ್ಕ ಫಂಡಿಂಗ್ ಸಹಾಯದಿಂದ ಲ್ಯಾರಿ ಪೇಜ್ ಮತ್ತು ಸೆರ್ಗೇ ಬ್ರೆನ್ ಅವರು ಗೂಗಲ್ ಕಂಪನಿಯನ್ನು ಸ್ಥಾಪಿಸಿದ್ದರು. ಸಿಇಎ ಅವರ ಸ್ಯಾಟಿಲೈಟ್ ಅನ್ನು ಗೂಗಲ್ ಮ್ಯಾಪ್ಸ್​ಗೆ ಬಳಸಲಾಯಿತು. ಗೂಗಲ್ ಒಂದು ರೀತಿಯಲ್ಲಿ ಅಮೆರಿಕನ್ ಮಿಲಿಟರಿ ಕಾಂಟ್ರಾಕ್ಟರ್ ರೀತಿ ಬದಲಾಗಿ ಹೋಯಿತು. ಅಮೆರಿಕದ ಮಿಲಿಟರಿಗೆ ಅನುಕೂಲವಾಗುವ ರೀತಿಯಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತದೆ ಎಂದು ಮೈಕ್ ಬೆಂಜ್ ಬಹಳ ಗಂಭೀರ ಆರೋಪ ಮಾಡುತ್ತಾರೆ.

ಸರ್ಕಾರಗಳನ್ನು ಉರುಳಿಸಲು ಅಸ್ತ್ರಗಳಾಗಿದೆ ಸೋಷಿಯಲ್ ಮೀಡಿಯಾ

ಇರಾನ್, ಈಜಿಪ್ಟ್ ಮೊದಲಾದ ದೇಶಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನಕ್ರಾಂತಿಗಳಾಗಿ ಸರ್ಕಾರಗಳು ಉರುಳಿದ್ದನ್ನು ನೀವು ಗಮನಿಸಿರಬಹುದು. ಅಂಥದ್ದೊಂದು ಸೋಷಿಯಲ್ ಮೀಡಿಯಾ ಟ್ರೆಂಡಿಂಗ್ ಹುಟ್ಟುಹಾಕಲು ಅಮೆರಿಕದ ಮಿಲಿಟರಿ ಕಾರಣ ಎನ್ನಲಾಗಿದೆ. ಅಮೆರಿಕದ ಮಿಲಿಟರಿ ಕಳೆದ ಕೆಲ ದಶಕಗಳಿಂದ ದರ್ಪ (DARPA) ಎಂಬ ಆರ್ ಅಂಡ್ ಡಿ ಏಜೆನ್ಸಿಯನ್ನು ನಡೆಸುತ್ತಿದೆ. ಹೊಸ ಸಂಶೋಧನೆಗಳ ಯೋಜನೆ ಹಮ್ಮಿಕೊಳ್ಳುವುದು ಇದರ ಗುರಿ. ಇವತ್ತಿನ ಆಧುನಿಕ ಜಗತ್ತಿನ ತಂತ್ರಜ್ಞಾನಗಳಿಗೆ ಇದೇ ದರ್ಪ ರೂವಾರಿ ಎನ್ನಲಾಗಿದೆ. ವಿಕಿಪೀಡಿಯಾದಲ್ಲಿರುವ ಮಾಹಿತಿ ಪ್ರಕಾರ ಕಂಪ್ಯೂಟರ್, ಇಂಟರ್ನೆಟ್, ಜಿಪಿಎಸ್, ಡ್ರೋನ್ ಇತ್ಯಾದಿಗಳ ಅಭಿವೃದ್ಧಿಗೆ ಅಮೆರಿಕದ ದರ್ಪ ಕಾರಣ.

ಇದನ್ನೂ ಓದಿ: ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರದ ಕೂಗು, ಎಲ್ಲೆಡೆ ಪ್ರತಿಭಟನೆ

ಮೈಕ್ ಬೆಂಜ್ ಪ್ರಕಾರ, ಅಮೆರಿಕದ ಕೆಲ ಪ್ರಮುಖ ಮುಖ್ಯವಾಹಿನಿ ಪತ್ರಿಕೆಗಳು ಮಿಲಿಟರಿ ಕೈಗೊಂಬೆಗಳಾಗಿವೆ. ಅವುಗಳ ಮೂಲಕ ಜನಾಭಿಪ್ರಾಯ ಮೂಡಿಸುವ ಪ್ರಯತ್ನಗಳಾಗುತ್ತಿವೆ. ಭಾರತದಲ್ಲಿ 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಸೋಲಿಸಲು ಇದೇ ರೀತಿಯ ಸಂಚು ರೂಪಿಸಲಾಗಿತ್ತು ಎಂಬುದನ್ನೂ ಬೆಂಜ್ ಬೇರೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್