Covid World Update: ಜಗತ್ತಿನಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 13.88 ಕೋಟಿ, 29 ಲಕ್ಷ ದಾಟಿದ ಸಾವಿನ ಸಂಖ್ಯೆ
ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಇಲ್ಲಿ 3,14,95,164 (3.1ಕೋಟಿ) ಪ್ರಕರಣಗಳು ವರದಿ ಆಗಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು ಇಲ್ಲಿ ಸೋಂಕಿತರ ಸಂಖ್ಯೆ 1, 40,74,564 (1.4 ಕೋಟಿ) ತಲುಪಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ 1,37,46,681 (1.3 ಕೋಟಿ) ಆಗಿದೆ.
ವಾಷಿಂಗ್ಟನ್: ಜಗತ್ತಿನಾದ್ಯಂತ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ಒಟ್ಟು ಸೋಂಕಿತರ ಸಂಖ್ಯೆ 13.88 ಕೋಟಿ ದಾಟಿದೆ. ಜಾನ್ ಹಾಪ್ಕಿನ್ಸ್ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಕೊವಿಡ್ ರೋಗಿಗಳ ಸಂಖ್ಯೆ 13,88,58,768 ಆಗಿದೆ. ಅಮೆರಿಕದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು ಇಲ್ಲಿ 3,14,95,164 (3.1ಕೋಟಿ) ಪ್ರಕರಣಗಳು ವರದಿ ಆಗಿದೆ. ಎರಡನೇ ಸ್ಥಾನದಲ್ಲಿ ಭಾರತವಿದ್ದು ಇಲ್ಲಿ ಸೋಂಕಿತರ ಸಂಖ್ಯೆ 1, 40,74,564 (1.4 ಕೋಟಿ) ತಲುಪಿದೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ 1,37,46,681 (1.3 ಕೋಟಿ) ಆಗಿದೆ. ಇನ್ನುಳಿದಂತೆ ಫ್ರಾನ್ಸ್ ನಲ್ಲಿ 52,48,853, ರಷ್ಯಾದಲ್ಲಿ 46,22,464, ಬ್ರಿಟನ್ ನಲ್ಲಿ 43,96,096 ಪ್ರಕರಣಗಳು ಪತ್ತೆಯಾಗಿವೆ.
ಕೊವಿಡ್ನಿಂದ ಸಾವಿಗೀಡಾವರ ಸಂಖ್ಯೆ ನೋಡಿದರೆ ಜಗತ್ತಿನಲ್ಲಿ ಈವರೆಗೆ 29,84,626 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ 5,65, 283 ಮಂದಿ ಸಾವಿಗೀಡಾಗಿದ್ದು ಬ್ರೆಜಿಲ್ ನಲ್ಲಿ ಸಾವಿನ ಸಂಖ್ಯೆ 3,65,444ಕ್ಕೇರಿದೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಇದ್ದು ಇಲ್ಲಿ ಸಾವಿನ ಸಂಖ್ಯೆ 2,11,213ಆಗಿದೆ. ವರ್ಲ್ಡೊ ಮೀಟರ್ ಅಂಕಿ ಅಂಶಗಳ ಪ್ರಕಾರ ಅಮೆರಿಕದಲ್ಲಿ 2,47,70,980 ಮಂದಿ ಚೇತರಿಸಿಕೊಂಡಿದ್ದು, ಬ್ರೆಜಿಲ್ ನಲ್ಲಿ 1,22,36,295 ಚೇತರಿಸಿಕೊಂಡಿದ್ದಾರೆ.
ಅತೀ ಹೆಚ್ಚು ಲಸಿಕೆ ವಿತರಣೆ ಮಾಡಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮುಂದು ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಕೊವಿಡ್ ಲಸಿಕೆ ವಿತರಣೆ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಗುರುವಾರದ ವರೆಗೆ 20 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಅಮೆರಿಕದ ಜನಸಂಖ್ಯೆಯ ಅರ್ಧದಷ್ಟು ವಯಸ್ಕ ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಅದೇ ವೇಳೆ ಶೇ 30ರಷ್ಟು ವಯಯಸ್ಕರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಹೇಳಿದೆ.
ಯುರೋಪ್, ಲ್ಯಾಟಿನ್ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾದಲ್ಲಿ ರೂಪಾಂತರಿ ವೈರಸ್ ಕಂಡು ಬಂದಿದ್ದು ಕೊರೊನಾ ಪ್ರಕರಣ ಹೆಚ್ಚಲು ಕಾರಣವಾಗಿದೆ. ಫ್ರಾನ್ಸ್ ನಲ್ಲಿ ಗುರುವಾರ 100000 ಲಕ್ಷಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದ್ದು, ಲಕ್ಷಕ್ಕಿಂತ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಜಪಾನ್ ಒಲಿಂಪಿಕ್ಸ್ ಆತಿಥ್ಯ ವಹಿಸಲು ಕೇವಲ ಮೂರು ತಿಂಗಳುಗಳಿದ್ದು ಸಾವಿನ ಸಂಖ್ಯೆ ಏರಿಕೆಯಾಗಿದೆ. ಜಪಾನ್ ದೇಶದ ಪಶ್ಚಿಮ ಮಹಾನಗರದ ಒಸಾಕಾಜಲ್ಲಿ ಗುರುವಾರ 1,200 ಕ್ಕೂ ಹೆಚ್ಚು ಹೊಸ ಸೋಂಕುಗಳನ್ನು ವರದಿ ಯಾಗಿದೆ. ಇದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರದ ಗರಿಷ್ಠ ಪ್ರಕರಣ ಇದಾಗಿದೆ. ಸೋಂಕು ಪ್ರಕರಣಗಳು ಇದೇ ರೀತಿ ಏರಿಕೆಯಾಗುತ್ತಿದ್ದರೆ ಕ್ರೀಡಾಕೂಟ ರದ್ದಾಗುವ ಸಾಧ್ಯತೆ ಇದೆ ಎಂದು ಆಡಳಿತ ಪಕ್ಷದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಅಮೆರಿಕದಲ್ಲಿ ಪ್ರತಿದಿನ ಶೇ 11ರಷ್ಟು ಸೋಂಕು ಪ್ರಕರಣಗಳು ಹೆಚ್ಚಾಗಿದೆ. ಮಿಷಿಗನ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದ್ದು, ಇಲ್ಲಿ ದಿನಕ್ಕೆ ಸುಮಾರು 8,000 ಹೊಸ ಸೋಂಕುಗಳು ವರದಿಯಾಗಿದೆ.
ಮಿಚಿಗನ್‌ನ ಅತಿದೊಡ್ಡ ಆಸ್ಪತ್ರೆ ವ್ಯವಸ್ಥೆಯಿಂದ ತುರ್ತು ಆರೈಕೆ ಬಯಸುವ ಜನರನ್ನು ನಿಭಾಯಿಸಲು ಅಲ್ಲಿನ ಸಿಬ್ಬಂದಿ ಡೇರೆಗಳನ್ನು ಬಳಸಿದ್ದಾರೆ. ಗುರುವಾರ 800 ಕ್ಕೂ ಹೆಚ್ಚು ರೋಗಿಗಳಿಗೆ ಇಲ್ಲಿ ದಾಖಲಾಗಿದ್ದಾರೆ. ಕಳೆದೆರಡುವಾರಗಳಿಗೆ ಹೋಲಿಸಿದರೆ 500ಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿ ಆಗಿವೆ,
(Covid World Update here is the death rate confirmed cases and recovered cases of covid worldwide)
ಇದನ್ನೂ ಓದಿ: India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 17 ಸಾವಿರ ಕೇಸ್ ಪತ್ತೆ
Explainer: ಏನಿದು B.1.617 ಡಬಲ್ ರೂಪಾಂತರಿ ವೈರಾಣು?
Published On - 12:00 pm, Fri, 16 April 21