ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ಇರಾನ್ ನಮ್ಮ ಬಳಿ ಬಂದು ಕದನವಿರಾಮ ಘೋಷಿಸುವ ಮಾತುಕತೆಗೆ ಮುಂದಾಗಿದೆ. ಆದರೆ, ನಾನು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆದ ಮೇಲೆ ನೋಡೋಣ ಎಂದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆದ ನಂತರ, ಎಲ್ಲ ದೇಶಗಳಿಗೂ ಮುಕ್ತಗೊಳಿಸಿದ ಬಳಿಕ ಕದನವಿರಾಮದ ಮನವಿಯನ್ನು ಪರಿಗಣಿಸುತ್ತೇನೆ ಎಂದಿರುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ, ದಿನಕ್ಕೊಂದು ಈ ರೀತಿಯ ಹೇಳಿಕೆ ನೀಡಿ ಗಮನ ಸೆಳೆಯುತ್ತಿರುವ ಟ್ರಂಪ್ ಅವರ ಮಾತಿನಲ್ಲಿ ನಿಜವೆಷ್ಟು, ಸುಳ್ಳೆಷ್ಟು ಎಂಬುದು ಗೊಂದಲದ ಸಂಗತಿ. ಇನ್ನೂ ಈ ಕುರಿತು ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ
Trump On Ceasefire
Image Credit source: AP

Updated on: Apr 01, 2026 | 7:01 PM

ವಾಷಿಂಗ್ಟನ್, ಏಪ್ರಿಲ್, 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್‌ನಲ್ಲಿ ಇರಾನ್ ಅಮೆರಿಕದ ಬಳಿ ಕದನ ವಿರಾಮಕ್ಕೆ ಮನವಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲ ದೇಶಗಳಿಗೆ ಮುಕ್ತಗೊಳಿಸಿದ ನಂತರ ಅಮೆರಿಕ ಕದನವಿರಾಮದ ಪ್ರಸ್ತಾಪವನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿರುವುದಾಗಿ ತಿಳಿಸಿದ್ದಾರೆ.

“ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಈ ಹಿಂದಿನ ಅಧ್ಯಕ್ಷರಿಗಿಂತ ಹೆಚ್ಚು ಬುದ್ಧಿವಂತರು. ಅಮೆರಿಕದ ಬಳಿ ಅವರು ಕದನವಿರಾಮಕ್ಕೆ ಮನವಿ ಮಾಡಿದ್ದಾರೆ! ಹಾರ್ಮುಜ್ ಜಲಸಂಧಿ ಯಾವಾಗ ಮುಕ್ತಗೊಳಿಸಿ ಮತ್ತೆ ತೆರೆಯುತ್ತೀರೋ ಆಗ ಈ ಬಗ್ಗೆ ನಾವು ಯೋಚಿಸುತ್ತೇವೆ” ಎಂದು ಹೇಳಿರುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಆದರೆ, ಇರಾನ್ ಈ ಬಗ್ಗೆ ಯಾವುದೇ ಹೇಳಿಕೆಯನ್ನಾಗಲಿ, ಸ್ಪಷ್ಟನೆಯನ್ನಾಗಲಿ ನೀಡಿಲ್ಲ. ನಿನ್ನೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಇರಾನ್ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಹೋರಾಟವನ್ನು ಮುಂದುವರಿಸಲು ಉದ್ದೇಶಿಸಿದೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us