ತುಂಬ ತಡವಾಗಿದೆ, ಇರಾನ್ ಜೊತೆ ಮಾತುಕತೆ ಸಾಧ್ಯವಿಲ್ಲ; ಟ್ರಂಪ್ ಘೋಷಣೆ

ಯುಎಸ್-ಇಸ್ರೇಲ್ ದಾಳಿಗಳು ಸಂಘರ್ಷವನ್ನು ಹೆಚ್ಚಿಸುತ್ತಿದ್ದಂತೆ ಇರಾನ್ ಜೊತೆ ಮಾತುಕತೆಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. 'ಈಗಾಗಲೇ ತುಂಬ ತುಂಬ ತಡವಾಗಿದೆ. ಇರಾನ್ ಜೊತೆ ಮಾತುಕತೆ ನಡೆಸಲು ಸಾಧ್ಯವಿಲ್ಲ' ಎಂದು ಘೋಷಿಸಿದ್ದಾರೆ. 72 ಗಂಟೆಗಳ ಹಿಂದೆ ಇರಾನ್ ಮೇಲೆ ಯುಎಸ್-ಇಸ್ರೇಲ್ ಜಂಟಿ ದಾಳಿ ಪ್ರತೀಕಾರದ ದಾಳಿಗೆ ಕಾರಣವಾಯಿತು.

ತುಂಬ ತಡವಾಗಿದೆ, ಇರಾನ್ ಜೊತೆ ಮಾತುಕತೆ ಸಾಧ್ಯವಿಲ್ಲ; ಟ್ರಂಪ್ ಘೋಷಣೆ
Donald Trump

Updated on: Mar 03, 2026 | 8:44 PM

ವಾಷಿಂಗ್ಟನ್, ಮಾರ್ಚ್ 3: ಇಂದು ಸಂಜೆ ಡೊನಾಲ್ಡ್ ಟ್ರಂಪ್ (Donald Trump) ಯುದ್ಧದ ಅಂತ್ಯದ ಬಗ್ಗೆ ಮಾತನಾಡಿದ್ದಾರೆ. ಇರಾನ್‌ನ ವಾಯುಪಡೆ ಮತ್ತು ನೌಕಾಪಡೆ ನಾಶವಾಯಿತು. ಇರಾನ್​ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿಯಿಂದ ಪ್ರಾರಂಭಿಸಿ ಇರಾನ್​ನ ಎಲ್ಲ ನಾಯಕರನ್ನೂ ಹತ್ಯೆ ಮಾಡಲಾಗಿದೆ. ಹೀಗಾಗಿ ತನ್ನಿಂದ ತಾನಾಗೇ ಯುದ್ಧ ನಿಲ್ಲುತ್ತದೆ. ಈಗಾಗಲೇ ತಡವಾಗಿರುವುದರಿಂದ ಮಾತುಕತೆ ಸಾಧ್ಯವಿಲ್ಲ ಎಂದಿದ್ದಾರೆ.

ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ನ ಪ್ರಭಾವಿ ಮುಖ್ಯಸ್ಥ ಅಲಿ ಲಾರಿಜಾನಿ, ಇರಾನ್ ಅಮೆರಿಕದ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ ಒಂದು ದಿನದ ನಂತರ ಟ್ರಂಪ್ ಅವರ ಈ ಘೋಷಣೆ ಹೊರಬಿದ್ದಿದೆ. ಇರಾನಿನ ಅಧಿಕಾರಿಗಳು ಟ್ರಂಪ್ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕ ನಿರಾಕರಿಸಿದೆ.

ಇದನ್ನೂ ಓದಿ: ಇಸ್ರೇಲ್-ಯುಎಸ್ ದಾಳಿಯಿಂದಾಗಿ ಇರಾನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಶಿಫ್ಟ್

ಯುಎಸ್-ಇಸ್ರೇಲ್ ದಾಳಿಗಳು ಗಣ್ಯ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ಸೇರಿದಂತೆ ಟೆಹ್ರಾನ್‌ನಲ್ಲಿರುವ ಇರಾನ್ ಆಡಳಿತ ಕಟ್ಟಡಗಳನ್ನು ಗುರಿಯಾಗಿಸಿಕೊಂಡವು. ಬಾಲಕಿಯರ ಶಾಲೆ ಸೇರಿದಂತೆ ನಾಗರಿಕ ಕೇಂದ್ರಗಳನ್ನು ಸಹ ಹೊಡೆದವು ಎಂದು ವರದಿಯಾಗಿದೆ. ಇದರಲ್ಲಿ ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಇಂದು ಕ್ಷಿಪಣಿಗಳು ಮತ್ತು ದಾಳಿ ಡ್ರೋನ್‌ಗಳು ಟೆಹ್ರಾನ್‌ನ ಹಲವಾರು ಗುರಿಗಳ ಮೇಲೆ ದಾಳಿ ಮಾಡಿದವು, ಅವುಗಳಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿರುವ ಕಟ್ಟಡ ಕೂಡ ಸೇರಿತ್ತು. ನಂತರ ಅವರನ್ನು ಕೊಲ್ಲಲಾಗಿದೆ ಎಂದು ದೃಢಪಡಿಸಲಾಯಿತು. ಇರಾನ್ ಟೆಲ್ ಅವೀವ್, ಇತರ ಇಸ್ರೇಲಿ ನಗರಗಳು ಮತ್ತು ಪಶ್ಚಿಮ ಏಷ್ಯಾದಾದ್ಯಂತದ ಯುಎಸ್ ಮಿಲಿಟರಿ ನೆಲೆಗಳು ಮತ್ತು ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಸೌದಿ ಅರೇಬಿಯಾದಲ್ಲಿನ ತೈಲ ಸಂಸ್ಕರಣಾಗಾರ ಮತ್ತು ದುಬೈನಲ್ಲಿರುವ ಐಷಾರಾಮಿ ಹೋಟೆಲ್ ಸೇರಿದಂತೆ ನಾಗರಿಕ ಮತ್ತು ಇಂಧನ ಸೌಲಭ್ಯಗಳು ಸಹ ಹಾನಿಗೊಳಗಾದವು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us