ಭಾರತ ಮೂಲದ ವಿವೇಕ್ ರಾಮಸ್ವಾಮಿಗೆ ಅಮೆರಿಕ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟ ಟ್ರಂಪ್

ಟ್ರಂಪ್ ಸರ್ಕಾರದಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಹಾಗೂ ಖ್ಯಾತ ಉದ್ಯಮಿ ಎಲಾನ್​ಮಸ್ಕ್​ಗೆ ಮಹತ್ವದ ಹುದ್ದೆ ನೀಡಲಾಗಿದೆ. ಸರ್ಕಾರದ ದಕ್ಷತೆಯ ಇಲಾಖೆ(DOGE)ಯನ್ನು ಮುನ್ನಡೆಸಲಿದ್ದಾರೆ.ಚುನಾವಣೆಗೂ ಮುನ್ನವೇ ಟ್ರಂಪ್ ಮಸ್ಕ್ ಗೆ ದೊಡ್ಡ ಜವಾಬ್ದಾರಿ ನೀಡುವ ಸುಳಿವು ನೀಡಿದ್ದರು.

ಭಾರತ ಮೂಲದ ವಿವೇಕ್ ರಾಮಸ್ವಾಮಿಗೆ ಅಮೆರಿಕ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟ ಟ್ರಂಪ್
ವಿವೇಕ್ ರಾಮಸ್ವಾಮಿ-ಎಲಾನ್ ಮಸ್ಕ್​ Image Credit source: WITN
Follow us
ನಯನಾ ರಾಜೀವ್
|

Updated on:Nov 13, 2024 | 12:34 PM

ಟ್ರಂಪ್ ಸರ್ಕಾರದಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಹಾಗೂ ಖ್ಯಾತ ಉದ್ಯಮಿ ಎಲಾನ್​ಮಸ್ಕ್​ಗೆ ಮಹತ್ವದ ಹುದ್ದೆ ನೀಡಲಾಗಿದೆ. ಸರ್ಕಾರದ ದಕ್ಷತೆಯ ಇಲಾಖೆ(DOGE)ಯನ್ನು ಮುನ್ನಡೆಸಲಿದ್ದಾರೆ.ಚುನಾವಣೆಗೂ ಮುನ್ನವೇ ಟ್ರಂಪ್ ಮಸ್ಕ್ ಗೆ ದೊಡ್ಡ ಜವಾಬ್ದಾರಿ ನೀಡುವ ಸುಳಿವು ನೀಡಿದ್ದರು.

ಅಗತ್ಯವಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು, ಅನಗತ್ಯ ನಿಯಮಗಳನ್ನು ಕಿತ್ತೊಗೆಯಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಫೆಡರಲ್‌ ಏಜೆನ್ಸಿಗಳನ್ನು ಪುನರ್‌ ರಚಿಸಲು ಈ ಇಬ್ಬರು ನೆರವಾಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.

ರಿಪಬ್ಲಿಕನ್‌ ಪಕ್ಷ ಈ ಇಲಾಖೆಯ ಬಗ್ಗೆ ಬಹಳ ಸಮಯದಿಂದ ಕನಸು ಕಂಡಿದೆ. ಈ ಇಲಾಖೆಯಲ್ಲಿರುವವರು ಹೊರಗಿನಿಂದ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತಾರೆ. ಎಲಾನ್‌ ಮತ್ತು ವಿವೇಕ್‌ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ ಎಂದು ಟಂಪ್‌ ಹೇಳಿದ್ದಾರೆ.

ಮತ್ತಷ್ಟು ಓದಿ: ಬಿಸಿನೆಸ್ ಹಿನ್ನೆಲೆಯ ಡೊನಾಲ್ಡ್ ಟ್ರಂಪ್ ಬಳಿ ಇರೋ ಆಸ್ತಿ ಎಷ್ಟು? ಇಲ್ಲಿದೆ ಡೀಟೇಲ್ಸ್

ರಾಮಸ್ವಾಮಿ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡುವ ಸಾಧ್ಯತೆಗಳು ಮೊದಲೇ ವ್ಯಕ್ತವಾಗಿದ್ದವು. ಹೊಸ ಆರ್ಥಿಕ ಯೋಜನೆಯ ಭಾಗವಾಗಿ, ಟ್ರಂಪ್ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ದಕ್ಷತೆ ಆಯೋಗವನ್ನು ಸ್ಥಾಪಿಸಲು ಪ್ರಸ್ತಾಪಿಸಿದ್ದರು. ಆ ಸಮಯದಲ್ಲಿ ಮಸ್ಕ್ ರಿಪಬ್ಲಿಕನ್ ನಾಯಕ ಶ್ವೇತಭವನಕ್ಕೆ ಹಿಂತಿರುಗಿದರೆ, ಈ ಇಲಾಖೆಯನ್ನು ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದ್ದರು.

ಎಲಾನ್ ಮಸ್ಕ್​ ಟೆಸ್ಲಾ ಹಾಗೂ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ ಎಕ್ಸ್​ನ ಮಾಲೀಕರಾಗಿದ್ದರೆ, ರಾಮಸ್ವಾಮಿ ಫಾರ್ಮಾಸ್ಯುಟಿಕಲ್ ಕಂಪನಿಯ ಸ್ಥಾಪಕರಾಗಿದ್ದಾರೆ. ರಾಮಸ್ವಾಮಿ ಕಳೆದ ವರ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ರೇಸ್‌ನಲ್ಲಿದ್ದರು. ಬಳಿಕ ಅವರು ಹಿಂದೆ ಸರಿದು ನಂತರ ಟ್ರಂಪ್ ಅನ್ನು ಬೆಂಬಲಿಸಲು ನಿರ್ಧರಿಸಿದರು.

ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಮಸ್ಕ್ ಅವರು ಲಕ್ಷಾಂತರ ಡಾಲರ್‌ಗಳನ್ನು ನೀಡಿದ್ದರು ಮತ್ತು ಅವರೊಂದಿಗೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ತಮ್ಮ ಆಡಳಿತದಲ್ಲಿ ಸರ್ಕಾರದ ದಕ್ಷತೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಟ್ರಂಪ್ ಹೇಳಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Wed, 13 November 24

ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ