Donald Trump Speech: ಟ್ರಂಪ್ ಮಹತ್ವದ ಸುದ್ದಿಗೋಷ್ಠಿ, ಇರಾನ್ ಮೇಲಿನ ದಾಳಿ ಮುಂದುವರೆಸುತ್ತಾ ಅಮೆರಿಕ, ಇಲ್ಲಿದೆ ಬಿಗ್ ಅಪ್​ಡೇಟ್ಸ್​

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಇರಾನ್ ಜತೆಗಿನ ಯುದ್ಧದ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ನಾವು ಇರಾನ್ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಅದು ಪರಿಮಾಣು ಶಕ್ತಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಇರಾನ್, ಯುಎಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಯುದ್ಧ ಪ್ರಾರಂಭವಾಗಿ 34 ದಿನಗಳು ಕಳೆದಿವೆ ಮತ್ತು ಹೊಸ ಮುಖಾಮುಖಿಯ ಭಯ ಹೊರಹೊಮ್ಮುತ್ತಿದೆ.

Donald Trump Speech: ಟ್ರಂಪ್ ಮಹತ್ವದ ಸುದ್ದಿಗೋಷ್ಠಿ, ಇರಾನ್ ಮೇಲಿನ ದಾಳಿ ಮುಂದುವರೆಸುತ್ತಾ ಅಮೆರಿಕ, ಇಲ್ಲಿದೆ ಬಿಗ್ ಅಪ್​ಡೇಟ್ಸ್​
ಡೊನಾಲ್ಡ್​ ಟ್ರಂಪ್
Image Credit source: Business Insider

Updated on: Apr 02, 2026 | 7:42 AM

ವಾಷಿಂಗ್ಟನ್, ಏಪ್ರಿಲ್ 2: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್ ಜತೆಗಿನ ಯುದ್ಧದ ಬಗ್ಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಅದರಲ್ಲಿ ನಾವು ಇರಾನ್ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ, ಅದು ಪರಿಮಾಣು ಶಕ್ತಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಇರಾನ್, ಯುಎಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಯುದ್ಧ ಪ್ರಾರಂಭವಾಗಿ 34 ದಿನಗಳು ಕಳೆದಿವೆ ಮತ್ತು ಹೊಸ ಮುಖಾಮುಖಿಯ ಭಯ ಕಾಡಲು ಶುರುವಾಗಿದೆ.

ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳು, ಬ್ಯಾಲಿಸ್ಟಿಕ್ ಕ್ಷಿಪಣಿ ತಾಣಗಳು ಮತ್ತು ಶೇಖರಣಾ ಬಂಕರ್‌ಗಳು ಸೇರಿದಂತೆ 12,300 ಕ್ಕೂ ಹೆಚ್ಚು ಇರಾನಿನ ಗುರಿಗಳ ಮೇಲೆ ಇದುವರೆಗೆ ದಾಳಿ ಮಾಡಿದೆ ಎಂದು ಯುಎಸ್ ಮಿಲಿಟರಿ ಹೇಳಿದೆ. 155 ಕ್ಕೂ ಹೆಚ್ಚು ಹಡಗುಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ. ಯುದ್ಧ ಪ್ರಾರಂಭವಾದಾಗಿನಿಂದ, ಆಧುನಿಕ ಫೈಟರ್ ಜೆಟ್‌ಗಳು ಮತ್ತು ಬಾಂಬರ್‌ಗಳನ್ನು ಬಳಸಿಕೊಂಡು 13,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಲಾಗಿದೆ ಎಂದು ಮಿಲಿಟರಿ ಹೇಳುತ್ತದೆ.

ಮಧ್ಯಪ್ರಾಚ್ಯದಲ್ಲಿ ನಿರಂತರ ದಾಳಿಗಳ ಮಧ್ಯೆ, ಟ್ರಂಪ್ ಇಂದು ಯುದ್ಧದ ಕುರಿತು ತಮ್ಮ ಮೊದಲ ಪ್ರೈಮ್‌ಟೈಮ್ ಭಾಷಣ ಮಾಡಿದರು. ವಿಯೆಟ್ನಾಂ ಯುದ್ಧವು 18 ವರ್ಷಗಳ ಕಾಲ ನಡೆಯಿತು ಮತ್ತು ದೀರ್ಘ ಯುದ್ಧಗಳು ನಡೆದಿವೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಆಪರೇಷನ್ ಎಪಿನ್ ಫ್ಯೂರಿ ಮುಂದುವರೆಯುತ್ತದೆ ಎಂದರು.

ಮತ್ತಷ್ಟು ಓದಿ: ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ಇರಾನ್‌ನಲ್ಲಿ ಅಮೆರಿಕ ತನ್ನ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಸಾಧಿಸುವ ಹಂತಕ್ಕೆ ಹತ್ತಿರದಲ್ಲಿದೆ, ಸಾಧ್ಯವಾದಷ್ಟು ಬೇಗ ಕಾರ್ಯಾಚರಣೆ ಕೊನೆಗೊಳಿಸುವುದಾಗಿ ಭರವಸೆ ನೀಡಿದರು. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಿಡಬಾರದು. ವಾಷಿಂಗ್ಟನ್ ತನ್ನ ಗಲ್ಫ್ ಮಿತ್ರರಾಷ್ಟ್ರಗಳನ್ನು ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದರು.

ಹಾರ್ಮುಜ್ ತಾನಾಗಿಯೇ ತೆರೆಯುತ್ತೆ
ಯುದ್ಧ ಕೊನೆಗೊಳ್ಳುವವರೆಗೆ ಕಾಯಬೇಕು ಮತ್ತು ಹಾರ್ಮುಜ್ ಜಲಸಂಧಿಯು ತಾನಾಗಿಯೇ ತೆರೆಯುತ್ತದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯನ್ನು ಅವಲಂಬಿಸಿರುವ ದೇಶಗಳು ಈ ಮಾರ್ಗದ ಭದ್ರತೆಯನ್ನು ಸ್ವತಃ ಖಚಿತಪಡಿಸಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾವು ಸಹಾಯ ಮಾಡುತ್ತೇವೆ ಆದರೆ ಆದರೆ ಆ ದೇಶಗಳು ತಾವು ಹೆಚ್ಚು ಅವಲಂಬಿಸಿರುವ ತೈಲವನ್ನು ಭದ್ರಪಡಿಸಿಕೊಳ್ಳುವಲ್ಲಿ ಮುಂದಾಳತ್ವ ವಹಿಸುವುದು ಅವುಗಳ ಜವಾಬ್ದಾರಿಯಾಗಿದೆ ಎಂದು ಒತ್ತಿ ಹೇಳಿದರು.

ಟ್ರಂಪ್ ಭಾಷಣ

ಅಮೆರಿಕದಿಂದ ತೈಲ ಖರೀದಿಸಿ
ಡೊನಾಲ್ಡ್​ ಟ್ರಂಪ್ ಮಾತನಾಡಿ, ನನ್ನದೊಂದು ಸಲಹೆ ಇದೆ ಮೊದಲು ಅಮೆರಿಕದಿಂದ ತೈಲ ಖರೀದಿಸಿ, ನಮ್ಮಲ್ಲಿ ಸಾಕಷ್ಟು ತೈಲವಿದೆ ಎಂದರು. ಮುಂಬರುವ ವಾರಗಳಲ್ಲಿ ಅಮೆರಿಕ ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಿದೆ ಎಂದು ಹೇಳಿದ್ದಾರೆ.ಇರಾನ್‌ನ ತೈಲ ಮೂಲಸೌಕರ್ಯವು ಸಂಭಾವ್ಯ ಗುರಿಯಾಗಿ ಉಳಿದಿದೆ ಮತ್ತು ಅಗತ್ಯವಿದ್ದರೆ ಅಮೆರಿಕ ಅವರ ತೈಲ ಸೌಲಭ್ಯಗಳ ಮೇಲೆ ದಾಳಿ ಮಾಡಬಹುದು.

ನಾವು ನಮ್ಮ ಧ್ಯೇಯವನ್ನು ಸಾಧಿಸಿದ್ದೇವೆ: ಟ್ರಂಪ್
ಇರಾನ್ ಯುದ್ಧದ ಮಧ್ಯೆ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಅಮೆರಿಕ ತನ್ನ ಧ್ಯೇಯವನ್ನು ಸಾಧಿಸಿದೆ. ಅಮೆರಿಕದ ಸೇನೆಯು ಶೀಘ್ರದಲ್ಲೇ ಇರಾನ್‌ನಿಂದ ಹಿಂದೆ ಸರಿಯಲಿದೆ. ಅಮೆರಿಕ ತನ್ನ ಎಲ್ಲಾ ಗುರಿಗಳನ್ನು ಸಾಧಿಸಿದೆ.

ಇರಾನ್ ಸೈನ್ಯ ನಮ್ಮ ನಿಯಂತ್ರಣದಲ್ಲಿದೆ:ಟ್ರಂಪ್
ಇರಾನ್‌ನ ಸಂಪೂರ್ಣ ಸೇನೆಯು ಈಗ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್‌ನ ಎಲ್ಲಾ ಉನ್ನತ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ಇರಾನ್‌ನ ಕ್ಷಿಪಣಿ ಸಾಮರ್ಥ್ಯವೂ ಸಂಪೂರ್ಣವಾಗಿ ನಾಶವಾಗಿದೆ. ಅಮೆರಿಕದ ಸೇನೆಯನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆ ಎಂದು ಬಣ್ಣಿಸಿದರು.

ನಮಗೆ ಹಾರ್ಮುಜ್ ತೈಲ ಅಗತ್ಯವಿಲ್ಲ, ಅಗತ್ಯವಿರುವವರು ಅದನ್ನು ರಕ್ಷಿಸಬೇಕು: ಟ್ರಂಪ್
ಅಮೆರಿಕಕ್ಕೆ ಸಮುದ್ರ ಮಾರ್ಗದಿಂದ ತೈಲ ಅಗತ್ಯವಿಲ್ಲ , ತೈಲಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸಿರುವ ಇತರ ದೇಶಗಳನ್ನು “ಈ ಮಾರ್ಗವನ್ನು ನೋಡಿಕೊಳ್ಳಿ, ಅದನ್ನು ಪಡೆದುಕೊಳ್ಳಿ ಎಂದು ಟ್ರಂಪ್ ಹೇಳಿದ್ದಾರೆ. ಜಗತ್ತಿನಲ್ಲಿ ಎಲ್ಲಿಯೂ ನಮ್ಮಂತಹ ದೇಶವಿಲ್ಲ, ಮತ್ತು ನಾವು ಭವಿಷ್ಯಕ್ಕಾಗಿ ಉತ್ತಮ ಸ್ಥಿತಿಯಲ್ಲಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಹಾರ್ಮುಜ್ ಜಲಸಂಧಿಯ ಮೂಲಕ ಬಹುತೇಕ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ, ಮತ್ತು ಭವಿಷ್ಯದಲ್ಲಿ ಅದನ್ನು ತೆಗೆದುಕೊಳ್ಳುವುದಿಲ್ಲ. ನಮಗೆ ಅದರ ಅಗತ್ಯವಿಲ್ಲಎಂದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:07 am, Thu, 2 April 26

Follow Us