ವಿಯೆಟ್ನಾಂನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ, 3 ಮಕ್ಕಳು ಸೇರಿ 12ಕ್ಕೂ ಅಧಿಕ ಮಂದಿ ಸಾವು

ವಿಯೆಟ್ನಾಂನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 3 ಮಕ್ಕಳು ಸೇರಿ 12ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿರುವ ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಮಧ್ಯರಾತ್ರಿ 10 ಅಂತಸ್ತಿನ ಕಟ್ಟಡದ ಪಾರ್ಕಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಅಲ್ಲಿದ್ದ ಬೈಕ್​ಗಳಿಗೆ ಮೊದಲು ಬೆಂಕಿ ಹತ್ತಿ ಬಳಿಕ ಅಪಾರ್ಟ್​ಮೆಂಟ್​ನ ಮಹಡಿಗಳಿಗೆ ತಗುಲಿತ್ತು.

ವಿಯೆಟ್ನಾಂನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ, 3 ಮಕ್ಕಳು ಸೇರಿ 12ಕ್ಕೂ ಅಧಿಕ ಮಂದಿ ಸಾವು
ಅಗ್ನಿ ಅವಘಡ
Image Credit source: NDTV

Updated on: Sep 13, 2023 | 12:33 PM

ವಿಯೆಟ್ನಾಂನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 3 ಮಕ್ಕಳು ಸೇರಿ 12ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿರುವ ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಮಧ್ಯರಾತ್ರಿ 10 ಅಂತಸ್ತಿನ ಕಟ್ಟಡದ ಪಾರ್ಕಿಂಗ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಅಲ್ಲಿದ್ದ ಬೈಕ್​ಗಳಿಗೆ ಮೊದಲು ಬೆಂಕಿ ಹತ್ತಿ ಬಳಿಕ ಅಪಾರ್ಟ್​ಮೆಂಟ್​ನ ಮಹಡಿಗಳಿಗೆ ತಗುಲಿತ್ತು.

ಅಗ್ನಿಶಾಮಕ ಸಿಬ್ಬಂದಿ 70 ಮಂದಿಯನ್ನು ರಕ್ಷಿಸಿದ್ದಾರೆ, 54 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಹಾಯಕ್ಕಾಗಿ ಜನರು ಕೂಗುತ್ತಿದ್ದರು, ಆದರೆ ಬೆಂಕಿ ಹೊತ್ತಿಕೊಂಡಿದ್ದ ಕಾರಣ , ಹೆಚ್ಚು ಜನರಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ ತಪ್ಪಿಸಿಕೊಂಡು ಹೊರ ಬರಲು ಯಾವುದೇ ಮಾರ್ಗವಿಲ್ಲ ಹೀಗಾಗಿ ಉಸಿರುಗಟ್ಟಿ ಜನರು ಸಾವನ್ನಪ್ಪಿದ್ದಾರೆ, ಕೆಲವರು ಬೆಂಕಿಯಲ್ಲಿ ಬೆಂದು ಹೋಗಿದ್ದರು. ಮಧ್ಯರಾತ್ರಿಯಾಗಿದ್ದ ಕಾರಣ ಜನರಿಗೆ ದಿಕ್ಕೇ ತೋಚದಂತಾಗಿತ್ತು. ಕಟ್ಟಡದ ಬಾಲ್ಕನಿಗಳು ಕೂಡ ಕಬ್ಬಿಣದ ಸರಳುಗಳಿಂದ ಭದ್ರವಾಗಿದ್ದವು, ಹಾಗಾಗಿ ಎಲ್ಲೂ ಏಣಿ ಕೂಡ ಇರಲಿಲ್ಲ.

ಮತ್ತಷ್ಟು ಓದಿ: ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್​ಐಆರ್​ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ

ಈ ಅಪಾರ್ಟ್​ಮೆಂಟ್​ನಲ್ಲಿ 150 ಮಂದಿ ವಾಸವಾಗಿದ್ದರು, ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಎತ್ತರದ ಮಹಡಿಯಿಂದ ಬಾಲಕನ್ನು ಕೆಳಗೆ ಎಸೆಯಲಾಗಿತ್ತು. ರಾತ್ರಿ ಏನೋ ವಾಸನೆ ಬಂದಂಗಾಯ್ತು ತಕ್ಷಣ ಬಂದು ಹೊರಗಡೆ ನೋಡಿದೆ, ಎಲ್ಲೆಡೆ ಹೊಗೆ ತುಂಬಿತ್ತು, ಎತ್ತರದ ಮಹಡಿಯಿಂದ ಚಿಕ್ಕ ಹುಡುಗನನ್ನು ಕೆಳಗೆ ಸೆಸೆಯಲಾಯಿತು ಜನರು ರಕ್ಷಿಸಲು ಬೆಡ್​ಶಿಟ್​ಗಳನ್ನು ಹಿಡಿದಿದ್ದರು, ಬಳಿಕ ಆತ ಬದುಕುಳಿದನೋ ಇಲ್ಲವೋ ಗೊತ್ತಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

ಒಂದು ವರ್ಷದ ಹಿಂದಷ್ಟೇ ವಾಣಿಜ್ಯ ಕೇಂದ್ರವಾದ ಹೋ ಚಿ ಮಿನ್ಹ್​ ಸಿಟಿಯಲ್ಲಿ ಮೂರು ಅಂತಸ್ತಿನ ಕರೋಕೆ ಬಾರ್​ನಲ್ಲಿ ಬೆಂಕಿ ಕಾಣಿಸಿಕೊಂಡು 32 ಮಂದಿ ಸಾವನ್ನಪ್ಪಿದ್ದರು. 17 ಮಂದಿ ಗಾಯಗೊಂಡಿದ್ದರು, 2018ರಲ್ಲಿ ಹೋ ಚಿನ್ ಮಿನ್ಹ್​ ನಗರದಲ್ಲಿ ಅಪಾರ್ಟ್​ಮೆಂಟ್​ನ ಸಮುಚ್ಚಯಕ್ಕೆ ಬೆಂಕಿ ತಗುಲಿ ಹದಿಮೂರು ಮಂದಿ ಮೃತಪಟ್ಟಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us