Omicron Sub Variant: ಚೀನಾದಲ್ಲಿ ಹೊಸ ಒಮೈಕ್ರಾನ್ ನ ಉಪ-ರೂಪಾಂತರಿಗಳು ಪತ್ತೆ, ಒಂದೇ ದಿನ 1900 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು!

ಉಪ ರೂಪಾಂತರಿಯು ಬಿಎಫ್.7 ನ ಎಲ್ಲ ಗುಣಲಕ್ಷಣಗಳನ್ನು ಹೊಂದಿರಬಹುದಾದ ಸಾಧ್ಯತೆಯಿದೆ ಮತ್ತು ಕೂಡಲೇ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಇದು ಚೀನಾದಲ್ಲೂ ಪ್ರಮುಖ ರೂಪಾಂತರಿಯಾಗಿ ಹಬ್ಬಲಿದೆ ಅಂತ ಪ್ರೊಫೆಸರ್ ಒಬ್ಬರು ಹೇಳಿದ್ದಾರೆ.

Omicron Sub Variant: ಚೀನಾದಲ್ಲಿ ಹೊಸ ಒಮೈಕ್ರಾನ್ ನ ಉಪ-ರೂಪಾಂತರಿಗಳು ಪತ್ತೆ, ಒಂದೇ ದಿನ 1900 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು!
ಒಮೈಕ್ರಾನ್ ಉಪ-ರೂಪಾಂತರಿಗಳು ಚೀನಾದಲ್ಲಿ ಪತ್ತೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2022 | 1:01 PM

ಕೊರೊನಾ ವೈರಸ್ ಮನುಕುಲದಿಂದ ದೂರವಾಗುವ ಲಕ್ಷಣಗಳು ಚೀನಾದಲ್ಲಂತೂ ಕಾಣುತ್ತಿಲ್ಲ. ಆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅತಿಹೆಚ್ಚು ಸೋಂಕುಕಾರಿ ಮತ್ತು ಬಹಳ ಕ್ಷಿಪ್ರವಾಗಿ ಹರಡುವ ಕುಖ್ಯಾತಿ ಹೊಂದಿರುವ ಹೊಸ ಒಮೈಕ್ರಾನ್ ನ (Omicron) ಉಪ-ರೂಪಾಂತರಿಗಳು (sub-variants ) ಬಿಎಫ್ .7 ಮತ್ತು ಬಿಎ 5.1.7 ಪತ್ತೆಯಾಗಿವೆ. ಅತಿಹೆಚ್ಚು ಸೋಂಕುಕಾರಿ ಇಮೈಕ್ರಾನ್ ಮೊದಲಬಾರಿಗೆ ಚೀನಾದ ವಾಯುವ್ಯ (northwestern) ಭಾಗದಲ್ಲಿ ಮೊದಲ ಬಾರಿಗೆ ಪತ್ತೆಯಾದರೆ ಅದರ ಉಪ-ರೂಪಾಂತರಿ ಬಿಎ 5.1.7 ಚೀನಾದ ಕೇಂದ್ರ ಭಾಗದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ರೋಗನಿರೋಧಕ ಮತ್ತು ನಿಯಂತ್ರಣ ಕೇಂದ್ರದ ಉಪ-ನಿರ್ದೇಶಕ ಲಿ ಶೂಜಿಯಾನ್ ತಿಳಿಸಿರುವರೆಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಕ್ಟೋಬರ 4 ರಿಂದ ಸ್ಥಳೀಯವಾಗಿ ಹಬ್ಬಿರುವ ಕೋವಿಡ್-19 ಸೋಂಕಿನ ಪ್ರಕರಣಗಳ ಹೆಚ್ಚಳಕ್ಕೆ ಬಿಎಫ್.7 ರೂಪಾಂತರಿ ಕಾರಣವಾಗಿದೆಯೆಂದು ಚೀನಾದ ಉತ್ತರ ಪ್ರಾಂತ್ಯದ ಭಾಗವಾಗಿರುವ ಶಾಂನ್ಡಾಂಗ್ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಫ್.7 ಉಪ-ರೂಪಾಂತರಿ ಅತಿಹೆಚ್ಚು ಸೋಂಕುಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಸಿದೆ.

ಉಪ ರೂಪಾಂತರಿಯು ಬಿಎಫ್.7 ನ ಎಲ್ಲ ಗುಣಲಕ್ಷಣಗಳನ್ನು ಹೊಂದಿರಬಹುದಾದ ಸಾಧ್ಯತೆಯಿದೆ ಮತ್ತು ಕೂಡಲೇ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಇದು ಚೀನಾದಲ್ಲೂ ಪ್ರಮುಖ ರೂಪಾಂತರಿಯಾಗಿ ಹಬ್ಬಲಿದೆ ಅಂತ ಪ್ರೊಫೆಸರ್ ಒಬ್ಬರು ಆರೋಗ್ಯ-ಆಧಾರಿತ ಪತ್ರಿಕೆಯೊಂದಕ್ಕೆ ಹೇಳಿರುವುದನ್ನು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ತನ್ನ ನೀತಿಗಳ ಮೇಲೆ ಭರವಸೆ ಕಳೆದುಕೊಳ್ಳಬಾರದೆದು ಚೀನಾ ಕರೆ ನೀಡಿದೆ

ಕಮ್ಯುನಿಸ್ಟ್ ಪಕ್ಷದ ಕಾಂಗ್ರೆಸ್‌ನ ಕೆಲವೇ ದಿನಗಳಷ್ಟ ಮುಂಚಿತವಾಗಿ ಅಂದರೆ ಆಗಸ್ಟ್‌ನಿಂದ ಸ್ಥಳೀಯ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಹೆಚ್ಚಿರುವುದರಿಂದ ತನ್ನ ಕಠಿಣ ಕೋವಿಡ್ ನಿಯಂತ್ರಣದ ನೀತಿಗಳೊಂದಿಗೆ ತಾಳ್ಮೆ ಹೊಂದಿರುವಂತೆ ಜನರಿಗೆ ಚೀನಾ ಕರೆ ನೀಡಿದ್ದು ಮತ್ತು ಯಾವುದೇ ರೀತಿಯ ಹತಾಷೆಗೆ ಒಳಗಾಗಬಾರದೆಂದು ಆಗ್ರಹಿಸದೆ. ಒಂದು ವಾರ ಅವಧಿಯ ರಾಷ್ಟ್ರೀಯ ರಜಾದಿನಗಳ ಸಂದರ್ಭದಲ್ಲಿ ಒಮೈಕ್ರಾನ್ ಉಪ-ರೂಪಾಂತರಿ ಬಿಎಪ್.7 ಮತ್ತು BA.5.1.7 ಮೊದಲ ಬಾರಿಗೆ ಚೀನಾದ ಕೇಂದ್ರ ಭಾಗದಲ್ಲಿ ಕಾಣಿಸಿಕೊಂಡಿವೆ.

ಅಕ್ಟೋಬರ್ 9 ರಂದು ಚೀನಾದಾದ್ಯಂತ, 1,939 ಸ್ಥಳೀಯವಾಗಿ ಹರಡಿರುವ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದು ಆಗಸ್ಟ್ 20 ರಿಂದ ವರದಿಯಾಗಿರುವ ಅತ್ಯಧಿಕ ಸಂಖ್ಯೆಯ ಪ್ರಕರಣಗಳಾಗಿವೆ ಎಂದು ಸೋಮವಾರ ಪ್ರಕಟವಾದ ಅಧಿಕೃತ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ರಾಯಿಟರ್ಸ್ ವರದಿ ಮಾಡಿದೆ.

ಅಕ್ಟೋಬರ್ 9 ರಂದು ಚೀನಾದಾದ್ಯಂತ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿದ್ದರೆ ಶಾಂಘೈನಲ್ಲಿ ಕೋವಿಡ್ ಸೋಂಕಿನ 34 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲೂ ಕೂಡ ಕಳೆದ ಮೂರು ತಿಂಗಳಲ್ಲೇ ಅತ್ಯಧಿಕ ಪ್ರಕರಣಗಳು ವರದಿಯಾಗಿವೆ. ವಿಶ್ವದ ಪ್ರಮುಖ ಎಕಾನಮಿಗಳ ಪೈಕಿ ಕೇವಲ ಚೀನಾ ಮಾತ್ರ ಈಗಲೂ ಕೊವಿಡ್ ಸೋಂಕು ಹರಡುವಿಕೆಯ ಸರಪಳಿಯನ್ನು ಮುರಿಯಲು, ಅದರ ಗಡಿಭಾಗಗಳಿಂದ ಸೋಂಕು ನುಸುಳದಿರಲು ಮತ್ತು ಸೋಂಕನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಶೂನ್ಯ-ಕೋವಿಡ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ಚೀನಾದಲ್ಲಿ ಮಾಸ್ ಟೆಸ್ಟಿಂಗ್, ವಿಸ್ತೃತ ಕ್ವಾರೆಂಟೈನ್ ಮತ್ತು ಮುಲಾಜಿಲ್ಲದೆ ಹೇರುವ ಲಾಕ್ ಡೌನ್ ಈಗಲೂ ಜಾರಿಯಲ್ಲಿವೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ