ವೇಲ್ಸ್ನಲ್ಲಿರುವ ಡಿಪಾರ್ಟ್ಮೆಂಟ್ ಸ್ಟೋರನ್ನು ನವೀಕರಿಸಲು ಅಗೆದಾಗ ಸಿಕ್ಕಿದ್ದು ಅಸಂಖ್ಯಾತ ಮಾನವ ದೇಹಗಳ ಅವಶೇಷಗಳು!
2013ರಲ್ಲಿ ಸದರಿ ಸ್ಟೋರ್ ನ ಆವರಣವನ್ನು ಮುಚ್ಚಲಾಗಿತ್ತು ಮತ್ತು ಪೆಂಬ್ರೋಕರ್ ಶೈರ್ ನ ಪುರಸಭೆಯು ಇದನ್ನು 6.3 ಮಿಲಿಯನ್ ಪೌಂಡ್ ಗಳ ವೆಚ್ಚದಲ್ಲಿ ನವೀಕರಣಗೊಳಿಸುತ್ತಿದೆ. ಹಳೆಯ ಒಕ್ಕಿ ವ್ಹೈಟ್ ಡಿಪಾರ್ಟ್ ಮೆಂಟ್ ಸ್ಟೋರನ್ನು ಒಂದು ಅತ್ಯಾಧುನಿಕ ಮಾರುಕಟ್ಟೆ ಪ್ರದೇಶವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ವೇಲ್ಸ್ ನಲ್ಲಿರುವ ಹಳೆಯ ಡಿಪಾರ್ಟ್ ಮೆಂಟ್ ಸ್ಟೋರ್ (department store) ಒಂದನ್ನು ಅಗೆದಾಗ ನೂರಾರು ದೇಹಗಳ ಅವಶೇಷಗಳು ಸಿಕ್ಕಿವೆ. ಪುರಾತತ್ವಶಾಸ್ತ್ರಜ್ಞರ (Archeological Experts) ಪ್ರಕಾರ ವೇಲ್ಸ್ ಹೇವರಪೋರ್ಡ್ ವೆಸ್ಟ್ ಒಕ್ಕಿ ವ್ಹೈಟ್ (Oaky White) ನಲ್ಲಿರುವ ಸ್ಟೋರ್ ನಲ್ಲಿ ಸಿಕ್ಕ ದೇಹಗಳ ಪೈಕಿ ಹಲವಾರು ಜನರ ಸಾವು ತೀವ್ರ ಸ್ವರೂಪದ ಹಿಂಸೆಯ ನಂತರ ಸಂಭವಿಸಿದೆ. ಒಂದು ವಾದದ ಪ್ರಕಾರ ವೆಲ್ಷ್ ಬಂಡಾಯ ನಾಯಕ ಒವೇನ್ ಗ್ಲಿಂಡರ್ 1405ರಲ್ಲಿ ಈ ನಗರದ ಮೇಲೆ ಆಕ್ರಮಣ ನಡೆಸಿದಾಗ ಅವರೆಲ್ಲ ಕೊಲ್ಲಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ.
ನಗರಾಭಿವೃದ್ಧಿ ಯೋಜನೆಯ ಅಂಗವಾಗಿ ಸ್ಟೋರ್ ಮುಂದೆ ಅಗೆಯುತ್ತಿದ್ದಾಗ ಭಯಾನಕವಾದ ಸಂಗತಿ ಬೆಳಕಿಗೆ ಬಂದಿದೆ ಎಂದು ವೇಲ್ಸ್ ಆನ್‌ಲೈನ್ ವರದಿಗಳು ತಿಳಿಸಿವೆ.
ಹಿಂದೊಮ್ಮೆ ಇದೇ ಸ್ಥಳದಲ್ಲಿ ಮಧ್ಯಕಾಲೀನ ಅಖಾಡ ಸ್ಥಿತಗೊಂಡಿತ್ತು.
ಈ ವರ್ಷದ ಆರಂಭದಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು 17 ದೇಹಗಳ ಅವಶೇಷಗಳನ್ನು ಪತ್ತೆ ಮಾಡಿದ್ದರು ಆದರೆ ಇನ್ನೂ ಅನೇಕ ದೇಹಗಳು ನೆಲದಲ್ಲಿ ಸ್ಟೋರ್ ಅಡಿಯಲ್ಲಿ ಹುದುಗಿರಬಹುದೆಂಬ ಶಂಕೆ ಅವರಲ್ಲಿತ್ತು.
ಈಗ ಅವರು ಮಕ್ಕಳು ಸೇರಿದಂತೆ 240 ಕ್ಕೂ ಹೆಚ್ಚು ಜನರ ಅವಶೇಷಗಳನ್ನು ಹೊರ ತೆಗೆದಿದ್ದಾರೆ.
ಪುರಾತತ್ತ್ವ ಶಾಸ್ತ್ರಜ್ಞರ ಈ ಅವಿಷ್ಕಾರ ಬಹಳ ಮಹತ್ವದ್ದಾಗಿದೆ ಎಂದು ಹೇಳಲಾಗಿದೆ.
ಡೈಫೆಡ್ ಆರ್ಕಿಯಲಾಜಿಕಲ್ ಟ್ರಸ್ಟ್‌ನ ಸದಸ್ಯರು ಈ ಸ್ಥಳವು ಸೇಂಟ್ ಸೇವಿಯರ್ಸ್‌ನ ಮಧ್ಯಕಾಲೀನ ಅಖಾಡವು ಎರಡನೇ ಸ್ಥಳಕ್ಕೆ ಸಂಬಂಧಿಸಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ, ಇದನ್ನು ಪುರಾತತ್ತ್ವ ಶಾಸ್ತ್ರಜ್ಞರು ಇದುವರೆಗೆ ಪತ್ತೆ ಮಾಡಿರಲಿಲ್ಲ.
ಸೇಂಟ್ ಸೇವಿಯರ್ಸ್‌ನ ಅಖಾಡವು 8 ಭಾರಿ ಶ್ರೀಮಂತ ಕಪ್ಪುಜಟ್ಟಿಗಳಿಗೆ (ಹುರಿಯಾಳು) ಸೇರಿದ ಮನೆಗಳನ್ನು ಒಳಗೊಂಡಿತ್ತು. ಜಮೀನ್ದಾರರು, ದೊರೆಗಳು ಮತ್ತು ಬ್ರಿಟಿಷ್ ಅರಸೊತ್ತಿಗೆಯ ಪ್ರತಿನಿಧಿಗಳಿಂದ ಅವರು ಆಸ್ತಿ ಪಾಸ್ತಿಯನ್ನು ಬಳುವಳಿಯಾಗಿ ಪಡೆದಿದ್ದರು.
ಧರ್ಮಪ್ರಚಾರ ಮತ್ತು ಬಡವ-ಬಲ್ಲಿದ ಹಾಗೂ ಅಸ್ವಸ್ಥರನ್ನು ಉಪಚರಿಸುವುದು ಈ ಜಟ್ಟಿಗಳು ತಮ್ಮ ಬದುಕಿನ ಗುರಿಯಾಗಿಸಿಕೊಂಡಿದ್ದರು.
ಕ್ರಿಸ್ತಶಕ 1258ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡವನ್ನು 1538ರಲಿ ಬ್ರಿಟಿಷ್ ದೊರೆ 8ನೇ ಹೆನ್ರಿ ಕೆಡವಿದ್ದ. ಆಗ ಅವನು ಧಾರ್ಮಿಕ ಕಟ್ಟಡಗಳನ್ನು ನಿರ್ನಾಮ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದ. ನೂರಾರು ವರ್ಷಗಳ ನಂತರ ಈ ಸ್ಥಳದಲ್ಲಿ ಒಕ್ಕಿ ವ್ಹೈಟ್ ಡಿಪಾರ್ಟ್ ಮೆಂಟ್ ಸ್ಟೋರ್ ತಲೆಯೆತ್ತಿತ್ತು. ಸುಮಾರು ಒಂದು ಶತಮಾನದವರೆಗೆ ಇದು ಜನಪ್ರಿಯ ಸ್ಟೋರ್ ಅನಿಸಿಕೊಂಡಿತ್ತು.
2013ರಲ್ಲಿ ಸದರಿ ಸ್ಟೋರ್ ನ ಆವರಣವನ್ನು ಮುಚ್ಚಲಾಗಿತ್ತು ಮತ್ತು ಪೆಂಬ್ರೋಕರ್ ಶೈರ್ ನ ಪುರಸಭೆಯು ಇದನ್ನು 6.3 ಮಿಲಿಯನ್ ಪೌಂಡ್ ಗಳ ವೆಚ್ಚದಲ್ಲಿ ನವೀಕರಣಗೊಳಿಸುತ್ತಿದೆ. ಹಳೆಯ ಒಕ್ಕಿ ವ್ಹೈಟ್ ಡಿಪಾರ್ಟ್ ಮೆಂಟ್ ಸ್ಟೋರನ್ನು ಒಂದು ಅತ್ಯಾಧುನಿಕ ಮಾರುಕಟ್ಟೆ ಪ್ರದೇಶವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ಮಧ್ಯ ಪ್ರಾಚೀನ ಯುಗದಲ್ಲಿ ಜಟ್ಟಿಗಳ ಅಖಾಡದಲ್ಲಿ ಹೆಣಗಳನ್ನು ಹೂತಿಡಲಾಗಿದೆ ಎಂದರೆ ಅದು ಸತ್ತವರಿಗೆ ಸಿಕ್ಕಿರುವ ರಾಜಮರ್ಯಾದೆಯೇ, ಯಾಕೆಂದರೆ ಇದೊಂದು ಪ್ರತಿಷ್ಠಿತ ಸ್ಥಳವಾಗಿದೆ ಎಂದು ಡೈಫೆಡ್ ಆರ್ಕಿಯಾಲಾಜಿಕಲ್ ಟ್ರಸ್ಟ್ ಮ್ಯಾನೇಜರ್ ಆಂಡ್ರ್ಯೂ ಶೊಬ್ರೂಕ್ ಬಿಬಿಸಿಗೆ ನೀಡಿದ ಸಂದರ್ಶನಲ್ಲಿ ಹೇಳಿದ್ದಾರೆ.
ಈ ಸ್ಥಳದಲ್ಲಿ ವಿವಿಧ ವರ್ಗಗಳ ಜನ ವಾಸವಾಗಿದ್ದರು, ಶ್ರೀಮಂತರು, ಬಡವರು, ಮಧ್ಯಮ ವರ್ಗದವರು-ಎಲ್ಲ ರೀತಿಯ ಜನ ಇಲ್ಲಿದ್ದರು, ಅಂತ ಅವರು ಹೇಳಿದ್ದಾರೆ. 18ನೇ ಶತಮಾನದ ಆರಂಭದವರೆಗೆ ಈ ಜಾಗವನ್ನು ರುದ್ರಭೂಮಿಯಾಗಿ ಉಪಯೋಗಿಸಿರಬಹುದೆಂದು ಹೇಳಲಾಗುತ್ತಿದೆ.