ಕೈವ್ನಲ್ಲಿ ರಷ್ಯಾದಿಂದ ವೈಮಾನಿಕ ದಾಳಿ; ಉಕ್ರೇನ್‌ನ ಭಾರತೀಯ ನಿವಾಸಿಗಳಿಗೆ ಎಚ್ಚರದಿಂದಿರಲು ರಾಯಭಾರ ಕಚೇರಿ ಸೂಚನೆ
ಉಕ್ರೇನ್‌ನಾದ್ಯಂತ ರಷ್ಯಾ ನಡೆಸಿದ ಬೃಹತ್ ಕ್ಷಿಪಣಿ ದಾಳಿಯಿಂದಾಗಿ ಕೈವ್ನಲ್ಲಿ 10 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ.

ಕೈವ್: ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾದ ಅಧಿಕಾರಿಗಳು ಕೈವ್ ಮೇಲೆ ಪುನರಾವರ್ತಿತ ವೈಮಾನಿಕ ದಾಳಿಗೆ (Air Strike) ಆದೇಶಿಸಿದ್ದು, ಇದು ಹಲವಾರು ನಾಗರಿಕರ ಸಾವಿಗೆ ಕಾರಣವಾಯಿತು. ಉಕ್ರೇನ್ (Ukraine) ಮೇಲೆ ಮಾರಣಾಂತಿಕ ವೈಮಾನಿಕ ದಾಳಿಯ ನಂತರ ಭಾರತೀಯ ಅಧಿಕಾರಿಗಳು ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಇಡೀ ದೇಶದ ಹಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ರಷ್ಯಾ (Russia) ಕನಿಷ್ಠ 75 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್ ಹೇಳಿದೆ. ಹೀಗಾಗಿ, ಉಕ್ರೇನ್‌ನಲ್ಲಿ ಆತಂಕ ಎದುರಾಗಿದೆ.
ಉಕ್ರೇನ್‌ನಾದ್ಯಂತ ರಷ್ಯಾ ನಡೆಸಿದ ಬೃಹತ್ ಕ್ಷಿಪಣಿ ದಾಳಿಯಿಂದಾಗಿ ಕೈವ್ನಲ್ಲಿ 10 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ರಷ್ಯಾ ಸೇನೆ ನಡೆಸಿದ ವೈಮಾನಿಕ ದಾಳಿಯ ನಂತರ ಉಕ್ರೇನ್‌ನಲ್ಲಿನ ಭಾರತೀಯ ಪ್ರಜೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್‌ನಲ್ಲಿ ಅನಿವಾರ್ಯತೆಯಿಲ್ಲದೆ ಯಾರೂ ಪ್ರಯಾಣ ಮಾಡದಂತೆ ಭಾರತ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಅಲ್ಲದೆ, ಸ್ಥಳೀಯ ಅಧಿಕಾರಿಗಳು ಹೊರಡಿಸಿದ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆದೇಶಿಸಿದೆ.
ಇದನ್ನೂ ಓದಿ: ಉಕ್ರೇನ್ ದೇಶದ ಝಪೋರಿಝಿಯಾ ನಗರದಲ್ಲಿ ತಡರಾತ್ರಿ ರಷ್ಯಾ ಕ್ಷಿಪಣಿ ದಾಳಿ: 17 ಮಂದಿ ಸಾವು
ಕೈವ್ ಸೇರಿದಂತೆ ಅನೇಕ ಉಕ್ರೇನಿಯನ್ ನಗರಗಳ ವಿರುದ್ಧ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಈ ಸಲಹೆ ಬಂದಿದೆ. ಉಕ್ರೇನ್‌ನಾದ್ಯಂತ ನಡೆದ ದಾಳಿಗಳಲ್ಲಿ ಸುಮಾರು 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60 ಜನರು ಗಾಯಗೊಂಡಿದ್ದಾರೆ. ಉಕ್ರೇನ್‌ನಲ್ಲಿ ಪ್ರಸ್ತುತ ಉಲ್ಬಣಗೊಳ್ಳುತ್ತಿರುವ ಹಗೆತನದ ದೃಷ್ಟಿಯಿಂದ, ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಮತ್ತು ಒಳಗೆ ಎಲ್ಲಾ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ. ಅವರು ಉಕ್ರೇನ್ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಹೊರಡಿಸಿದ ಸುರಕ್ಷತೆ ಮತ್ತು ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಲಹೆಯನ್ನು ನೀಡಲಾಗಿದೆ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: Missile Attack: ಉಕ್ರೇನ್ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ: 8 ಮಂದಿ ಸಾವು, 24 ಮಂದಿಗೆ ಗಂಭೀರ ಗಾಯ
ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳು ದೇಶದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ರಾಯಭಾರ ಕಚೇರಿಗೆ ತಿಳಿಸುವ ನಿರೀಕ್ಷೆಯಿದೆ. ಇದರಿಂದಾಗಿ ತುರ್ತು ಸಮಯ ಬಂದಾಗ ಭಾರತ ಸರ್ಕಾರವು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನ ಮೇಲೆ ಆಕ್ರಮಣ ಮಾಡುವ ರಷ್ಯಾದ ಕ್ರಮಗಳನ್ನು ಭಾರತ ಬಹಿರಂಗವಾಗಿ ಖಂಡಿಸದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಆರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದಾಗ “ಇದು ಯುದ್ಧದ ಸಮಯವಲ್ಲ” ಎಂದು ಹೇಳಿದ್ದರು.




