ಅನಾಥನೆಂದು ನಂಬಿಸಿ ಶ್ರೀಮಂತ ಮಹಿಳೆಯರಿಂದ ದುಡ್ಡು ಪೀಕಿ ವಂಚಿಸುತ್ತಿದ್ದ ಬ್ರೆಜಿಲ್ ನ ‘ಟಿಂಡರ್ ಸ್ವಿಂಡ್ಲರ್’ ಜೈಲು ಸೇರಿದ್ದಾನೆ!
ಆ ಏಳು ಮಹಿಳೆಯರು ಪೊಲೀಸರಿಗೆ ದೂರು ನೀಡಿದ ನಂತರ ಪೋಲಿಸರು ಅವನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸರ ಕೈಗೆ ಅವನು ಸುಲಭವಾಗೇನೂ ಸಿಕ್ಕಿಲ್ಲ. ಕಾರನ್ನು ವೇಗವಾಗಿ ಓಡಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.
ಮಹಿಳೆಯರನ್ನು ಅದರಲ್ಲೂ ವಿಶೇಷವಾಗಿ ಶ್ರೀಮಂತ ಹೆಂಗಸರನ್ನು ವಂಚಿಸಲು ಬ್ರೆಜಿಲ್ನ ಈ ವ್ಯಕ್ತಿ ಅಳವಡಿಸಿಕೊಂಡಿದ್ದ ವಿಧಾನ ಅದ್ಭುತವೇ. ಆದರೆ, ಕಳ್ಳತನ, ಮೋಸ, ವಂಚನೆಗಳಿಗೆ ಅಲ್ಪಾಯುಷ್ಯ ಅನ್ನೋದನ್ನು ಅವನು ಮರೆತುಬಿಟ್ಟಿದ್ದ. ‘ಟಿಂಡರ್ ಸ್ವಿಂಡ್ಲರ್’ (Tinder Swindler) ಅಂತ ಪೊಲೀಸರಿಂದ ಕರೆಸಿಕೊಳ್ಳುತ್ತಿರುವ 36-ವರ್ಷ-ವಯಸ್ಸಿ ರೆನನ್ ಆಗಸ್ಟೋ ಗೋಮ್ಸ್ (Renan Augusto Gomes) ತಾನೊಬ್ಬ ಅನಾಥ ಅಂತ ಹೇಳಿಕೊಂಡು 7 ಶ್ರೀಮಂತ ಮಹಿಳೆಯರನ್ನು (wealthy women) ವಂಚಿಸಿದ್ದಾನೆ. ದಾರುಣ ಕತೆಗಳನ್ನು ಸೃಷ್ಟಿಸಿ ಅವರನ್ನು ನಂಬಿಸಿದ್ದಾನೆ, ತಂದೆ-ತಾಯಿಗಳಿಬ್ಬರೂ ಕಾರಿ ಅಪಫಾತವೊಂದರಲ್ಲಿ ಸತ್ತಿದ್ದಾರೆ, ತನಗೆ ಬಂಧು ಬಳಗ ಯಾರೂ ಇಲ್ಲ ಅಂತ ಹೇಳಿಕೊಂಡು ಅವರಿಗೆ ತನ್ನ ಮೇಲೆ ಕನಿಕರ ಹುಟ್ಟುವಂತೆ ಮಾಡಿ ಮೋಸ ಮಾಡಿದ್ದಾನೆ.
ಆ ಏಳು ಮಹಿಳೆಯರು ಪೊಲೀಸರಿಗೆ ದೂರು ನೀಡಿದ ನಂತರ ಪೋಲಿಸರು ಅವನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸರ ಕೈಗೆ ಅವನು ಸುಲಭವಾಗೇನೂ ಸಿಕ್ಕಿಲ್ಲ. ಕಾರನ್ನು ವೇಗವಾಗಿ ಓಡಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಕಾರ್ ಚೇಸಿಂಗನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
A Polícia de São Paulo prendeu um homem que aplicava golpe usando aplicativo de relacionamento. As investigações apontaram que Renan Augusto Gomes tinha vários perfis: https://t.co/eobwCW3Wgo #BomDiaBrasil pic.twitter.com/pJPfyAWAOk
— Bom Dia Brasil (@BomDiaBrasil) September 23, 2022
ಬ್ರೆಜಿಲ್ ನ ಸಾವೋ ಬರ್ನಾರ್ಡೊ ಡೊ ಕಾಂಪೋ ಮುನಿಸಿಪಲ್ ಪ್ರದೇಶದಲ್ಲಿ ಒಂದು ಸಿನಿಮೀಯ ಶೈಲಿ ಕಾರ್ ಚೇಸಿಂಗ್ ಬಳಿಕ ಪೊಲೀಸರು ಗೋಮ್ಸ್ ನನ್ನು ಬಂಧಿಸಿದ್ದಾರೆ. ಅವನು ಹೇಳಿದ ಸುಳ್ಳು ಕತೆಯನ್ನು ನಂಬಿ ತಾನು 38,042 ಡಾಲರ್ (ಸುಮಾರರು 31 ಲಕ್ಷ ರೂಪಾಯಿ) ಕಳೆದುಕೊಂಡಿರುವುದಾಗಿ ಒಬ್ಬ ಮಹಿಳೆ ಹೇಳಿದ್ದಾಳೆ.
ಬ್ರೆಜಿಲ್ ನ್ಯೂಸ್ ಪೋರ್ಟಲ್ ಜಿ1 ವರದಿಯೊಂದರ ಪ್ರಕಾರ ಗೋಮ್ಸ್ ಲೊವೂ, ಹ್ಯಾಪ್ ಮತ್ತು ಟಿಂಡರ್ ಮೊದಲಾದ ಡೇಟಿಂಗ್ ಌಪ್ ಗಳಲ್ಲಿ ಆಗಸ್ಟೋ ಕೆಲ್ಲರ್ ಹೆಸರನ್ನು ಬಳಸಿ ಮಹಿಳೆಯರೊಂದಿಗೆ ಸ್ನೇಹ ಬೆಳೆಸುತ್ತಿದ್ದ ಅಂತ ಪೊಲೀಸರು ಹೇಳಿದ್ದಾರೆ. ಅಪ್ಲಿಕೇಶನ್ ಗಳಿಂದಲೇ ಅವರೊಂದಿಗೆ ಮಾತುಕತೆ ನಡೆಸಿ ಕಟ್ಟುಕತೆ ಹೇಳುತ್ತಿದ್ದ. ತನ್ನ ತಂದೆ ತಾಯಿ ಜರ್ಮನ್ ದೇಶದವರು ಮತ್ತು ಅವರು ಅರ್ಕಾಟಾಬುಲಾದಲ್ಲಿ ನಡೆದ ಕಾರು ಅಪಘಾತವೊಂದರಲ್ಲಿ ಮರಣಿಸಿದರು ಅಂತ ಅವರು ನಂಬುವ ಹಾಗೆ ಕತೆ ಕಟ್ಟುತ್ತಿದ್ದ.
ವೃತ್ತಿಯ ಬಗ್ಗೆ ಮಾತಾಡುವಾಗ ಅವನು ತಾನೊಬ್ಬ ಸಿವಿಲ್ ಎಂಜಿನೀಯರ್ ಅಂತ ಹೇಳಿ ಅಡುಗೆ ಮಾಡುವುದು ತನ್ನ ನೆಚ್ಚಿನ ಹವ್ಯಾಸ ಎನ್ನುತ್ತಿದ್ದನಂತೆ. ತಾನೊಂದು ಕಮಿಟೆಡ್ ರಿಲೇಶನ್ ಶಿಪ್ ಗಾಗಿ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಚ್ಯಾಟ್ ಮಾಡುತ್ತಿದ್ದನಂತೆ.
ನಂಬಿಸಿ ವಂಚಿಸುವಲ್ಲಿ ಪರಿಣಿತಿ ಸಾಧಿಸಿದ್ದ ಗೋಮ್ಸ್ ಬಳಿಕ ಮಹಿಳೆಯರೊಂದಿಗೆ ಡೇಟಿಂಗ್ ಶುರುಮಾಡುತ್ತಿದ್ದ ಅಂತ ಪೊಲೀಸರು ಹೇಳಿದ್ದಾರೆ. ಉತ್ತಮ ಸಂಪಾದನೆಯ 34 ರಿಂದ 40 ರ ನಡುವಿನ ಪ್ರಾಯದ ಹೆಂಗಸರನ್ನು ಅವನು ಆರಿಸಿಕೊಳ್ಳುತ್ತಿದ್ದ. ಡೇಟಿಂಗ್ ಮಾಡುವಾಗಲೇ ಮಹಿಳೆಯರ ಕೌಟುಂಬಿಕ ಹಿನ್ನೆಲೆಗಳನ್ನು ತಿಳಿದುಕೊಂಡು ಬಿಡುತ್ತಿದ್ದ.
ಅವರಿಗೆ ತನ್ನ ಮೇಲೆ ಪೂರ್ತಿ ವಿಶ್ವಾಸ ಹುಟ್ಟಿದೆ ಅಂತ ಮನವರಿಕೆಯಾದ ಮೇಲೆ ಗೋಮ್ಸ್ ತನಗೆ ಭಯಂಕರ ಆರ್ಥಿಕ ಸಂಕಷ್ಟ ಉಂಟಾಗಿದೆ ಅಂತ ಹೇಳಿ ಅವರಿಂದ ಭಾರಿ ಮೊತ್ತದ ಸಾಲ ತೆಗೆದುಕೊಳ್ಳುತ್ತಿದ್ದ. ಸಾಲ ಪಡೆದ ನಂತರ ಅದನ್ನು ನೀಡಿದವಳಿಂದ ಕ್ರಮೇಣ ದೂರವಾಗಿ ಮತ್ತೊಬ್ಬಳಿಗೆ ಬಲೆ ಬೀಸುತ್ತಿದ್ದ.
Published On - 7:24 pm, Thu, 29 September 22