ಅಫ್ಘಾನಿಸ್ತಾನದಿಂದ ಬಂದ ಅಮೆರಿಕದ ಮಿಲಿಟರಿ ವಿಮಾನದ ಚಕ್ರದ ಸುತ್ತ ಅಂಟಿತ್ತು ಮನುಷ್ಯರ ಪಳೆಯುಳಿಕೆ!
Afghanistan Crisis: ಕಾಬೂಲ್‌ನಿಂದ ಅಮೆರಿಕಕ್ಕೆ ಬಂದಿಳಿದ ಮಿಲಿಟರಿ ವಿಮಾನದ ಚಕ್ರದ ಸುತ್ತಲೂ ಮನುಷ್ಯರ ಪಳೆಯುಳಿಕೆ ಅಂಟಿಕೊಂಡಿರುವುದು ಪತ್ತೆಯಾಗಿದೆ.
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನಿಗರ ವಶವಾದ ನಂತರ ಕಾಬೂಲ್ ವಿಮಾನ ನಿಲ್ದಾಣದಿಂದ (Kabul Airport) ಅಮೆರಿಕಕ್ಕೆ ಜನರನ್ನು ಹೊತ್ತು ಹೊರಟಿದ್ದ ಮಿಲಿಟರಿ ವಿಮಾನದ ಚಕ್ರ, ಕಿಟಕಿಯನ್ನು ಹಿಡಿದು ಹತ್ತಿದ ಅಫ್ಘಾನಿಗರು (Afghanistan) ಕುರಿಮಂದೆಯಂತೆ ವಿಮಾನದಲ್ಲಿ ತೂರಿಕೊಂಡಿದ್ದರು. ವಿಮಾನ ಟೇಕಾಫ್ ಆಗುತ್ತಿದ್ದಂತೆ ಅದರ ಹಿಂದೆಯೇ ಓಡಿದ ನೂರಾರು ಜನರು ಚಕ್ರಗಳನ್ನು ಹಿಡಿದು ನೇತಾಡಿದ್ದರು. ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ವಿಮಾನದ ಚಕ್ರದಲ್ಲಿ ನೇತಾಡುತ್ತಿದ್ದ ಇಬ್ಬರು ಆಕಾಶದಿಂದ ಕೆಳಗೆ ಬಿದ್ದ ವಿಡಿಯೋ ಆಘಾತಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ಕಾಬೂಲ್‌ನಿಂದ ಅಮೆರಿಕಕ್ಕೆ ಬಂದಿಳಿದ ಮಿಲಿಟರಿ ವಿಮಾನದ ಚಕ್ರದ ಸುತ್ತಲೂ ಮನುಷ್ಯರ ಪಳೆಯುಳಿಕೆ ಅಂಟಿಕೊಂಡಿರುವುದು ಪತ್ತೆಯಾಗಿದೆ.
ಕಾಬೂಲ್‌ನಿಂದ ವಿಮಾನಗಳು ಹೊರಡುತ್ತಿದ್ದಂತೆ ಅಫ್ಘಾನ್ ಬಿಟ್ಟು ಬೇರೆ ದೇಶಕ್ಕೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದ ಜನರು ಸಿಕ್ಕ ಸಿಕ್ಕ ವಿಮಾನಗಳನ್ನು ಹತ್ತಿಕೊಂಡಿದ್ದಾರೆ. ಈ ವೇಳೆ ವಿಮಾನದ ಚಕ್ರಕ್ಕೂ ಸಿಲುಕಿ ಹಲವರು ಗಾಯಗೊಂಡಿದ್ದರು. ಇನ್ನು ಕೆಲವರು ಸಾವನ್ನಪ್ಪಿದ್ದರು. ಕಾಬೂಲ್‌ನಿಂದ ಅಮೆರಿಕಕ್ಕೆ ಬಂದ ಸಿ-17 ಗ್ಲೋಬ್ಮಾಸ್ಟರ್ ವಿಮಾನದ ಚಕ್ರದ ಸುತ್ತ ಮನುಷ್ಯರ ರಕ್ತ, ಮಾಂಸದ ತುಂಡುಗಳು ಅಂಟಿಕೊಂಡಿದ್ದವು. ಇದು ಅಫ್ಘಾನ್ನ ಈಗಿನ ಪರಿಸ್ಥಿತಿಗೆ ಭಯಾನಕ ಉದಾಹರಣೆಯಾಗಿದೆ.
WOW — look at the scene outside of the Kabul airport! Keep in mind there are still an estimated 10,000 Americans in Afghanistan (WaPo)… https://t.co/VCEVOh1w0w
— Kayleigh McEnany (@kayleighmcenany) August 17, 2021
ಕಾಬೂಲ್‌ನಿಂದ ಟೇಕಾಫ್ ಆಗಿದ್ದ ವಿಮಾನದಿಂದ ಕೆಳಗೆ ಬಿದ್ದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ. ವಿಮಾನದ ಟೈರ್ ಸಮೀಪದ ಹಿಡಿಕೆಗೆ ಕಟ್ಟಿಕೊಂಡಿದ್ದ ಈ ಪ್ರಯಾಣಿಕರು ವಿಮಾನ ಟೇಕಾಫ್ ಆದ ನಿಮಿಷಗಳ ಬಳಿಕ ಕೆಳಗೆ ಬಿದ್ದಿದ್ದರು. ಈ ವಿಮಾನವು ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿತ್ತು. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲೀಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆ ಅಲ್ಲಿನ ಜನರಲ್ಲಿ ಆತಂಕ ಶುರುವಾಗಿದೆ. ಸಾವಿರಾರು ಜನರು ದೇಶಬಿಟ್ಟು ಹೊರಗೆ ಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿದ್ದು, ನೂಕಾಟ-ತಳ್ಳಾಟ ಸಾಮಾನ್ಯವಾಗಿತ್ತು. ಜನರನ್ನು ನಿಯಂತ್ರಿಸಲು ಅಮೆರಿಕ ಸೇನಾಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿತ್ತು.
The image (not shown here) of people falling from this US plane leaving Kabul represents a failure of humanity Then we have the audacity to say we won’t take refugees Neighbouring countries took millions over the years, because it’s the right thing to do pic.twitter.com/7LBBznOBXY
— nazir afzal (@nazirafzal) August 16, 2021
ಬಸ್ಸು ರೈಲುಗಳನ್ನು ಏರಲು ಜನಸಾಮಾನ್ಯರು ಕರ್ಚೀಫು, ಟವೆಲ್ಲುಗಳನ್ನು ಹಿಡಿದು ಗುಂಪುಗಟ್ಟಿ ಅದರ ಹಿಂದೆ ಓಡುವಂತೆ ವಿಮಾನ ಏರಲು ಅಫ್ಘಾನ್ ಜನರು ಮುಗಿಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೂ ಮುನ್ನ ವಿಮಾನ ನಿಲ್ದಾಣಕ್ಕೆ ಹರಿದು ಬಂದ ಜನಸಮೂಹವನ್ನು ನಿಯಂತ್ರಿಸಲು ಅಮೆರಿಕ ತನ್ನ ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಪರಿಸ್ಥಿತಿ ನಿಯಂತ್ರಣ ಮೀರಿದಾಗ ಅವರು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆಯೂ ವರದಿಯಾಗಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಲ್ಲಿ ಸುಮಾರು 10 ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಘೋರಾತಿ ಘೋರ; ತಾಲಿಬಾನ್ ಸಿದ್ಧಾಂತ ಹೇಗಿತ್ತು? ಈಗ ಏನ್ ಹೇಳ್ತಿದೆ?
Video: ಕಾಬೂಲ್ ಏರ್ಪೋರ್ಟ್ ನುಗ್ಗಲು ಯತ್ನಿಸಿದ ಅಫ್ಘಾನ್ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ
(Afghanistan Crisis: Human Remains found in wheel well of Military plane which departed from Kabul Airport to United States)
Published On - 1:58 pm, Wed, 18 August 21