ಬ್ರಿಟನ್ನಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಇಳಿಕೆಯಾಗುತ್ತಿವೆ. ಇದೀಗ ಸರ್ಕಾರ ಪ್ರಯಾಣದ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ. ಉದ್ದೇಶಿತ ಬದಲಾವಣೆಗಳ ಪ್ರಕಾರ, ಬ್ರಿಟನ್ಗೆ ತೆರಳುವ ಪ್ರಯಾಣಿಕರು ಸಂಪೂರ್ಣ ಲಸಿಕೆ ಪಡೆದಿದ್ದರೆ ಅವರು ಯಾವುದೇ ಕೊರೊನಾ ಟೆಸ್ಟ್ಗೆ ಒಳಪಡಬೇಕಿಲ್ಲ. ಬದಲಾಗಿ ನೇರವಾಗಿ ಅವರು ಬ್ರಿಟನ್ ಪ್ರವೇಶಿಸಿ, ಸುತ್ತಾಡಬಹುದು ಎಂದು ಟೈಮ್ಸ್ ವರದಿ ಮಾಡಿದೆ. ಈ ಕುರಿತು ಬ್ರಿಟನ್ ಆರೋಗ್ಯ ಸಚಿವ ಸಾಜಿದ್ ಜಾವಿದ್ ಕೂಡ ಒಪ್ಪಿದ್ದು, ಸಾರಿಗೆ ಸಚಿವ ಗ್ರಾಂಟ್ ಶಾಪ್ಸ್ ಜನವರಿ 26ರಂದು ಘೋಷಣೆ ಹೊರಡಿಸಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇಂಗ್ಲೆಂಡಗ್ ಪ್ರಧಾನಿ ಬೋರಿಸ್ ಜಾನ್ಸನ್ ಸದ್ಯ ಜಾರಿಯಲ್ಲಿರುವ ‘ಪ್ಲಾನ್ ಬಿ’ ನಿಯಮಾವಳಿಗಳನ್ನು ವಾಪಸ್ ಪಡೆಯಲು ಸಿದ್ಧರಾಗಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿತ್ತು. ಅಲ್ಲದೇ ವರ್ಕ್ ಫ್ರಮ್ ಹೋಮ್ ನಿಯಮಾವಳಿಗಳು ಹಾಗೂ ಕೊವಿಡ್ ಪ್ರಯಾಣ ನಿಯಮಾವಳಿಗಳಲ್ಲೂ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮಾಸ್ಕ್ ಧರಿಸುವ ನಿಯಮ ಮೊದಲಿನಂತೆಯೇ ಮುಂದುವರೆಯಲಿದೆ. ಆದಷ್ಟು ಶೀಘ್ರವಾಗಿ ಈ ಕುರಿತು ಸರ್ಕಾರ ಹೊಸ ನಿಯಮಾವಳಿ ಪ್ರಕಟಿಸಲಿದೆ. ಸದ್ಯ ಇಂಗ್ಲೆಂಡ್ನಲ್ಲಿ ಕೊವಿಡ್ ಪ್ರಸರಣವನ್ನು ತಡೆಯಲು ಕೈಗೊಂಡ ‘ಪ್ಲಾನ್ ಬಿ’ ನಿಯಮಾವಳಿ ಜಾರಿಯಲ್ಲಿದೆ. ಇದರ ಅಡಿಯಲ್ಲಿ ಜನರು ಮನೆಯಿಂದಲೇ ಕೆಲಸ ನಿರ್ವಹಿಸುವುದು, ದೈಹಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಪ್ರಯಾಣಕ್ಕೆ ಪಾಸ್ಗಳನ್ನು ಒಳಗೊಳ್ಳಬೇಕಾಗಿದೆ.
ಆದರೆ ಬ್ರಿಟನ್ನ ವೈಜ್ಞಾನಿಕ ಸಲಹಾ ಸಮಿತಿ ಸರ್ಕಾರದ ಹೊಸ ನಿರ್ಧಾರದ ಸಂಭಾವ್ಯ ಸಮಸ್ಯೆಗಳ ಕುರಿತು ಮುನ್ನೆಚ್ಚರಿಕೆ ನೀಡಿದೆ. ಬ್ರಿಟನ್ನಲ್ಲಿ ಕಳೆದ ವಾರ ಸರಿಸುಮಾರು 2 ಲಕ್ಷ ದೈನಂದಿನ ಪ್ರಕರಣ ವರದಿಯಾಗಿದ್ದವು. ಇದೀಗ ದೈನಂದಿನ ಪ್ರಕರಣಗಳು ಸುಮಾರು 80,000ದ ಆಸುಪಾಸಿಗೆ ಇಳಿದಿವೆ.
ಇದನ್ನೂ ಓದಿ:
ನಿಕ್ ಜೋನಸ್ ಜತೆ ಮಗು ಪಡೆಯೋ ವಿಚಾರದ ಬಗ್ಗೆ ಮೌನ ಮುರಿದ ಪ್ರಿಯಾಂಕಾ ಚೋಪ್ರಾ
‘ಹೂ ಅಂತೀಯಾ ಮಾವ..’ ಹಾಡಿಗಾಗಿ ಸಮಂತಾಗೆ 5 ಕೋಟಿ ರೂ. ಸಂಭಾವನೆ? ಅಷ್ಟು ದುಬಾರಿ ಯಾಕೆ?