ನಿಕ್​ ಜೋನಸ್ ಜತೆ ಮಗು ಪಡೆಯೋ ವಿಚಾರದ ಬಗ್ಗೆ ಮೌನ ಮುರಿದ ಪ್ರಿಯಾಂಕಾ ಚೋಪ್ರಾ

ನಿಕ್​ ಜೋನಸ್ ಜತೆ ಮಗು ಪಡೆಯೋ ವಿಚಾರದ ಬಗ್ಗೆ ಮೌನ ಮುರಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​

ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು 2018ರಲ್ಲಿ ಮದುವೆ ಆಗಿದ್ದರು. ಆ ಬಳಿಕ ಅವರು ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಸದ್ಯ, ಹಾಲಿವುಡ್​ನಲ್ಲಿ ಬ್ಯುಸಿ ಇರುವ ಅವರು, ನ್ಯೂಯಾರ್ಕ್​ನಲ್ಲಿ ಐಷಾರಾಮಿ ಹೋಟೆಲ್​ ಆರಂಭಿಸಿದ್ದಾರೆ.

TV9kannada Web Team

| Edited By: Rajesh Duggumane

Jan 16, 2022 | 6:30 AM

ಸೆಲೆಬ್ರಿಟಿಗಳ ಜೀವನದ ಬಗ್ಗೆ ತಿಳಿದುಕೊಳ್ಳೋಕೆ ಅಭಿಮಾನಿಗಳಿಗೆ ಸಾಕಷ್ಟು ಆಸಕ್ತಿ ಇರುತ್ತದೆ. ಅದರಲ್ಲೂ ಯಾವುದೇ ಜೋಡಿ ಮದುವೆ ಆದರೆ, ಆ ದಂಪತಿಗೆ ಎದುರಾಗುವ ಸಾಮಾನ್ಯ ಪ್ರಶ್ನೆ ‘ಮಗು ಹೊಂದೋದು ಯಾವಾಗ?’. ಈ ಪ್ರಶ್ನೆಗೆ ಉತ್ತರಿಸೋಕೆ ಬಹುತೇಕ ಸೆಲೆಬ್ರಿಟಿಗಳು ಹಿಂಜರಿಯುತ್ತಾರೆ. ಈ ವಿಚಾರದಲ್ಲಿ  ಗುಟ್ಟು ಕಾಯ್ದುಕೊಳ್ಳುತ್ತಾರೆ. ಕೆಲ ವರ್ಷಗಳ ಹಿಂದೆ ಮದುವೆ ಆದ ಬಾಲಿವುಡ್​ (Bollywood) ನಟಿ ನಟಿ ಪ್ರಿಯಾಂಕಾ ಚೋಪ್ರಾಗೂ (Priyanka Chopra) ಇದೇ ಪ್ರಶ್ನೆ ಎದುರಾಗಿದೆ. ಇದಕ್ಕೆ ಮುಚ್ಚುಮರೆ ಇಲ್ಲದೆ ಅವರು ಉತ್ತರಿಸಿದ್ದಾರೆ. ಹಾಗಾದರೆ, ಅವರ ಉತ್ತರ ಏನು? ಪ್ರಶ್ನೆಗೆ ಇಲ್ಲಿದೆ ಉತ್ತರ.

ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು 2018ರಲ್ಲಿ ಮದುವೆ ಆಗಿದ್ದರು. ಆ ಬಳಿಕ ಅವರು ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಸದ್ಯ, ಹಾಲಿವುಡ್​ನಲ್ಲಿ ಬ್ಯುಸಿ ಇರುವ ಅವರು, ನ್ಯೂಯಾರ್ಕ್​ನಲ್ಲಿ ಐಷಾರಾಮಿ ಹೋಟೆಲ್​ ಆರಂಭಿಸಿದ್ದಾರೆ. ಇನ್ನು, ನಿಕ್​ ಜೋನಸ್​ ಕೂಡ ಬೇರೆಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, ಇವರಿಗೆ ಪರಸ್ಪರ ಸಮಯ ಕೊಟ್ಟುಕೊಳ್ಳೋಕೆ ಸಾಧ್ಯವಾಗುತ್ತಿಲ್ಲ.

ನಿಕ್​ ಹಾಗೂ ಪ್ರಿಯಾಂಕಾ ಇಬ್ಬರೂ ಬೇರೆಬೇರೆ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಈ ಸಂದರ್ಭದಲ್ಲಿ ಮಗು ಹೊಂದುವುದು ಬೇಡ ಎನ್ನುವ ನಿರ್ಧಾರಕ್ಕೆ ಇವರು ಬಂದಿದ್ದಾರೆ. ಮಗು ಹುಟ್ಟಿದ ನಂತರದಲ್ಲಿ ಸಂಪೂರ್ಣವಾಗಿ ಅದರ ಆರೈಕೆಯಲ್ಲಿ ಬ್ಯುಸಿ ಆಗಬೇಕು. ಒಂದಷ್ಟು ವರ್ಷ ಮಗುವಿಗಾಗಿ ಮುಡಿಪಿಡಬೇಕು. ಈ ಕಾರಣಕ್ಕೆ ಪ್ರಿಯಾಂಕಾ ಇನ್ನೂ ಆ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಗುವನ್ನು ಹೊಂದಬೇಕು ಎಂಬುದು ದೊಡ್ಡ ಆಸೆಗಳಲ್ಲಿ ಒಂದು. ದೇವರ ಅನುಗ್ರಹದಿಂದ ಅದು ಯಾವಾಗ ಆಗುತ್ತದೆಯೋ ಆಗಲಿ. ನಾವಿಬ್ಬರೂ ನಮ್ಮ ಕೆಲಸಗಳಲ್ಲಿ ಬ್ಯುಸಿ ಇದ್ದೇವೆ. ಮಗು ಹುಟ್ಟಿದ ನಂತರದಲ್ಲಿ ಬಣ್ಣದ ಲೋಕದಲ್ಲಿ ತೊಡಗಿಕೊಳ್ಳುವುದನ್ನು ಕಡಿಮೆ ಮಾಡಲು ನಾವಿಬ್ಬರೂ ಸಿದ್ಧರಿದ್ದೇವೆ’ ಎಂದಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕಾ ಚೋಪ್ರಾ ಅವರು ಕಳೆದ ವರ್ಷ ಇನ್​ಸ್ಟ್ರಾಗ್ರಾಮ್​ನಲ್ಲಿದ್ದ ಜೋನಸ್​ ಸರ್​ನೇಮ್​ಅನ್ನು ತೆಗೆದು ಹಾಕಿದ್ದರು. ಇದಾದ ಬಳಿಕ ಅವರ ವಿಚ್ಛೇದನ ವದಂತಿ ದೊಡ್ಡ ಮಟ್ಟದಲ್ಲಿ ಹೈಲೈಟ್​ ಆಗಿತ್ತು. ‘ಟ್ವಿಟರ್​ ಹಾಗೂ ಇನ್​​ಸ್ಟ್ರಾಗ್ರಾಮ್​ನಲ್ಲಿ ಒಂದೇ ರೀತಿಯಲ್ಲಿ ಹೆಸರು ಇರಲಿ ಎನ್ನುವ ಕಾರಣಕ್ಕೆ ನಾನು ಜೋನಸ್​ ಸರ್​ನೇಮ್​ಅನ್ನು ತೆಗೆದು ಹಾಕಿದ್ದೆ’ ಎಂದು ಪ್ರಿಯಾಂಕಾ ಚೋಪ್ರಾ ಆ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ಹೆಸರು ಬದಲಿಸಿದ್ದಕ್ಕೆ ಕಾರಣ ನೀಡಿದ ಪ್ರಿಯಾಂಕಾ ಚೋಪ್ರಾ

ಕಡಲ ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಹೊಸ ವರ್ಷದ ಸಂಭ್ರಮಾಚರಣೆ; ಫೋಟೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada