Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕಾ ‘ಮ್ಯಾಟ್ರಿಕ್ಸ್’​​ನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ನಿಮಿಷ? ಟ್ರೋಲ್​​ಗಳಿಗೆ ನಟಿಯ ಖಡಕ್ ಉತ್ತರ

The Matrix Resurrections: ಬಾಲಿವುಡ್​​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕಾ ಮ್ಯಾಟ್ರಿಕ್ಸ್​​ನಲ್ಲಿ ಕಾಣಿಸಿಕೊಂಡಿದ್ದು ಹತ್ತೇ ನಿಮಿಷ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಪ್ರಿಯಾಂಕಾ ಖಡಕ್ ಆಗಿ ಉತ್ತರಿಸಿದ್ದಾರೆ.

Priyanka Chopra: ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ್ದ ಪ್ರಿಯಾಂಕಾ ‘ಮ್ಯಾಟ್ರಿಕ್ಸ್’​​ನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ನಿಮಿಷ? ಟ್ರೋಲ್​​ಗಳಿಗೆ ನಟಿಯ ಖಡಕ್ ಉತ್ತರ
‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ ಚಿತ್ರದಲ್ಲಿ ಪ್ರಿಯಾಂಕಾ
Follow us
TV9 Web
| Updated By: shivaprasad.hs

Updated on: Dec 25, 2021 | 1:27 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್​ನಲ್ಲಿ ಗುರುತಿಸಿಕೊಂಡು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಕಾಲಾನಂತರದಲ್ಲಿ ಹಾಲಿವುಡ್​ನಿಂದಲೂ (Hollywood) ಅವಕಾಶಗಳು ಒಲಿದು ಬಂದಿದ್ದರಿಂದ ಅವರು ಅತ್ತ ಪಯಣ ಬೆಳೆಸಿದರು. ಅಲ್ಲದೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಚಿತ್ರಗಳಲ್ಲಿ ಪ್ರಿಯಾಂಕಾ ಬಣ್ಣಹಚ್ಚಲು ಆರಂಭಿಸಿದರು. ಇತ್ತೀಚೆಗೆ ತೆರೆ ಕಂಡ ‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ (The Matrix Resurrections) ಚಿತ್ರವೂ ಇವುಗಳಲ್ಲಿ ಒಂದು. ವಿಶ್ವಾದ್ಯಂತ ಈ ಚಿತ್ರ ಸರಣಿಗೆ ಅಪಾರ ಅಭಿಮಾನಿಗಳಿದ್ದಾರೆ. ಪ್ರಿಯಾಂಕಾ ಈ ಚಿತ್ರದ ಭಾಗವಾಗಿದ್ದಕ್ಕೆ ಭಾರತೀಯರು ಹೆಮ್ಮೆ ಪಟ್ಟಿದ್ದರು. ಅಲ್ಲದೇ ಸತಿ ಪಾತ್ರವನ್ನು ಪ್ರಿಯಾಂಕಾ ನಿರ್ವಹಿಸುತ್ತಿದ್ದಾರೆ ಎಂಬ ಸಮಾಚಾರ ಕೇಳಿ ಥ್ರಿಲ್ ಆಗಿದ್ದರು. ಆದರೆ ಚಿತ್ರ ನೋಡಿದ್ದವರಿಗೆ ಶಾಕ್ ಆಗಿತ್ತು. ಪ್ರಿಯಾಂಕಾ ಪಾತ್ರ ಚಿತ್ರದಲ್ಲಿ ಕೇವಲ 10 ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಪ್ರಿಯಾಂಕಾರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ನಟಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಇವುಗಳಿಗೆಲ್ಲಾ ಖಡಕ್ ಆಗಿಯೇ ಉತ್ತರಿಸಿದ್ದಾರೆ.

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚಿತ್ರದಲ್ಲಿ ತಮ್ಮ ಪಾತ್ರದ ಅವಧಿಯ ಬಗ್ಗೆ ಮಾತನಾಡಿದ್ದಾರೆ. ‘‘ದಕ್ಷಿಣ ಏಷ್ಯಾದ ಜನರು ಹೆಚ್ಚಾಗಿ ನನ್ನ ಪಾತ್ರದ ಕುರಿತು ಕೇಳುತ್ತಿದ್ದಾರೆ. ಅದೊಂದು ಸಣ್ಣ ಪಾತ್ರ, ಪ್ರಮುಖ ಪಾತ್ರವಲ್ಲ. ಆದರೂ ಆ ಪಾತ್ರ ಏಕೆ ಒಪ್ಪಿಕೊಂಡೆ ಮುಂತಾದ ಮಾತುಗಳನ್ನು ಕೇಳುತ್ತಿದ್ದಾರೆ. ಅವರಿಗೆಲ್ಲಾ ನಾನು ಹೇಳುವ ಉತ್ತರ ಒಂದೇ. ಇದು ‘ದಿ ಮ್ಯಾಟ್ರಿಕ್ಸ್’ ಚಿತ್ರ ಮತ್ತು ಅತೀ ಮುಖ್ಯವಾದ ಪಾತ್ರ’’ ಎಂದಿದ್ದಾರೆ ಪ್ರಿಯಾಂಕಾ.

ಬಾಲಿವುಡ್​ನಲ್ಲಿಯೂ ಚಿತ್ರಗಳ ಆಯ್ಕೆಯ ವೇಳೆ ಇದೇ ಮಾನದಂಡ ಅನುಸರಿಸುತ್ತಿದ್ದೆ ಎಂದು ಪ್ರಿಯಾಂಕಾ ನುಡಿದಿದ್ದಾರೆ. ಪಾತ್ರದ ತೂಕದ ಮೇಲೆ ಸ್ಕ್ರಿಪ್ಟ್ ಆಯ್ಕೆ ಮಾಡುತ್ತಿದ್ದೆ. ಅವೆಲ್ಲವೂ ನಾಯಕಿಯ ಪಾತ್ರವೇ ಆಗಿರಲಿಲ್ಲ. ಅಲ್ಲದೇ ಚಿತ್ರದಲ್ಲಿ ಪಾತ್ರ ಕೇವಲ 10 ನಿಮಿಷ ಕಾಣಿಸಿಕೊಳ್ಳುತ್ತದೆ ಎಂದು ಮಾತನಾಡುವುದು, ಆ ಕುರಿತು ಯೋಚಿಸುವುದೆಲ್ಲಾ ಸಣ್ಣ ಮನಸ್ಥಿತಿ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ ಪ್ರಿಯಾಂಕಾ.

View this post on Instagram

A post shared by Jerry x Mimi ? (@jerryxmimi)

ಪ್ರಿಯಾಂಕಾ ಕೇವಲ 10 ನಿಮಿಷ ‘ಮ್ಯಾಟ್ರಿಕ್ಸ್​​’ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಟ್ರೋಲ್​ಗಳಿಗೆ ಆಹಾರವಾಗಿತ್ತು. ಅಲ್ಲದೇ ಇದಕ್ಕಾಗಿ ಬಾಲಿವುಡ್​ನಿಂದ ಹಾಲಿವುಡ್​ಗೆ ಹೋಗಬೇಕಿತ್ತೇ ಎಂಬ ಮಾತುಗಳೆಲ್ಲಾ ಕೇಳಿಬಂದಿದ್ದವು. ಇವುಗಳಿಗೆ ಪ್ರಿಯಾಂಕಾ ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದರು.‘ಮ್ಯಾಟ್ರಿಕ್ಸ್’ ಚಿತ್ರದಲ್ಲಿ ಯಾವುದೇ ಪಾತ್ರ ಸಿಕ್ಕಿದರೂ ಯಾವ ಕಲಾವಿದನೂ ಇಲ್ಲ ಎನ್ನಲಾರ. ಕಾರಣ ಚಿತ್ರರಂಗದಲ್ಲಿ ಆ ಸರಣಿಯ ಚಿತ್ರಗಳಿಗೆ ಅಷ್ಟು ಪ್ರಾಮುಖ್ಯತೆ ಇದೆ ಎಂದು ಹಲವರು ಪ್ರಿಯಾಂಕಾ ಬೆನ್ನಿಗೆ ನಿಂತಿದ್ದರು. ಮತ್ತೆ ಹಲವರು, ಸ್ಟಾರ್ ಎನ್ನುವುದು ಒಂದು ಚಿತ್ರದಿಂದ ಆಗುವುದಲ್ಲ. ಅದು ಹಂತ ಹಂತದ ಪ್ರಕ್ರಿಯೆ. ಪ್ರಿಯಾಂಕಾ ಆ ದಿಕ್ಕಿನಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ದಿ ಮ್ಯಾಟ್ರಿಕ್ಸ್ ರೆಸರೆಕ್ಷನ್ಸ್’ ಚಿತ್ರ ಡಿಸೆಂಬರ್ 22ರಂದು ತೆರೆಕಂಡಿತ್ತು. ಚಿತ್ರವನ್ನು ಮ್ಯಾಟ್ರಿಕ್ಸ್ ಸರಣಿಯ ಅಭಿಮಾನಿಗಳು ಇಷ್ಟಪಟ್ಟಿದ್ದರೆ, ಉಳಿದವರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:

6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ

Vatal Nagaraj: ಸ್ಯಾಂಡಲ್​ವುಡ್ ನೈತಿಕ ಬೆಂಬಲದ ಅವಶ್ಯಕತೆ ಇಲ್ಲ, ಅವರಿಗೋಸ್ಕರ ಬಂದ್ ದಿನಾಂಕ ಬದಲಾಯಿಸೋಕೆ ಆಗಲ್ಲ: ವಾಟಾಳ್ ನಾಗರಾಜ್

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!