ಇನ್​ಸ್ಟಾಗ್ರಾಮ್​ನಲ್ಲಿ ಹೆಸರು ಬದಲಿಸಿದ್ದಕ್ಕೆ ಕಾರಣ ನೀಡಿದ ಪ್ರಿಯಾಂಕಾ ಚೋಪ್ರಾ

ಇನ್​ಸ್ಟಾಗ್ರಾಮ್​ನಲ್ಲಿ ಹೆಸರು ಬದಲಿಸಿದ್ದಕ್ಕೆ ಕಾರಣ ನೀಡಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್

ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ವಯಸ್ಸಿನಲ್ಲಿ ನಿಕ್​ಗಿಂತಲೂ ಪ್ರಿಯಾಂಕಾ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ.

TV9kannada Web Team

| Edited By: Apurva Kumar Balegere

Dec 24, 2021 | 9:36 AM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಪತಿ, ಪಾಪ್​ ಸಿಂಗರ್​​​ ನಿಕ್​ ಜೋನಸ್​ (Nick Jonas) ಜತೆ ಡಿವೋರ್ಸ್​ ಪಡೆಯುತ್ತಿದ್ದಾರೆ ಎನ್ನುವ ವದಂತಿ ಇತ್ತೀಚೆಗೆ ಜೋರಾಗಿತ್ತು. ಇನ್​ಸ್ಟಾಗ್ರಾಮ್ ಖಾತೆಯ ಹೆಸರಿನಿಂದ ಜೋನಸ್​ ಸರ್​ನೇಮ್​​ಅನ್ನು ತೆಗೆದು ಹಾಕಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರಿಯಾಂಕಾ ಮೌನ ಕಾಯ್ದುಕೊಂಡಿದ್ದರು. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ. ಈಗ ಈ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ವಯಸ್ಸಿನಲ್ಲಿ ನಿಕ್​ಗಿಂತಲೂ ಪ್ರಿಯಾಂಕಾ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ. ಪ್ರಿಯಾಂಕಾ ಅವರು ಮದುವೆ ಆದ ನಂತರ ನ್ಯೂಯಾರ್ಕ್​ನಲ್ಲಿಯೇ ಸೆಟಲ್​ ಆಗಿದ್ದಾರೆ. ಅಲ್ಲಿಯೇ ಐಷಾರಾಮಿ ಹೋಟೆಲ್ ಉದ್ಯಮ ​ಕೂಡ ಓಪನ್​ ಮಾಡಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರ ವಿಚ್ಛೇದನ ವದಂತಿ ಹುಟ್ಟಿಕೊಂಡು ತಣ್ಣಗಾಗಿತ್ತು.

ನಿಕ್​ ಜೋನಸ್​ ಜತೆ ಮದುವೆ ಆದ ನಂತರ ಪ್ರಿಯಾಂಕಾ ಚೋಪ್ರಾ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಹೆಸರಿನ ಜತೆ ಜೋನಸ್​ ಎಂದು ಸೇರಿಸಿಕೊಂಡಿದ್ದರು. ಆದರೆ, ಜೋನಸ್​ ಹೆಸರನ್ನು ತೆಗೆದು ಹಾಕಿ, ಪ್ರಿಯಾಂಕಾ ಎಂದಷ್ಟೇ ಇಟ್ಟಿದ್ದರು. ಇದರಿಂದ ವಿಚ್ಛೇದನ ವದಂತಿ ಹುಟ್ಟಿಕೊಂಡಿತ್ತು. ಈ ಬಗ್ಗೆ ಈಗ ಪ್ರಿಯಾಂಕಾ ಮಾತನಾಡಿದ್ದಾರೆ.

‘ಟ್ವಿಟರ್​ನಲ್ಲಿ ಇರುವ ರೀತಿಯಲ್ಲೇ ಇನ್​ಸ್ಟಾಗ್ರಾಮ್ ಹೆಸರೂ ಇರಲಿ ಎಂದು ನಾನು ಆ ರೀತಿ ಮಾಡಿದ್ದೆ. ಆದರೆ, ಅದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ನಿಜಕ್ಕೂ ಅದು ನನಗೆ ಹಾಸ್ಯಾಸ್ಪದ ಎನಿಸಿತ್ತು. ಅದು ಕೇವಲ ಸೋಶಿಯಲ್​ ಮೀಡಿಯಾ’ ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

‘ದಿ ಮೇಟ್ರಿಕ್ಸ್​ ರೆಸರಾಕ್ಷನ್’ ಸಿನಿಮಾದಲ್ಲಿ ಪಿಗ್ಗಿ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್​ 12ರಂದು ತೆರೆಗೆ ಬಂದಿದೆ. ಹಾಲಿವುಡ್​ ಸಿನಿಮಾ ಇದಾಗಿದ್ದು, ಲಾನಾ ವಿಚೌಸ್ಕಿ ​ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. 2003ರಲ್ಲಿ ತೆರೆಗೆ ಬಂದ ‘ದಿ ಮೇಟ್ರಿಕ್ಸ್ ರೆವಲ್ಯೂಷನ್​’ ಸಿನಿಮಾದ ಸೀಕ್ವೆಲ್​ ಇದಾಗಿದೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಾಂಪತ್ಯಕ್ಕೆ 3 ವರ್ಷ; ಹೇಗಿದೆ ವೆಡ್ಡಿಂಗ್​ ಆ್ಯನಿವರ್ಸರಿ ಸಂಭ್ರಮ?

ಹಾಲಿವುಡ್​ನ The Matrix Resurrections ಚಿತ್ರದ ಪ್ರಚಾರದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ; ಇಲ್ಲಿವೆ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada