AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಾಂಪತ್ಯಕ್ಕೆ 3 ವರ್ಷ; ಹೇಗಿದೆ ವೆಡ್ಡಿಂಗ್​ ಆ್ಯನಿವರ್ಸರಿ ಸಂಭ್ರಮ?

Priyanka Chopra | Nick Jonas: ಮೂರು ವರ್ಷಗಳ ದಾಂಪತ್ಯದ ಸಿಹಿ ಕ್ಷಣಗಳನ್ನು ಮೆಲುಕು ಹಾಕುತ್ತ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಡಿನ್ನರ್​ ಸವಿದಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಹರಿದು ಬರುತ್ತಿವೆ.​

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ದಾಂಪತ್ಯಕ್ಕೆ 3 ವರ್ಷ; ಹೇಗಿದೆ ವೆಡ್ಡಿಂಗ್​ ಆ್ಯನಿವರ್ಸರಿ ಸಂಭ್ರಮ?
ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್
TV9 Web
| Edited By: |

Updated on: Dec 02, 2021 | 9:10 AM

Share

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಖುಷಿಯ ಉತ್ತುಂಗದಲ್ಲಿದ್ದಾರೆ. ಅದಕ್ಕೆ ಕಾರಣ ಅವರ ವೆಡ್ಡಿಂಗ್ ಆ್ಯನಿವರ್ಸರಿ. ಪತಿ ನಿಕ್​ ಜೋನಸ್​ (Nick Jonas) ಜತೆ ಅವರು ಲಂಡನ್​ನಲ್ಲಿ ವಿವಾಹ ವಾರ್ಷಿಕೋತ್ಸವ (Wedding Anniversary) ಆಚರಿಸಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣಗಳು ಫೋಟೋ ಮತ್ತು ವಿಡಿಯೋದಲ್ಲಿ ಸೆರೆ ಆಗಿವೆ. ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು 2018ರ ಡಿ.1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಖುಷಿಖುಷಿಯಾಗಿ ಮೂರು ವಸಂತಗಳನ್ನು ಅವರು ಜೊತೆಯಲ್ಲಿ ಕಳೆದಿದ್ದಾರೆ. ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದರೂ ಕೂಡ ಪರಸ್ಪರ ಸಮಯ ಕೊಟ್ಟುಕೊಳ್ಳುತ್ತಾರೆ. ಈಗ ವೆಡ್ಡಿಂಗ್​ ಆ್ಯನಿವರ್ಸರಿಯನ್ನು ಪತ್ನಿಯ ಆಸೆಯಂತೆಯೇ ನಿಕ್​ ಜೋನಸ್​ ಆಚರಿಸಿದ್ದಾರೆ.

ಬಗೆಬಗೆಯ ಕ್ಯಾಂಡಲ್​ಗಳಿಂದ ಮತ್ತು ಹಲವು ರೀತಿಯ ಹೂವುಗಳಿಂದ ಟೇಬಲ್​ ಅಲಂಕರಿಸಲಾಗಿದೆ. ಹಿನ್ನೆಲೆಯಲ್ಲಿ ರೊಮ್ಯಾಂಟಿಕ್ ಸಂಗೀತ ಕೇಳಿಬರುತ್ತಿದೆ. ‘ಎಂದೆಂದಿಗೂ’ (Forever) ಜೊತೆಗಿರುವುದಾಗಿ ಭರವಸೆ ನೀಡಲು ಅಕ್ಷರಗಳನ್ನು ಜೋಡಿಸಿಡಲಾಗಿದೆ. ಇಂಥ ಒಂದು ಸುಮಧುರ ರಾತ್ರಿಯಲ್ಲಿ ಮೂರು ವರ್ಷದ ದಾಂಪತ್ಯದ ಸಿಹಿ ಕ್ಷಣಗಳನ್ನು ಮೆಲುಕು ಹಾಕುತ್ತ ಪ್ರಿಯಾಂಕಾ ಮತ್ತು ನಿಕ್​ ಜೋನಸ್​ ಡಿನ್ನರ್​ ಸವಿದಿದ್ದಾರೆ. ಈ ಸ್ಟಾರ್​ ಜೋಡಿಗೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಂದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಹರಿದು ಬರುತ್ತಿವೆ.​

View this post on Instagram

A post shared by Nick Jonas (@nickjonas)

ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅಂಥ ಗಾಸಿಪ್​ ಹಬ್ಬಲು ಕಾರಣ ಕೂಡ ಇತ್ತು. ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ಜೋನಸ್​’ ಎಂಬ ಸರ್​​ನೇಮ್​ ತೆಗೆದುಹಾಕಿದ್ದರು. ಸಮಂತಾ ಕೂಡ ಈ ರೀತಿ ‘ಅಕ್ಕಿನೇನಿ’ ಎಂಬ ಸರ್​ನೇಮ್​ ತೆಗೆದುಹಾಕಿದ ನಂತರವೇ ಡಿವೋರ್ಸ್​ ಸುದ್ದಿ ಹುಟ್ಟಿಕೊಂಡಿತ್ತು. ಪ್ರಿಯಾಂಕಾ ಕೂಡ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರಾ ಎಂದು ಅನುಮಾನ ಮೂಡಿತ್ತು. ಆದರೆ ಪ್ರಿಯಾಂಕಾ ಮತ್ತು ನಿಕ್​ ನಡುವೆ ಯಾವುದೇ ವೈಮನಸ್ಸು ಮೂಡಿಲ್ಲ ಎಂಬುದು ನಂತರ ತಿಳಿಯಿತು. ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಕೂಡ ಮನವಿ ಮಾಡಿಕೊಂಡಿದ್ದರು. ಪತಿಯ ಪೋಸ್ಟ್​ಗಳಿಗೆ ಪಾಸಿಟಿವ್​ ಕಮೆಂಟ್​ ಮಾಡುವ ಮೂಲಕ ತಾವಿಬ್ಬರೂ ಅನ್ಯೋನ್ಯವಾಗಿದ್ದೇವೆ ಎಂಬುದನ್ನು ಪ್ರಿಯಾಂಕಾ ಸೂಚಿಸಿದ್ದರು.

ನಿಕ್​ ಜೋನಸ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿಯೇ ಸೆಟ್ಲ್​ ಆಗಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ಮ್ಯಾಟ್ರಿಕ್ಸ್’ ಚಿತ್ರತಂಡ ಕಾಪಾಡಿಕೊಂಡಿದ್ದ ಗುಟ್ಟು ಬಹಿರಂಗ!; ಪ್ರಿಯಾಂಕಾ ಪಾತ್ರದ ಹೆಸರು ತಿಳಿದು ಥ್ರಿಲ್ ಆದ ಫ್ಯಾನ್ಸ್ 

Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್