
ಸೋಮಾಲಿಯಾದ ( Somali) ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಪಾಕಿಸ್ತಾನಿಗಳಿದ್ದ ಮೀನುಗಾರಿಕಾ ಹಡಗುನ್ನು ಅಪಹರಿಸಿದ್ದರು. ಇದೀಗ ಆ ಹಡಗನಲ್ಲಿದ್ದ 19 ಪಾಕಿಸ್ತಾನ ನಾವಿಕರನ್ನು ಭಾರತೀಯ ಯುದ್ಧನೌಕೆ INS ಸುಮಿತ್ರಾ ರಕ್ಷಿಸಿದೆ. ಇದು 36 ಗಂಟೆಗಳಲ್ಲಿ ಭಾರತೀಯ ಯುದ್ಧನೌಕೆ ನಡೆಸಿದ ಎರಡನೇ ಕಾರ್ಯಚರಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹನ್ನೊಂದು ಶಸ್ತ್ರಸಜ್ಜಿತ ಕಡಲ್ಗಳ್ಳರು ಇರಾನಿ ಧ್ವಜವುಳ್ಳ ಹಡಗನ್ನು ಅಪಹರಿಸಿದ್ದು, 19 ಪಾಕಿಸ್ತಾನ ನಾವಿಕರನ್ನು ಒತ್ತೆಯಾಳುಗಳಾಗಿ ಇರಿಸಿದರು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಯುದ್ಧನೌಕೆ ಕಡಲ್ಗಳ್ಳರು ವಶದಲ್ಲಿದ್ದ ಹಡಗನ್ನು ತಡೆದು, 19 ಪಾಕಿಸ್ತಾನ ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ.
ಮತ್ತೊಂದು ಕಡೆ ಅರಬ್ಬೀ ಸಮುದ್ರದ ಸೊಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್ನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸುಮಿತ್ರಾ ರಕ್ಷಣೆ ಮಾಡಿದೆ. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ.
ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಸುಮಿತ್ರಾ 36 ಗಂಟೆಗಳಲ್ಲಿ ಎರಡು ಕಾರ್ಯಚರಣೆಯನ್ನು ಮಾಡಿದೆ. ಈ ಕಾರ್ಯಚರಣೆಯಲ್ಲಿ ಒಟ್ಟು 36 ಜನರನ್ನು ರಕ್ಷಣೆ ಮಾಡಿದೆ (17 ಭಾರತೀಯರು ಹಾಗೂ 19 ಪಾಕಿಸ್ತಾನದ ನಾವಿಕರನ್ನು ರಕ್ಷಣೆ ಮಾಡಲಾಗಿದೆ) ಯುದ್ಧನೌಕೆ ಐಎನ್ಎಸ್ ಸುಮಿತ್ರಾದ ನಿರಂತರ ಹಾಗೂ ಕ್ಷಿಪ್ರ ಪ್ರಯತ್ನದಿಂದ ಈ ಕಾರ್ಯಚರಣೆ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಮುದ್ರ ಮಟ್ಟದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು INS ಸುಮಿತ್ರಾ ಭಾರತೀಯ ನೌಕಾಪಡೆಯ ಸ್ಥಳೀಯ ಕಡಲಾಚೆಯ ಗಸ್ತು ನೌಕೆಯಾಗಿದ್ದು, ಸೋಮಾಲಿಯಾ ಮತ್ತು ಗಲ್ಫ್ ಆಫ್ ಅಡೆನ್ನ ಪೂರ್ವದಲ್ಲಿ ಕಡಲ್ಗಳ್ಳತನ ಮತ್ತು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಇರಾನ್ ಮೀನುಗಾರಿಕಾ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ INS ಸುಮಿತ್ರ
ಬ್ರಿಟಿಷ್ ತೈಲ ಟ್ಯಾಂಕರ್ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ ಹಡಗಿನ ಮೇಲೆ ಜ.26 ಯೆಮೆನ್ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದರು. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿತ್ತು. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದೆ. ಈ ಕರೆಗೆ ಸ್ಪಂದಿಸಿ ಭಾರತೀಯ ನೌಕಾಪಡೆಯು (Indian Navy) ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Tue, 30 January 24