ಕಪಟಿಗಳೇ ನಿಮಗೆ ನಾಚಿಕೆಯಾಗ್ಬೇಕು, ಗಾಜಾ ಯುದ್ಧದ ಕಾರಣ ಕೊಟ್ಟು ಮೈಕ್ರೋಸಾಫ್ಟ್ಗೆ ರಾಜೀನಾಮೆ ಕೊಟ್ಟ ಭಾರತೀಯ ಟೆಕ್ಕಿ
ಕಪಟಿಗಳೇ ನಿಮಗೆ ನಾಚಿಕೆಯಾಗ್ಬೇಕು, ಗಾಜಾ ಯುದ್ಧದ ಕಾರಣ ಕೊಟ್ಟು ಮೈಕ್ರೋಸಾಫ್ಟ್ಗೆ ಭಾರತದ ಮೂಲದ ಟೆಕ್ಕಿಯೊಬ್ಬರು ರಾಜೀನಾಮೆ ಕೊಟ್ಟಿದ್ದಾರೆ. ಗಾಜಾದಲ್ಲಿ 50,000 ಪ್ಯಾಲೆಸ್ಟೀನಿಯನ್ನರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ. ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿ ಎಂದು ಕೂಗಿ ಹೇಳಿದ್ದಾರೆ.ಇಸ್ರೇಲ್‌ನ ರಕ್ಷಣಾ ಸಚಿವಾಲಯದೊಂದಿಗೆ ಟೆಕ್ ಕಂಪನಿಯು 133 ಮಿಲಿಯನ್ ಡಾಲರ್ ಕ್ಲೌಡ್ ಮತ್ತು AI ಒಪ್ಪಂದವನ್ನು ವರದಿ ಮಾಡಿದ್ದನ್ನು ಅವರು ಮತ್ತಷ್ಟು ಖಂಡಿಸಿದರು.

ವಾಷಿಂಗ್ಟನ್, ಏಪ್ರಿಲ್ 7: ಗಾಜಾ(Gaza))ದಲ್ಲಿ ನರಮೇಧಕ್ಕೆ ಸಹಾಯ ಮಾಡಲು ಮೈಕ್ರೋಸಾಫ್ಟ್(Microsoft) ಕಂಪನಿಯ ಸಾಫ್ಟ್‌ವೇರ್ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತ ಮೂಲದ ಟೆಕ್ಕಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಕಂಪನಿಯ 50ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ಭಾರತ ಮೂಲದ ಟೆಕ್ಕಿಯೊಬ್ಬರು ಮಾಜಿ ಮತ್ತು ಹಾಲಿ ಮೈಕ್ರೋಸಾಫ್ಟ್ ಸಿಇಒಗಳಾದ ಬಿಲ್ಗೇಟ್ಸ್, ಸ್ಟೀವ್ ಬಾಲ್ಮರ್ ಮತ್ತು ಸತ್ಯ ನಾದೆಲ್ಲಾ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ.
ಮೈಕ್ರೋಸಾಫ್ಟ್‌ನ ಕೃತಕ ಬುದ್ಧಿಮತ್ತೆ ವಿಭಾಗದ ಸಾಫ್ಟ್‌ವೇರ್ ಎಂಜಿನಿಯರ್ ವನಿಯಾ ಅಗರವಾಲ್, ಪ್ಯಾನಲ್ ಚರ್ಚೆಗೆ ಅಡ್ಡಿಪಡಿಸಿದರು. ನಿಮಗೆಲ್ಲರಿಗೂ ನಾಚಿಕೆಯಾಗಬೇಕು. ನೀವೆಲ್ಲರೂ ಕಪಟಿಗಳೇ. ಗಾಜಾದಲ್ಲಿ 50,000 ಪ್ಯಾಲೆಸ್ಟೀನಿಯನ್ನರನ್ನು ಮೈಕ್ರೋಸಾಫ್ಟ್ ತಂತ್ರಜ್ಞಾನದಿಂದ ಕೊಲ್ಲಲಾಗಿದೆ. ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿ ಎಂದು ಕೂಗಿ ಹೇಳಿದ್ದಾರೆ.
ಇಸ್ರೇಲ್‌ನ ರಕ್ಷಣಾ ಸಚಿವಾಲಯದೊಂದಿಗೆ ಟೆಕ್ ಕಂಪನಿಯು 133 ಮಿಲಿಯನ್ ಡಾಲರ್ ಕ್ಲೌಡ್ ಮತ್ತು AI ಒಪ್ಪಂದವನ್ನು ಅವರು ಮತ್ತಷ್ಟು ಖಂಡಿಸಿದರು. ಕೂಡಲೇ ಅವರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ಯಲಾಯಿತು, ಆದರೆ ಕಾರ್ಯಕ್ರಮದಲ್ಲಿದ್ದ ಕೆಲವು ಉದ್ಯೋಗಿಗಳು ಗದ್ದಲ ಮಾಡಲು ಪ್ರಾರಂಭಿಸಿದರು.
ಮತ್ತಷ್ಟು ಓದಿ: Microsoft: ಸತ್ಯ ನಾದೆಲ್ಲಾ ಸಿಇಒ ಆದ 10 ವರ್ಷದಲ್ಲಿ 11 ಪಟ್ಟು ಬೆಳೆದಿರುವ ಮೈಕ್ರೋಸಾಫ್ಟ್ ಷೇರು; ಭಾರತಕ್ಕೆ ಎಐ ನೆರವು ನೀಡಲು ಸಿಇಒ ಅಪೇಕ್ಷೆ
ನಂತರ ಅಗರ್ವಾಲ್ ಇ-ಮೇಲ್‌ನಲ್ಲಿ ತಮ್ಮ ರಾಜೀನಾಮೆ ಘೋಷಿಸಿದರು. ಟೆಕ್ ನ್ಯೂಸ್ ವೆಬ್ಸೈಟ್ ದಿ ವರ್ಜ್ ವರದಿ ಮಾಡಿರುವ ಪ್ರಕಾರ, ಅಗರ್ವಾಲ್ ತಮ್ಮ ರಾಜೀನಾಮೆಯಲ್ಲಿ ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ವಾನಿಯಾ, ಮತ್ತು ಈ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಒಂದೂವರೆ ವರ್ಷಗಳ ನಂತರ, ನಾನು ಮೈಕ್ರೋಸಾಫ್ಟ್ ತೊರೆಯಲು ನಿರ್ಧರಿಸಿದ್ದೇನೆ. ಏಪ್ರಿಲ್ 11 ರಂದು ನನ್ನ ಕೊನೆಯ ಕೆಲಸದ ದಿನ.
Later, during a segment featuring former and current CEOs Bill Gates, Steve Ballmer, and Satya Nadella, software engineer Vaniya Agrawal confronted the executives, stating, “Shame on all of you.” Agrawal criticised Microsoft’s reported $133 million contract with Israel’s Ministry… pic.twitter.com/XCiiE5rKaJ
— GPlus (@guwahatiplus) April 5, 2025
ಇಸ್ರೇಲಿ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್‌ನಲ್ಲಿ ಸಾವಿರಾರು ಹಮಾಸ್ ನೇತೃತ್ವದ ಬಂದೂಕುಧಾರಿಗಳು ಸಮುದಾಯಗಳ ಮೇಲೆ ದಾಳಿ ಮಾಡಿ 1,200 ಜನರನ್ನು ಕೊಂದು 251 ಜನರನ್ನು ಒತ್ತೆಯಾಳುಗಳಾಗಿ ಅಪಹರಿಸಿದ ನಂತರ ಇಸ್ರೇಲ್ ತನ್ನ ದಾಳಿಯನ್ನು ಪ್ರಾರಂಭಿಸಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Mon, 7 April 25