AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿ ಜೊತೆ ಅನೈತಿಕ ಸಂಬಂಧ; ಭಾರತ ಮೂಲದ ಇಂಗ್ಲೆಂಡ್ ವೈದ್ಯನ ಲೈಸೆನ್ಸ್ ರದ್ದು!

ಇಂಗ್ಲೆಂಡ್​​ನ ವೈದ್ಯಕೀಯ ವೃತ್ತಿಯ ನೀತಿ ಸಂಹಿತೆಯ ಪ್ರಕಾರ ವೈದ್ಯರು ತಮ್ಮ ರೋಗಿಗಳೊಂದಿಗೆ ಯಾವುದೇ ರೀತಿಯ ವೈಯಕ್ತಿಕ ಅಥವಾ ಲೈಂಗಿಕ ಸಂಬಂಧವನ್ನು ಹೊಂದುವಂತಿಲ್ಲ. ಆದರೆ ಡಾ. ಚಿರಾಗ್ ಪಟೇಲ್ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದರು. ತಮ್ಮ ರೋಗಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಆಕೆಗೆ ಅಫೀಮು ಆಧರಿತ ಮಾದಕ ದ್ರವ್ಯ ನೀಡಿದ್ದರು. ಈ ಕಾರಣದಿಂದಾಗಿ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ.

ರೋಗಿ ಜೊತೆ ಅನೈತಿಕ ಸಂಬಂಧ; ಭಾರತ ಮೂಲದ ಇಂಗ್ಲೆಂಡ್ ವೈದ್ಯನ ಲೈಸೆನ್ಸ್ ರದ್ದು!
Dr Chirag PatelImage Credit source: x
ಸುಷ್ಮಾ ಚಕ್ರೆ
|

Updated on: May 27, 2026 | 7:11 PM

Share

ನವದೆಹಲಿ, ಮೇ 27: ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್)ನಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ರೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೆ ಆಕೆಗೆ ಕಾನೂನುಬಾಹಿರವಾಗಿ ಅಫೀಮು ಆಧಾರಿತ ಮಾದಕ ದ್ರವ್ಯಗಳನ್ನು ನೀಡಿದ ಗಂಭೀರ ಆರೋಪದ ಮೇಲೆ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ. ಆರೋಪಿ ವೈದ್ಯರ ಹೆಸರು ಡಾ. ಚಿರಾಗ್ ಪಟೇಲ್. ಇವರು ಕಾರ್ಡಿಫ್‌ನ ‘ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್’ನಲ್ಲಿ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಆಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು.

ಇಡೀ ವೇಲ್ಸ್ ಭಾಗದಲ್ಲಿ ಈ ನಿರ್ದಿಷ್ಟ ಬೆನ್ನುಮೂಳೆಯ ಕಾಯಿಲೆಗೆ ಚಿಕಿತ್ಸೆ ನೀಡಬಲ್ಲ ಏಕೈಕ ವೈದ್ಯ ಇವರಾಗಿದ್ದರು. ಆದರೆ, ರೋಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ ಮತ್ತು ಆಕೆಯ ವೈದ್ಯಕೀಯ ದಾಖಲೆಗಳಲ್ಲಿ ನಮೂದಿಸದೆಯೇ ಅತ್ಯಂತ ವ್ಯಸನಕಾರಿ ನೋವು ನಿವಾರಕ ಮಾತ್ರೆಗಳನ್ನು (Opioids) ನೀಡಿದ ಹಿನ್ನೆಲೆಯಲ್ಲಿ ಅವರನ್ನು 8 ತಿಂಗಳ ಕಾಲ ವೈದ್ಯಕೀಯ ವೃತ್ತಿ ಮಾಡದಂತೆ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: 3 ವರ್ಷದ ಮಗುವಿಗೆ ಮರುಜೀವ; ಉಚಿತವಾಗಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕೇವಲ ದೈಹಿಕ ಸಂಬಂಧ ಮಾತ್ರವಲ್ಲದೆ, ಆ ಮಹಿಳೆಗೆ ವೈದ್ಯಕೀಯ ಚೀಟಿ (Prescription) ಇಲ್ಲದೆಯೇ ಅತ್ಯಂತ ಅಪಾಯಕಾರಿ ಮತ್ತು ವ್ಯಸನಕಾರಿ ಔಷಧಗಳಾದ ‘ಒಪಿಯಾಡ್ಸ್’ (ಅಫೀಮು ಆಧಾರಿತ ನೋವು ನಿವಾರಕ ಮಾತ್ರೆಗಳು) ಅನ್ನು ಅಕ್ರಮವಾಗಿ ನೀಡುತ್ತಿದ್ದರು. ಈ ಘಟನೆಯು ಬೆಳಕಿಗೆ ಬಂದ ತಕ್ಷಣ ಯುಕೆಯ ವೈದ್ಯಕೀಯ ಮಂಡಳಿಯು ಇದನ್ನು ಅತ್ಯಂತ ಗಂಭೀರ ವೃತ್ತಿಪರ ದುರ್ನಡತೆ ಎಂದು ಪರಿಗಣಿಸಿದೆ.

ಇಂಗ್ಲೆಂಡ್​​ನ ವೈದ್ಯಕೀಯ ನ್ಯಾಯಮಂಡಳಿಯು ಡಾ. ಅಮೀರ್ ಕಮಲ್ ಅವರ ವೈದ್ಯಕೀಯ ನೋಂದಣಿ ಮತ್ತು ಲೈಸೆನ್ಸ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅವರು ಇನ್ನು ಮುಂದೆ ಇಂಗ್ಲೆಂಡ್​​ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವಂತಿಲ್ಲ. ವೈದ್ಯರ ಈ ವರ್ತನೆಯು ಇಡೀ ವೈದ್ಯಕೀಯ ಕ್ಷೇತ್ರದ ಮೇಲಿರುವ ಸಾರ್ವಜನಿಕರ ನಂಬಿಕೆಗೆ ದ್ರೋಹ ಬಗೆದಂತಿದೆ ಎಂದು ವೈದ್ಯಕೀಯ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಅವರ ವಿರುದ್ಧ ಮತ್ತಷ್ಟು ತನಿಖೆ ನಡೆಯುತ್ತಿದ್ದು, ಅವರ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸುವ ಸಾಧ್ಯತೆಯೂ ಇದೆ.

ಏನಿದು ಘಟನೆ?:

2019ರ ಫೆಬ್ರವರಿಯಲ್ಲಿ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಡಾ. ಚಿರಾಗ್ ಪಟೇಲ್ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. 2019ರ ಆಗಸ್ಟ್​​ನಲ್ಲಿ ಆಕೆಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿದ ನಂತರ, ತುರ್ತು ವೈದ್ಯಕೀಯ ಕಾರಣಗಳಿಗಾಗಿ ಸಂಪರ್ಕಿಸಲು ವೈದ್ಯರು ತಮ್ಮ ವೈಯಕ್ತಿಕ ಫೋನ್ ನಂಬರ್ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ಸಂಬಂಧ ಆರಂಭವಾಗಿ, ಅದು ಲೈಂಗಿಕ ಸಂಬಂಧಕ್ಕೆ ತಿರುಗಿತು. ಈ 6 ತಿಂಗಳ ಸಂಬಂಧದ ಅವಧಿಯಲ್ಲಿ ವೈದ್ಯರು ತಮ್ಮ ನಗ್ನ ಚಿತ್ರಗಳನ್ನು ಸಹ ಆಕೆಗೆ ಕಳುಹಿಸಿದ್ದರು. 2021ರ ಡಿಸೆಂಬರ್ ತಿಂಗಳಲ್ಲಿ ವೈದ್ಯರು ಆಕೆಗೆ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.

ಇದನ್ನೂ ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​!

ಇವರಿಬ್ಬರ ನಡುವಿನ ನಿಕಟ ಸಂಬಂಧ ಜನವರಿ 2023ರವರೆಗೆ ಮುಂದುವರಿದಿತ್ತು. ಈ ಸಮಯದಲ್ಲಿ ಡಾ. ಚಿರಾಗ್ ಪಟೇಲ್ ಆಕೆಗೆ ಅಪಾಯಕಾರಿ ಮಾದಕ ದ್ರವ್ಯಗಳಾದ ‘ಮಾರ್ಫಿನ್ ಸಲ್ಫೇಟ್’ ಮತ್ತು ‘ಡಯಾಜೆಪಮ್’ ಮಾತ್ರೆಗಳನ್ನು ಆಸ್ಪತ್ರೆಯ ಅಧಿಕೃತ ದಾಖಲೆಗಳಿಗೆ ಸೇರಿಸದೆಯೇ ಅಕ್ರಮವಾಗಿ ನೀಡುತ್ತಿದ್ದರು. ಆ ಮಹಿಳೆ ಡಾ. ಚಿರಾಗ್ ಪಟೇಲ್ ಜೊತೆಗಿನ ತನ್ನ ಸಂಬಂಧದ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಕಾರಣದಿಂದ ಆಕೆಗೆ ಮಾತ್ರೆಗಳನ್ನು ನೀಡುತ್ತಿದ್ದುದಾಗಿ ಚಿರಾಗ್ ಪಟೇಲ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇಬ್ಬರ ಸಂಬಂಧ ಹದಗೆಟ್ಟ ನಂತರ, ಆ ಮಹಿಳೆಯು ಪೊಲೀಸರ ಬಳಿ ಹೋಗಿ ದೂರು ನೀಡಿದ್ದರು. ಪೊಲೀಸರು ಅಧಿಕೃತವಾಗಿ ಕೇಸ್ ದಾಖಲಿಸದಿದ್ದರೂ, ಆರೋಗ್ಯ ಮಂಡಳಿಯ ವೈದ್ಯಕೀಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಅದೇ ತಿಂಗಳು ಡಾ. ಚಿರಾಗ್ ಪಟೇಲ್ ತಾವೇ ಜನರಲ್ ಮೆಡಿಕಲ್ ಕೌನ್ಸಿಲ್ (GMC) ಮುಂದೆ ಶರಣಾದರು. ಪ್ರಸ್ತುತ ಕಾರ್ಡಿಫ್ ಆರೋಗ್ಯ ಮಂಡಳಿಯು ಡಾ. ಚಿರಾಗ್ ಪಟೇಲ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಅಕ್ರಮವಾಗಿ SIR: ಪ್ರಲ್ಹಾದ್ ಜೋಶಿ
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ: ಪ್ರಿಯಾಂಕ್​​ 
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
ಮುಂದಿನ ತಿಂಗಳು ಪಿಎಸ್​ಐ, ಕಾನ್ಸ್​ಟೇಬಲ್​ ಹುದ್ದೆ ನೇಮಕಾತಿ ಅಧಿಸೂಚನೆ
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
'ಜನರ ಒಳ್ಳೆಯದಕ್ಕೆ ನಾನು ನಿಷ್ಠುರ ಆದರೂ ಪರವಾಗಿಲ್ಲ'
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
ಬೆಳಗಾವಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮುರಿದು ಬಿದ್ದ ದೈತ್ಯ ಮರ!
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
SIR ವೇಳೆ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್