AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ: ಭಾರತೀಯರು ಕೆಟ್ಟವರು ಎನ್ನುತ್ತಾ ಭಾರತ ಮೂಲದ ನರ್ಸ್ ಮೇಲೆ ವ್ಯಕ್ತಿಯಿಂದ ಹಲ್ಲೆ

ಅಮೆರಿಕದ ಆಸ್ಪತ್ರೆಯಲ್ಲಿ 67 ವರ್ಷದ ಭಾರತೀಯ ಮೂಲದ ನರ್ಸ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದ್ದು, ಅವರ ಮುಖಕ್ಕೆ ತೀವ್ರ ಗಾಯಗಳಾಗಿವೆ. ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಪಾಮ್ಸ್ ವೆಸ್ಟ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ಆಕ್ರೋಶಕ್ಕೆ ಕಾರಣವಾಯಿತು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕಠಿಣ ಭದ್ರತೆಗಾಗಿ ಬೇಡಿಕೆಗಳು ಎದ್ದವು.

ಅಮೆರಿಕ: ಭಾರತೀಯರು ಕೆಟ್ಟವರು ಎನ್ನುತ್ತಾ ಭಾರತ ಮೂಲದ ನರ್ಸ್ ಮೇಲೆ ವ್ಯಕ್ತಿಯಿಂದ ಹಲ್ಲೆ
ನರ್ಸ್​
ನಯನಾ ರಾಜೀವ್
|

Updated on: Mar 05, 2025 | 11:15 AM

Share

ಫ್ಲೋರಿಡಾ, ಮಾರ್ಚ್​ 05: ಆಸ್ಪತ್ರೆಯಲ್ಲಿ ಭಾರತದ ಮೂಲದ ನರ್ಸ್​ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಭಾರತದ ಮೂಲದ 67 ವರ್ಷದ ನರ್ಸ್​ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಭಾರತೀಯರು ಕೆಟ್ಟವರು ಎಂದು ಆ ದಾಳಿಕೋರ ಹೇಳಿದ್ದಾನೆ.

ನರ್ಸ್​ಗೆ ಮುಖದಲ್ಲಿ ಮುರಿತಗಳು ಉಂಟಾಗಿವೆ. ಈ ಘಟನೆ ಫೆಬ್ರವರಿ 18 ಫ್ಲೋರಿಡಾದ ಫಾರ್ಮ್ ಬಿ ಬಳಿಯ ಪ್ಯಾಮ್ ವೆಸ್ಟ್ ಆಸ್ಪತ್ರೆಯಲ್ಲಿ ನಡೆದಿದೆ.

ನರ್ಸ್ ಮೇಲಿನ ದಾಳಿಯ ನಂತರ, ಆರೋಗ್ಯ ಕಾರ್ಯಕರ್ತರು ಭದ್ರತೆಗಾಗಿ ಒತ್ತಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಭಾರತೀಯ ಮೂಲದ ನರ್ಸ್ ಹೆಸರು ಲೀಲಮ್ಮ ಲಾಲ್. ಲೀಲಮ್ಮ ಲಾಲ್ ಮೇಲೆ 33 ವರ್ಷದ ಸ್ಟೀಫನ್ ಎಂಬ ವ್ಯಕ್ತಿ ಹಲ್ಲೆ ನಡೆಸಿದ್ದಾನೆ.

ಆ ವ್ಯಕ್ತಿ ನರ್ಸ್ ಮೇಲೆ ಎಷ್ಟು ಕೆಟ್ಟದಾಗಿ ಹಲ್ಲೆ ನಡೆಸಿದ್ದಳೆಂದರೆ ಆಕೆಯ ಮುಖದ ಮೇಲೆ ಹಲವಾರು ಮುರಿತಗಳುಂಟಾಗಿದ್ದವು. ಆಕೆಯ ಕಾಲರ್ಬೋನ್ ಮುರಿದಿತ್ತು ಮತ್ತು ಆಕೆಯ ತಲೆಯಲ್ಲಿ ರಕ್ತಸ್ರಾವವಾಗಲು ಪ್ರಾರಂಭಿಸಿತು. ಸ್ಟೀಫನ್ ಸ್ಕ್ಯಾಂಟಲ್‌ಬರಿಯ ದಾಳಿ ಒಂದರಿಂದ ಎರಡು ನಿಮಿಷಗಳ ಕಾಲ ನಡೆದಿದ್ದು, ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ಓದಿ: ಪ್ಯಾರಿಸ್: ಹೊಕ್ಕುಳಬಳ್ಳಿಯನ್ನೂ ಕತ್ತರಿಸದೆ ಶಿಶುವನ್ನು ಹೋಟೆಲ್​ ರೂಮಿನಿಂದ ಎಸೆದ ತಾಯಿ

ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದ್ದು, ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಆಘಾತಕಾರಿ ವಿಷಯವೆಂದರೆ ಲೀಲಮ್ಮ ಲಾಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸ್ವತಃ ರೋಗಿಯಾಗಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಹೇಳಲಾಗುತ್ತಿದೆ. ಆತನನ್ನು ಬಂಧಿಸಿದಾಗ ಶರ್ಟ್ ಮತ್ತು ಚಪ್ಪಲಿ ಧರಿಸಿರಲಿಲ್ಲ.

ಭಾರತೀಯರು ಕೆಟ್ಟವರು ಮತ್ತು ನಾನು ಭಾರತೀಯ ವೈದ್ಯರನ್ನು ಕೊಂದೆ ಎಂದು ಆರೋಪಿ ಹೇಳಿದ್ದಾನೆ. ಯಗೊಂಡ ನರ್ಸ್‌ನ ಮಗಳು ತನ್ನ ತಾಯಿಯ ಗಾಯಗಳ ತೀವ್ರತೆಯ ಬಗ್ಗೆ ವಿವರಿಸಿದ್ದಾಳೆ.

ಈ ಘಟನೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ, ಮೂರು ದಿನಗಳಲ್ಲಿ 10,000 ಕ್ಕೂ ಹೆಚ್ಚು ಜನರು ಬಿಗಿ ಭದ್ರತಾ ಕ್ರಮಗಳು ಮತ್ತು ಕಠಿಣ ಶಿಕ್ಷೆಯನ್ನು ಕೋರುವ ಅರ್ಜಿಗೆ ಸಹಿ ಹಾಕಿದ್ದಾರೆ. ಏತನ್ಮಧ್ಯೆ, ಪಾಮ್ ಬೀಚ್ ಕೌಂಟಿ ಶೆರಿಫ್ ಅವರು ಫೆಬ್ರವರಿ 18 ರಂದು ಮಧ್ಯಾಹ್ನ 1.20 ರ ಸುಮಾರಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು ಮತ್ತು ಅಲ್ಲಿ ನರ್ಸ್ ಗಂಭೀರವಾಗಿ ಗಾಯಗೊಂಡಿರುವುದನ್ನು ಕಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್