ಸುಳ್ಳು ಮತ್ತು ಆಧಾರರಹಿತ; ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಇರಾನ್

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾರ್ಮುಜ್ ಜಲಸಂಧಿಯು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿಯೇ ಉಳಿದಿದೆ ಎಂದು ಪ್ರತಿಪಾದಿಸಿದೆ. ನಿರ್ಣಾಯಕ ಸಮುದ್ರ ಮಾರ್ಗವನ್ನು ಮತ್ತೆ ತೆರೆಯುವ ಕುರಿತು ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಇರಾನ್ ನಿರಾಕರಿಸಿದೆ. ಹಾಗೇ, ಕದನವಿರಾಮಕ್ಕೆ ಇರಾನ್ ಅಮೆರಿಕವನ್ನು ಸಂಪರ್ಕಿಸಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ಕದನವಿರಾಮವನ್ನು ಬಯಸಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು.

ಸುಳ್ಳು ಮತ್ತು ಆಧಾರರಹಿತ; ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಇರಾನ್
Trump And Khamenei

Updated on: Apr 01, 2026 | 10:34 PM

ಟೆಹ್ರಾನ್, ಏಪ್ರಿಲ್ 1: ಇರಾನ್ ಜೊತೆಗಿನ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇರಾನ್ (Iran War) ಕದನ ವಿರಾಮವನ್ನು ಕೋರಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳನ್ನು ಇರಾನ್ ಬಲವಾಗಿ ನಿರಾಕರಿಸಿದೆ. ಇರಾನ್ ರಾಜ್ಯ ಟಿವಿ ಜೊತೆ ಮಾತನಾಡಿದ ಇರಾನ್ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಹೇಳಿಕೆಯನ್ನು “ಸುಳ್ಳು ಮತ್ತು ಆಧಾರರಹಿತ” ಎಂದು ಕರೆದಿದ್ದಾರೆ. ಕದನವಿರಾಮದ ಯಾವುದೇ ವಿನಂತಿಯನ್ನು ಇರಾನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರ ಹಾಸ್ಯಾಸ್ಪದ ಪ್ರದರ್ಶನದ ಮೂಲಕ ಹಾರ್ಮುಜ್ ಜಲಸಂಧಿಯನ್ನು ಶತ್ರುಗಳಿಗೆ ತೆರೆಯಲು ಸಾಧ್ಯವಿಲ್ಲ” ಎಂದು ಇರಾನ್ ಹೇಳಿದೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಇರಾನ್ ಕದನ ವಿರಾಮವನ್ನು ಕೋರಿ ಅಮೆರಿಕವನ್ನು ಸಂಪರ್ಕಿಸಿದೆ ಎಂದು ಹೇಳಿದ ನಂತರ ಈ ಪ್ರತಿಕ್ರಿಯೆ ಬಂದಿದೆ. ಇರಾನ್ ನಮ್ಮ ಬಳಿ ಬಂದು ಕದನವಿರಾಮ ಘೋಷಿಸುವ ಮಾತುಕತೆಗೆ ಮುಂದಾಗಿದೆ. ಆದರೆ, ನಾನು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆದ ಮೇಲೆ ನೋಡೋಣ ಎಂದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಇದನ್ನೂ ಓದಿ: ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ಇರಾನ್ ಈ ಹೇಳಿಕೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ, ಇದು ಇರಾನ್ ದೇಶದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸಮರ್ಥಿಸಿಕೊಂಡಿದೆ. ಅಗತ್ಯವಿದ್ದರೆ ದೇಶವು ಸಂಘರ್ಷವನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us