ಇರಾನ್‌ನಲ್ಲಿ ಭೀಕರ ಅಪಘಾತ; ರೈಲು ಹಳಿ ತಪ್ಪಿ 13 ಪ್ರಯಾಣಿಕರು ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ
ಇರಾನ್‌ನ ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 550 ಕಿ.ಮೀ. (340 ಮೈಲುಗಳು) ದೂರದಲ್ಲಿ ಈ ದುರಂತ ಸಂಭವಿಸಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಇರಾನ್: ಪೂರ್ವ ಇರಾನ್‌ನಲ್ಲಿ (Iran) ಇಂದು ಬೆಳಗ್ಗೆ ಪ್ರಯಾಣಿಕರ ರೈಲು ಹಳಿತಪ್ಪಿ, ಅಪಘಾತ (Train Accident) ಸಂಭವಿಸಿದ್ದು, 13 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ. ಈ ದುರಂತದ ಬಗ್ಗೆ ಆರಂಭಿಕ ವಿವರಗಳು ಸರಿಯಾಗಿ ಲಭ್ಯವಿಲ್ಲವಾದರೂ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿ ಹೇಳಿದೆ.
ಮರುಭೂಮಿ ನಗರವಾದ ತಬಾಸ್ ಬಳಿ ಇಂದು ಮುಂಜಾನೆ ರೈಲಿನಲ್ಲಿದ್ದ ಏಳು ಬೋಗಿಗಳಲ್ಲಿ ನಾಲ್ಕು ಹಳಿಗಳು ರೈಲ್ವೆ ಹಳಿಯಿಂದ ತಪ್ಪಿವೆ. ಇದರಿಂದ ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಆ್ಯಂಬುಲೆನ್ಸ್‌ಗಳು ಮತ್ತು ಮೂರು ಹೆಲಿಕಾಪ್ಟರ್‌ಗಳಲ್ಲಿ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ.
ಇರಾನ್‌ನ ರಾಜಧಾನಿ ಟೆಹ್ರಾನ್‌ನ ಆಗ್ನೇಯಕ್ಕೆ ಸುಮಾರು 550 ಕಿ.ಮೀ. (340 ಮೈಲುಗಳು) ದೂರದಲ್ಲಿ ಈ ದುರಂತ ಸಂಭವಿಸಿದೆ. ಇದು ಪಟ್ಟಣವನ್ನು ಕೇಂದ್ರ ನಗರವಾದ ಯಾಜ್ದ್‌ಗೆ ಸಂಪರ್ಕಿಸುವ ರೈಲುಮಾರ್ಗದಲ್ಲಿ ಸಂಭವಿಸಿದೆ. ಅಪಘಾತದ ತನಿಖೆ ನಡೆಯುತ್ತಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: Shocking Video: ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು; 3 ಮಕ್ಕಳ ಪ್ರಾಣ ಉಳಿದಿದ್ದೇ ಅಚ್ಚರಿ!
2016ರಲ್ಲಿ ಇದೇ ಸ್ಥಳದಲ್ಲಿ ಸಂಭವಿಸಿದ ಮತ್ತೊಂದು ರೈಲು ಅಪಘಾತದಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದರು. ಇರಾನ್‌ನ ಅತ್ಯಂತ ಭೀಕರ ರೈಲು ದುರಂತವು 2004ರಲ್ಲಿ ಸಂಭವಿಸಿತ್ತು. ಗ್ಯಾಸೋಲಿನ್, ರಸಗೊಬ್ಬರ, ಗಂಧಕ ಮತ್ತು ಹತ್ತಿ ತುಂಬಿದ ರೈಲು ಐತಿಹಾಸಿಕ ನಗರವಾದ ನೇಶಾಬುರ್ ಬಳಿ ಅಪಘಾತಕ್ಕೀಡಾಯಿತು. ಇದರಲ್ಲಿ ಸುಮಾರು 320 ಜನರು ಸಾವನ್ನಪ್ಪಿದರು, 460 ಜನರು ಗಾಯಗೊಂಡಿದ್ದರು.
ಇರಾನ್‌ನ ಹೆದ್ದಾರಿಗಳಲ್ಲಿ ವರ್ಷಕ್ಕೆ 17,000 ಸಾವುಗಳು ಉಂಟಾಗುತ್ತಿವೆ. ಇದು ವಿಶ್ವದ ಅತ್ಯಂತ ಕೆಟ್ಟ ಸಂಚಾರ ಸುರಕ್ಷತಾ ದಾಖಲೆಗಳಲ್ಲಿ ಒಂದಾಗಿದೆ. ಟ್ರಾಫಿಕ್ ಕಾನೂನುಗಳು, ಅಸುರಕ್ಷಿತ ವಾಹನಗಳು ಮತ್ತು ಅಸಮರ್ಪಕ ತುರ್ತು ಸೇವೆಗಳ ವ್ಯಾಪಕ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಸಾವಿನ ಪ್ರಮಾಣವಾಗುತ್ತಿದೆ ಎನ್ನಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ