AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Israel Attack: ಉಗ್ರರಿಂದ ರಾಕೆಟ್ ದಾಳಿ; ಇಸ್ರೇಲ್ ತೀವ್ರ ಪ್ರತಿದಾಳಿ

Airstrikes on Gaza Strip: ಗಾಜಾ ಪಟ್ಟಿಯಲ್ಲಿರುವ ಉಗ್ರರ ನೆಲೆ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 9 ಮಂದಿ ಪ್ಯಾಲೆಸ್ಟೀನಿಯನ್ನರು ಸತ್ತಿದ್ದಾರೆ. ಇವರ ಪೈಕಿ ಪ್ಯಾಲೆಸ್ಟೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಘಟಕದ ಕೆಲ ಉಗ್ರರು ಇದ್ದಾರೆ. ಕನಿಷ್ಠ ಒಬ್ಬ ನಾಗರಿಕ ಕೂಡ ದಾಳಿಗೆ ಬಲಿಯಾಗಿರುವುದು ತಿಳಿದುಬಂದಿದೆ. ಒಟ್ಟು 9 ಮಂದಿ ಕೊಲ್ಲಲ್ಪಟ್ಟಿದ್ದಾರೆ.

Israel Attack: ಉಗ್ರರಿಂದ ರಾಕೆಟ್ ದಾಳಿ; ಇಸ್ರೇಲ್ ತೀವ್ರ ಪ್ರತಿದಾಳಿ
File photo of Israel airstrikeImage Credit source: AFP
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Jan 27, 2023 | 11:53 AM

Share

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮೂಲದ ಉಗ್ರರ (Israel vs Palestine Conflict) ಮಧ್ಯೆ ಕಾಳಗ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಮಾಸ್ ಉಗ್ರರಿಂದ ಇಸ್ರೇಲ್ ಪ್ರದೇಶಗಳ ಮೇಲೆ ರಾಕೆಟ್ ದಾಳಿ ನಡೆದ ಬೆನ್ನಲ್ಲೇ ಇಸ್ರೇಲ್ ಸೇನಾ ಪಡೆಗಳು ಗಾಜಾ ಪಟ್ಟಿಯಲ್ಲಿ (Gaza Strip) ಕಠೋರ ವೈಮಾನಿಕ ದಾಳಿಗಳನ್ನು ಮಾಡಿವೆ. ಹಮಾಸ್ ಉಗ್ರರ (Hamas Terrorists) ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ. ಇದರಿಂದ ಹಮಾಸ್ ಸಂಘಟನೆಯ ಶಕ್ತಿ ಕುಂದುವ ನಿರೀಕ್ಷೆಯಲ್ಲಿ ಇಸ್ರೇಲ್ ಇದೆ.

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕೇಂದ್ರೀಯ ಗಾಜಾದಲ್ಲಿರುವ ಬಾಟಮ್ ಆಫ್ ಫಾರ್ಮ್ (Bottom of Form) ಎಂಬ ಉಗ್ರ ಅಡಗುದಾಣವನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನೆಲೆಯಲ್ಲಿ ಉಗ್ರರಿಗೆ ಬೇಕಾದ ರಾಕೆಟ್​ಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಇಸ್ರೇಲ್ ಪಡೆಗಳು ಈ ನೆಲೆ ಮೇಲೆ ಬಾಂಬ್​ಗಳ ದಾಳಿ ಮಾಡಿ ನಾಶಗೊಳಿಸಿದೆ. ಈ ದಾಳಿಯಿಂದಾಗಿ ಹಮಾಸ್ ಉಗ್ರರಿಗೆ ರಾಕೆಟ್ ಸರಬರಾಜು ಸರಪಳಿ ತುಂಡಾಗುವ ನಿರೀಕ್ಷೆ ಇದೆ.

ಆದಾಗ್ಯೂ ಗಾಜಾ ಪಟ್ಟಿಯಲ್ಲಿರುವ ಈ ನೆಲೆ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 9 ಮಂದಿ ಪ್ಯಾಲೆಸ್ಟೀನಿಯನ್ನರು ಸತ್ತಿದ್ದಾರೆ. ಇವರ ಪೈಕಿ ಪ್ಯಾಲೆಸ್ಟೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಘಟಕದ ಕೆಲ ಉಗ್ರರು ಇದ್ದಾರೆ. ಕನಿಷ್ಠ ಒಬ್ಬ ನಾಗರಿಕ ಕೂಡ ದಾಳಿಗೆ ಬಲಿಯಾಗಿರುವುದು ತಿಳಿದುಬಂದಿದೆ. ಒಟ್ಟು 9 ಮಂದಿ ಕೊಲ್ಲಲ್ಪಟ್ಟಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್​ನ ಮಾಧ್ಯಮ ವರದಿ ಹೇಳಿದೆ.

ದಾಳಿ ಪ್ರತಿದಾಳಿಗಳ ಸರಪಳಿ

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮಧ್ಯೆ ಸಂಘರ್ಷಕ್ಕೆ ಹಲವು ದಶಕಗಳ ಇತಿಹಾಸ ಇದೆ. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಸ್ಟ್ರಿಪ್ ಇವು ಪ್ಯಾಲೆಸ್ಟೀನ್ ಪ್ರದೇಶಗಳಾಗಿವೆ. ಇವುಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ ಎಂಬುದು ಆರೋಪ. ಆದರೆ, ಇಸ್ರೇಲ್ ಇದು ತನ್ನ ಭೂಭಾಗ ಎಂದು ಹೇಳಿಕೊಳ್ಳುತ್ತದೆ. ಪ್ಯಾಲೆಸ್ಟೀನ್ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಹಲವು ಉಗ್ರ ಸಂಘಟನೆಗಳು ಈ ಹೋರಾಟದಲ್ಲಿ ತೊಡಗಿವೆ. ಇಸ್ರೇಲ್​ನ ಪ್ರಬಲ ಸೇನಾ ಬಲದ ಮುಂದೆ ಈ ಹೋರಾಟಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ.

ಉಗ್ರರ ದಾಳಿಗಳನ್ನು ಇಸ್ರೇಲ್ ಸೇನಾಪಡೆಗಳು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಾ ಬರುತ್ತಿದೆ. 2022ರಲ್ಲಿ ಪ್ಯಾಲೆಸ್ಟೀನ್ ಉಗ್ರರು ಹಲವು ದಾಳಿಗಳನ್ನು ನಡೆಸಿ ಇಸ್ರೇಲ್​ನ 31 ಮಂದಿಯ ಹತ್ಯೆಗೆ ಕಾರಣವಾಗಿದ್ದರು. ಈ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈ ತಿಂಗಳು ವೆಸ್ಟ್ ಬ್ಯಾಂಕ್ ಪ್ರದೇಶದ ಮೇಲೆ ವೈಮಾನಿಕ ದಾಳಿ ಮಾಡಿತು. ಅತ್ತ ಪ್ಯಾಲೆಸ್ಟೀನ್ ಉಗ್ರರೂ ಪ್ರತಿಯಾಗಿ ರಾಕೆಟ್ ದಾಳಿ ಮಾಡುತ್ತಿವೆ. ಈ ತಿಂಗಳು ಇದೇ ರೀತಿ ಮೂರ್ನಾಲ್ಕು ಬಾರಿ ದಾಳಿ ಪ್ರತಿದಾಳಿಗಳಾಗಿವೆ. ಇಂದು ಶುಕ್ರವಾರ ಹಮಾಸ್ ಉಗ್ರರಿಗೆ ರಾಕೆಟ್ ತಯಾರಿಸುವ ನೆಲೆಯ ಮೇಲೆಯೇ ಇಸ್ರೇಲ್ ಗುರಿಯಾಗಿಸಿ ನಾಶ ಮಾಡಿದೆ.

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ