Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ

Terror Attack: ಇಸ್ರೇಲ್​ನ ಜೆರುಸಲೆಂ ನಗರದ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

Jerusalem Shootout: ಜೆರುಸಲೆಮ್ ಮಂದಿರದಲ್ಲಿ ಶೂಟೌಟ್; 7 ಮಂದಿ ಸಾವು; ದುಷ್ಕರ್ಮಿಯೂ ಹತ್ಯೆ
Israel PoliceImage Credit source: AFP
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 28, 2023 | 9:09 AM

ಜೆರುಸಲೆಂ: ಇಸ್ರೇಲ್ ಸ್ವಾಮ್ಯದಲ್ಲಿರುವ ಜೆರುಸಲೆಂನ ಯಹೂದಿ ಮಂದಿರೊಂದರದ (Jerusalem Synagogue) ಬಳಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ (Gun Attack) ನಡೆಸಿ ಏಳಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ ಘೋರ ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಕೆಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ದಾಳಿಕೋರನೂ ಹತ್ಯೆಯಾಗಿದ್ದಾನೆ.

ಜೆರುಸಲೆಂನ ನೆವೆ ಯಾಕೋವ್ ಎಂಬ ಪ್ರದೇಶದ ಮಂದಿರದ ಮೇಲೆ ಸ್ಥಳೀಯ ಕಾಲಮಾನದಲ್ಲಿ ಶುಕ್ರವಾರ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಈ ಶೂಟೌಟ್ ನಡೆದಿದಿರುವುದು ಪೊಲೀಸ್ ಇಲಾಖೆಯ ಹೇಳಿಕೆಯಿಂದ ತಿಳಿದುಬಂದಿದೆ.

ಪೊಲೀಸರ ಪ್ರಕಾರ ಏಳು ಮಂದಿ ಈ ದಾಳಿ ಘಟನೆಯಲ್ಲಿ ಬಲಿಯಾಗಿದ್ದಾರೆ. ಮಾಗೆಲ್ ಡೇವಿಡ್ ಅಡೋಮ್ (MDA- Magel David Adom) ಎಂಬ ತುರ್ತು ಸ್ಪಂದನಾ ಸಂಸ್ಥೆಯ (Emergency Response Agency) ಪ್ರಕಾರ ಉಗ್ರನ ಗುಂಡಿನ ದಾಳಿಗೆ 10 ಮಂದಿ ಸಾವನ್ನಪ್ಪಿದ್ದಾರೆ. ಇವರ ಪೈಕಿ 14 ವರ್ಷದ ಒಬ್ಬ ಬಾಲಕ ಮತ್ತು 70 ವರ್ಷದ ವಯೋವೃದ್ಧರೊಬ್ಬರೂ ಸೇರಿದ್ದಾರೆ.

ಶೂಟೌಟ್ ನಡೆಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಪಡೆಗಳು ತ್ವರಿತವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಉಗ್ರನನ್ನು ಕೊಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರೆನ್ನಲಾಗಿದೆ.

ಪ್ಯಾಲೆಸ್ಟೀನ್ ಉಗ್ರರ ಕೈವಾಡ?

ಜೆರುಸಲೆಂ ಸಿನಗೋಗ್​ನಲ್ಲಿ ಶುಕ್ರವಾರ ದಾಳಿ ನಡೆಸಿದ ದುಷ್ಕರ್ಮಿ ಯಾರು, ಯಾವ ಸಂಘಟನೆಗೆ ಸೇರಿದವ ಎಂಬ ಸ್ಪಷ್ಟ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಪ್ಯಾಲೆಸ್ಟೀನ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಸೇರಿದ ಉಗ್ರ ಇವ ಇರಬಹುದು ಎಂಬ ಶಂಕೆ ಇದೆ.

ಈ ಹೊಸ ವರ್ಷದ ಮೂರು ವಾರಗಳಲ್ಲಿ ಪ್ಯಾಲೆಸ್ಟೀನ್ ಉಗ್ರರು ಮತ್ತು ಇಸ್ರೇಲ್ ಮಧ್ಯೆ ದಾಳಿ ಮತ್ತು ಪ್ರತಿದಾಳಿಗಳು ನಿರಂತರವಾಗಿ ನಡೆದಿವೆ. ಗುರುವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾ ಪಡೆಗಳು ಗಾಜಾ ಪಟ್ಟಿಯಲ್ಲಿ ವೈಮಾನಿಕ ದಾಳಿ ನಡೆಸಿ ಹಮಾಸ್ ಉಗ್ರರ ನೆಲೆಯೊಂದನ್ನು ನಾಶ ಮಾಡಿದ್ದವು.

Published On - 8:58 am, Sat, 28 January 23

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ