AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಮಧ್ಯಸ್ಥಿಕೆ ನಾಟಕಕ್ಕೆ ಇಸ್ರೇಲ್ ತಡೆ: ಪಾಕ್​ನ ವಿಶ್ವಾಸಾರ್ಹತೆ ಪ್ರಶ್ನಿಸಿದ ರಾಯಭಾರಿ ರುವೆನ್ ಅಜರ್

ಅಮೆರಿಕ-ಇರಾನ್ ಕದನವಿರಾಮದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ನಾಟಕವನ್ನು ಇಸ್ರೇಲ್ ಬಹಿರಂಗವಾಗಿ ಪ್ರಶ್ನಿಸಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಪಾಕಿಸ್ತಾನದ ವಿಶ್ವಾಸಾರ್ಹತೆ ಇಲ್ಲ ಎಂದು ತಳ್ಳಿಹಾಕಿದ್ದಾರೆ. ಚೀನಾದ ಸಾಲದ ಸುಳಿಯಲ್ಲಿರುವ ಪಾಕಿಸ್ತಾನ, ಅದರ ಮಾತುಕತೆಗಳಿಗೆ ಚೀನಾದ ಪ್ರಭಾವವೇ ಕಾರಣ ಎಂದು ಶಂಕಿಸಲಾಗಿದೆ. ಇದು ಪಾಕಿಸ್ತಾನದ ಜಾಗತಿಕ ರಾಜಕೀಯದ ಸ್ಥಾನಮಾನದ ಮೇಲೆ ಕರಿನೆರಳು ಬೀರಿದೆ.

ಪಾಕಿಸ್ತಾನದ ಮಧ್ಯಸ್ಥಿಕೆ ನಾಟಕಕ್ಕೆ ಇಸ್ರೇಲ್ ತಡೆ: ಪಾಕ್​ನ ವಿಶ್ವಾಸಾರ್ಹತೆ ಪ್ರಶ್ನಿಸಿದ ರಾಯಭಾರಿ ರುವೆನ್ ಅಜರ್
ಶೆಹಬಾಜ್ ಷರೀಫ್ Image Credit source: NDTV Profit
ನಯನಾ ರಾಜೀವ್
|

Updated on: Apr 09, 2026 | 10:47 AM

Share

ವಾಷಿಂಗ್ಟನ್, ಏಪ್ರಿಲ್ 09: ಜಾಗತಿಕ ರಾಜಕೀಯದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಎರಡು ವಾರಗಳ ಕದನ ವಿರಾಮವು ಒಂದು ಅಚ್ಚರಿಯ ಬೆಳವಣಿಗೆಯಾಗಿ ಹೊರಹೊಮ್ಮಿದೆ. ಆದರೆ, ಈ ಶಾಂತಿ ಪ್ರಕ್ರಿಯೆಯ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಈಗ ದೊಡ್ಡ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದೆ. ಪಾಕಿಸ್ತಾನವು ತನಗೆ ಬೇಕಾದಂತೆ ವಿಚಾರಗಳನ್ನು ತಿರುಚಿದೆ ಎನ್ನುವ ಆರೋಪ ಕೇಳಿಬಂದಿದೆ. ಲೆಬನಾನ್ ಮೇಲೆ ದಾಳಿ ಮಾಡಬೇಡಿ ಎನ್ನುವ ಷರತ್ತು ಕೂಡ ಅಮೆರಿಕಕ್ಕೆ ಇರಾನ್ ನೀಡಿದ್ದ ಷರತ್ತುಗಳ ಪಟ್ಟಿಯಲ್ಲಿತ್ತು ಎಂದು ಇರಾನ್ ಹೇಳಿದೆ ಆದರೆ ಅಮೆರಿಕ ಹೇಳುವ ಪ್ರಕಾರ ಆ ಪಟ್ಟಿಯಲ್ಲಿ ಲೆಬನಾನ್ ಹೆಸರಿರಲಿಲ್ಲ. ಇದರಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗುತ್ತಿದೆ.

ಇಸ್ರೇಲ್‌ನ ನೇರ ವಾಗ್ದಾಳಿ: ಪಾಕಿಸ್ತಾನ ವಿಶ್ವಾಸಾರ್ಹವಲ್ಲ ಈ ಇಡೀ ನಾಟಕದ ಕೇಂದ್ರಬಿಂದುವಾಗಿ ಇಸ್ಲಾಮಾಬಾದ್ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ.

ನಾವು ಪಾಕಿಸ್ತಾನವನ್ನು ಒಬ್ಬ ವಿಶ್ವಾಸಾರ್ಹ ಆಟಗಾರನಾಗಿ ನೋಡುವುದಿಲ್ಲ. ಹಿಂದೆ ಅಮೆರಿಕವು ಕತಾರ್ ಅಥವಾ ಟರ್ಕಿಯಂತಹ ರಾಷ್ಟ್ರಗಳ ಮೂಲಕ ಅನಿವಾರ್ಯವಾಗಿ ಮಾತುಕತೆ ನಡೆಸಿರಬಹುದು, ಆದರೆ ಅದರ ಅರ್ಥ ಪಾಕಿಸ್ತಾನದ ಪಾತ್ರಕ್ಕೆ ಸಿಕ್ಕ ಅನುಮೋದನೆ ಎಂದಲ್ಲ, ಎಂದು ಅಜರ್ ಗುಡುಗಿದ್ದಾರೆ. ಅವರ ಪ್ರಕಾರ, ಅಮೆರಿಕದ ನಿರ್ಧಾರಗಳು ಕೇವಲ ಕಾರ್ಯತಂತ್ರದ ಆಯ್ಕೆಗಳೇ ಹೊರತು ಪಾಕಿಸ್ತಾನದ ಮೇಲಿನ ನಂಬಿಕೆಯಲ್ಲ.

ಮತ್ತಷ್ಟು ಓದಿ: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಪೋಸ್ಟ್​ ತಂದ ಆಪತ್ತು: ಪ್ರಧಾನಿ ಷರೀಫ್ ಅವರ ನಡೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈ ಕದನ ವಿರಾಮದ ಸಂಪೂರ್ಣ ಕ್ರೆಡಿಟ್ ಪಡೆಯಲು ಹವಣಿಸುತ್ತಿದೆ. ಆದರೆ, ಕದನ ವಿರಾಮ ಘೋಷಣೆಯಾಗುವ ಕೆಲವೇ ಗಂಟೆಗಳ ಮೊದಲು ಷರೀಫ್ ಅವರು ಮಾಡಿದ ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ಅವರಿಗೆ ಉರುಳಾಗಿದೆ. ರಾಜತಾಂತ್ರಿಕತೆಗಾಗಿ ಅವರು ನೀಡಿದ ಕರೆ, ಒಪ್ಪಂದದ ಸಾರಾಂಶಕ್ಕಿಂತ ಹೆಚ್ಚಾಗಿ ಪ್ರಚಾರದ ಹಪಾಹಪಿಯಂತೆ ಕಾಣುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ತೆರೆಯ ಹಿಂದಿನ ‘ಡ್ರ್ಯಾಗನ್’ ಕೈವಾಡ? ಅಮೆರಿಕದ ಜೋನಾಥನ್ ಸ್ಕ್ಯಾಂಜರ್ ಅವರು ಪಾಕಿಸ್ತಾನದ ಈ ಹಠಾತ್ ‘ಶಾಂತಿ ಧೂತ’ನ ಅವತಾರದ ಹಿಂದೆ ಚೀನಾದ ನೆರಳು ಇರುವುದನ್ನು ಪತ್ತೆಹಚ್ಚಿದ್ದಾರೆ.

ಸಾಲದ ಸುಳಿ: ಪಾಕಿಸ್ತಾನವು ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ (BRI) ಅಡಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದೆ.

ಚೀನಾದ ಧ್ವನಿ: ಪಾಕಿಸ್ತಾನವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಬದಲಾಗಿ ಚೀನಾದ ಆಜ್ಞೆಯಂತೆ ಒಂದು ಮುಖವಾಣಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಸ್ಕ್ಯಾಂಜರ್ ಅವರ ವಾದ.

ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇರಾನ್ ಅನ್ನು ಒಪ್ಪಿಸುವಲ್ಲಿ ಚೀನಾ ಪ್ರಮುಖ ಪಾತ್ರ ವಹಿಸಿದೆ ಎಂದು ಸುಳಿವು ನೀಡಿರುವುದು ಈ ವಾದಕ್ಕೆ ಪುಷ್ಟಿ ನೀಡಿದೆ.

ಜೆ.ಡಿ. ವ್ಯಾನ್ಸ್ ಮತ್ತು ಆಂತರಿಕ ಗೊಂದಲ ಅಮೆರಿಕದ ಆಡಳಿತದ ಒಳಗೂ ಎಲ್ಲವೂ ಸರಿಯಿದ್ದಂತಿಲ್ಲ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ ಈ ಒಪ್ಪಂದದ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿದೆ ಎಂಬ ವರದಿಗಳು ವಾಷಿಂಗ್ಟನ್‌ನ ಆಂತರಿಕ ರಾಜಕೀಯದ ಓರೆಕೋರೆಗಳನ್ನು ಬಯಲು ಮಾಡಿವೆ. ವಿದೇಶಿ ಹಸ್ತಕ್ಷೇಪದ ಬಗ್ಗೆ ಕಟುವಾದ ನಿಲುವು ಹೊಂದಿರುವ ವ್ಯಾನ್ಸ್ ಅವರನ್ನು ಈ ಪ್ರಕ್ರಿಯೆಯಿಂದ ದೂರ ಇಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಂದಿರುವ ಸವಾಲು: ಶಾಂತಿ ಕೇವಲ ತಾತ್ಕಾಲಿಕವೇ? ಎರಡು ವಾರಗಳ ಕಾಲ ಬಾಂಬ್ ದಾಳಿ ನಿಲ್ಲಬಹುದು, ಆದರೆ ಇರಾನ್‌ನ ಪ್ರಾಕ್ಸಿ ನೆಟ್‌ವರ್ಕ್‌ಗಳಾದ ಹಮಾಸ್, ಹೆಜ್ಬೊಲ್ಲಾ ಮತ್ತು ಹೌತಿಗಳ ಭೀತಿ ಇನ್ನೂ ಹಸಿರಾಗಿದೆ. ಈ ಉಗ್ರಗಾಮಿ ಸಂಘಟನೆಗಳ ಮೂಲವನ್ನು ಸರಿಪಡಿಸದ ಹೊರತು, ಈ ಕದನ ವಿರಾಮವು ಕೇವಲ ಚಂಡಮಾರುತದ ಮುನ್ನ ಇರುವ ಶಾಂತಿಯಂತೆಯೇ ಎಂಬುದು ತಜ್ಞರ ಎಚ್ಚರಿಕೆ.

ಒಟ್ಟಾರೆಯಾಗಿ, ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ತನಗೊಂದು ಸ್ಥಾನಮಾನಕ್ಕಾಗಿ ಈ ಕದನ ವಿರಾಮವನ್ನು ಬಳಸಿಕೊಳ್ಳಲು ಯತ್ನಿಸುತ್ತಿದ್ದರೆ, ವಿಶ್ವದ ಬಲಾಢ್ಯ ರಾಷ್ಟ್ರಗಳು ಮಾತ್ರ ಪಾಕಿಸ್ತಾನದ ಈ ಶಾಂತಿ ನಾಟಕವನ್ನು ಅನುಮಾನದ ಕಣ್ಣಿನಿಂದಲೇ ನೋಡುತ್ತಿವೆ. ನಿಜವಾದ ಮಾತುಕತೆಗಳು ಅಮೆರಿಕ, ಇರಾನ್ ಮತ್ತು ಚೀನಾ ನಡುವೆ ನಡೆಯುತ್ತಿವೆಯೇ ಹೊರತು ಪಾಕಿಸ್ತಾನದೊಂದಿಗೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!