ಲೆಬನಾನ್‌ನೊಂದಿಗೆ ಶೀಘ್ರದಲ್ಲೇ ಇಸ್ರೇಲ್ ನೇರ ಮಾತುಕತೆ; ನೆತನ್ಯಾಹು ಘೋಷಣೆ

ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಬೈರುತ್‌ನ ಹಲವಾರು ವಸತಿ ಮತ್ತು ವಾಣಿಜ್ಯ ಪ್ರದೇಶಗಳ ಮೇಲೆ ಯಾವುದೇ ಎಚ್ಚರಿಕೆ ನೀಡದೆ ದಾಳಿ ಮಾಡಿದೆ. ಇಸ್ರೇಲ್-ಲೆಬನಾನ್ ಸಂಘರ್ಷದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಹೀಗಾಗಿ, ಲೆಬನಾನ್‌ನಲ್ಲಿ ಮಿಲಿಟರಿ ದಾಳಿಯನ್ನು ಕಡಿಮೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆಯ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಲೆಬನಾನ್‌ನೊಂದಿಗೆ ಶೀಘ್ರದಲ್ಲೇ ಇಸ್ರೇಲ್ ನೇರ ಮಾತುಕತೆ; ನೆತನ್ಯಾಹು ಘೋಷಣೆ
Bejamin Netanyahu
Image Credit source: PTI

Updated on: Apr 09, 2026 | 10:51 PM

ಟೆಲ್ ಅವಿವ್, ಏಪ್ರಿಲ್ 9: ಹಿಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸಲು ಮತ್ತು ಎರಡೂ ದೇಶಗಳ ನಡುವೆ ಶಾಂತಿ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯವಾದಷ್ಟು ಬೇಗ ಲೆಬನಾನ್‌ನೊಂದಿಗೆ ನೇರ ಮಾತುಕತೆಗಳನ್ನು ಪ್ರಾರಂಭಿಸಲು ನಮ್ಮ ಸಂಪುಟಕ್ಕೆ ಸೂಚನೆ ನೀಡಿದ್ದೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹೇಳಿದ್ದಾರೆ. ಬೈರುತ್, ಬೆಕಾ ಕಣಿವೆ ಮತ್ತು ಲೆಬನಾನ್​ನ ದಕ್ಷಿಣ ಭಾಗದಾದ್ಯಂತ ಇಸ್ರೇಲ್ ಮಾರಕ ದಾಳಿಗಳನ್ನು ನಡೆಸಿದ ಒಂದು ದಿನದ ನಂತರ ಅವರ ಈ ಹೇಳಿಕೆ ಬಂದಿದೆ. ಈ ದಾಳಿಯಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಸುದ್ದಿ ಸಂಸ್ಥೆ AFP ಪ್ರಕಾರ, ಅಮೆರಿಕಕ್ಕೆ ಇಸ್ರೇಲ್‌ನ ರಾಯಭಾರಿಯಾಗಿರುವ ಯೆಚಿಯಲ್ ಲೀಟರ್ ಲೆಬನಾನ್ ಜೊತೆಗಿನ ಈ ಮಾತುಕತೆಯಲ್ಲಿ ಇಸ್ರೇಲ್ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಮಾತುಕತೆಗಳು ಹಿಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸುವುದು, ಇಸ್ರೇಲ್ ಮತ್ತು ಲೆಬನಾನ್ ನಡುವೆ ಶಾಂತಿಯುತ ಸಂಬಂಧಗಳನ್ನು ಸ್ಥಾಪಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ಇದನ್ನೂ ಓದಿ: ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

“ಇಸ್ರೇಲ್‌ನೊಂದಿಗೆ ನೇರ ಮಾತುಕತೆಗಳನ್ನು ನಡೆಸಲು ಲೆಬನಾನ್ ಪದೇ ಪದೇ ವಿನಂತಿಸಿದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಲೆಬನಾನ್‌ನೊಂದಿಗೆ ನೇರ ಮಾತುಕತೆಗಳನ್ನು ಪ್ರಾರಂಭಿಸಲು ನಾನು ನಿನ್ನೆ ಕ್ಯಾಬಿನೆಟ್‌ಗೆ ಸೂಚಿಸಿದ್ದೇನೆ” ಎಂದು ನೆತನ್ಯಾಹು ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us