ಇಸ್ರೇಲ್ ಹಿಜ್ಬೊಲ್ಲಾ ಮೇಲೆ ದಾಳಿ ಮುಂದುವರಿಸುತ್ತದೆ; ನೆತನ್ಯಾಹು ಎಚ್ಚರಿಕೆ

ಲೆಬನಾನ್‌ನಲ್ಲಿ ದಾಳಿಗಳನ್ನು ನಡೆಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯೆ ನೀಡಿದ್ದು, ಅಗತ್ಯವಿರುವಲ್ಲೆಲ್ಲ ಹಿಜ್ಬೊಲ್ಲಾ ಮೇಲೆ ದಾಳಿಯನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಹಿಜ್ಬೊಲ್ಲಾ ಜೊತೆಗಿನ ಸಂಘರ್ಷ ಪ್ರಾರಂಭವಾದಾಗಿನಿಂದ ಇಸ್ರೇಲ್ ಲೆಬನಾನ್ ಮೇಲೆ ತನ್ನ ಅತ್ಯಂತ ಮಾರಕ ದಾಳಿಗಳನ್ನು ಪ್ರಾರಂಭಿಸಿದೆ. ಇದಕ್ಕೆ ಇರಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೂ ಇಸ್ರೇಲ್ ಲೆಬನಾನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದೆ.

ಇಸ್ರೇಲ್ ಹಿಜ್ಬೊಲ್ಲಾ ಮೇಲೆ ದಾಳಿ ಮುಂದುವರಿಸುತ್ತದೆ; ನೆತನ್ಯಾಹು ಎಚ್ಚರಿಕೆ
Netanyahu
Image Credit source: AP

Updated on: Apr 09, 2026 | 7:00 PM

ಟೆಲ್ ಅವೀವ್, ಏಪ್ರಿಲ್ 9: ಲೆಬನಾನ್‌ನಾದ್ಯಂತ ಮಾರಕ ದಾಳಿಗಳ ನಂತರವೂ ಇಸ್ರೇಲ್ ಹೆಜ್ಬೊಲ್ಲಾ ವಿರುದ್ಧ ತನ್ನ ಮಿಲಿಟರಿ ದಾಳಿಯನ್ನು ಮುಂದುವರಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಘೋಷಿಸಿದ್ದಾರೆ. ಇಸ್ರೇಲ್​ನ ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸೆಮ್ ಅವರ ಸೋದರಳಿಯ ಮತ್ತು ಆಪ್ತ ಸಹಾಯಕ ಕೊಲ್ಲಲ್ಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಅಗತ್ಯವಿರುವಲ್ಲೆಲ್ಲ ಹಿಜ್ಬೊಲ್ಲಾ ಮೇಲೆ ದಾಳಿಯನ್ನು ಮುಂದುವರಿಸುತ್ತದೆ ಎಂದು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗೆ 2 ವಾರಗಳ ಕದನ ವಿರಾಮವನ್ನು ಘೋಷಿಸಿದ ಗಂಟೆಗಳ ನಂತರ ಬೈರುತ್‌ನ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿಗಳನ್ನು ಪ್ರಾರಂಭಿಸಿತ್ತು. ಈ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 250ಕ್ಕೆ ಏರಿದೆ.

ಇದನ್ನೂ ಓದಿ: ಲೆಬನಾನ್​​ನಲ್ಲಿ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 13 ಮಂದಿ ಸಾವು

ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ಉಗ್ರಗಾಮಿ ಗುಂಪಿನ ವಿರುದ್ಧದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ನಿನ್ನೆ ರಾತ್ರಿಯಿಂದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದೆ. ಬುಧವಾರ ಇರಾನ್ ಇರಾನ್‌ನೊಂದಿಗೆ ಅಮೆರಿಕ ಕದನ ವಿರಾಮ ಘೋಷಿಸಿದ ನಂತರ 2 ವಾರಗಳ ಕಾಲ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಒಪ್ಪಿಕೊಂಡಿತ್ತು. ಆದರೆ, ಲೆಬನಾನ್ ಮೇಲಿನ ದಾಳಿಯಿಂದ ಮತ್ತೆ ಹಾರ್ಮುಜ್ ಅನ್ನು ಮುಚ್ಚಲಾಗಿದೆ. ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:00 pm, Thu, 9 April 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us