AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಬನಾನ್​​ನಲ್ಲಿ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 13 ಮಂದಿ ಸಾವು

ಇಸ್ರೇಲ್ ಪ್ಯಾನೆಸ್ತೀನಿಯನ್ನರಿರುವ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಲೆಬನಾನ್​ನಲ್ಲಿ ಈ ದಾಳಿ ನಡೆದಿದೆ. ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ನಗರ ಸಿಡಾನ್‌ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಡ್ರೋನ್ ದಾಳಿ ನಡೆದಿದೆ. ಇಸ್ರೇಲ್ ಮತ್ತು ಅದರ ಸೈನ್ಯದ ವಿರುದ್ಧ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹಮಾಸ್ ತರಬೇತಿ ಆವರಣದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಲೆಬನಾನ್​​ನಲ್ಲಿ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ, 13 ಮಂದಿ ಸಾವು
ವೈಮಾನಿಕ ದಾಳಿ
ನಯನಾ ರಾಜೀವ್
|

Updated on: Nov 19, 2025 | 7:57 AM

Share

ರಮಲ್ಲಾ, ನವೆಂಬರ್ 19: ದಕ್ಷಿಣ ಲೆಬನಾನ್​ನಲ್ಲಿರುವ ಪ್ಯಾಲೆಸ್ತೀನಿಯರ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್(Israel) ವೈಮಾನಿಕ ದಾಳಿ ನಡೆಸಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಹಲವು ಮಂದಿ ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮದ ನಂತರ ಲೆಬನಾನ್ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ಕರಾವಳಿ ನಗರ ಸಿಡಾನ್‌ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ ನಿರಾಶ್ರಿತರ ಶಿಬಿರದಲ್ಲಿರುವ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಡ್ರೋನ್ ದಾಳಿ ನಡೆದಿದೆ. ಇಸ್ರೇಲ್ ಮತ್ತು ಅದರ ಸೈನ್ಯದ ವಿರುದ್ಧ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಹಮಾಸ್ ತರಬೇತಿ ಆವರಣದ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಹಮಾಸ್ ಗುಂಪು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿದೆಯೋ ಅಲ್ಲೆಲ್ಲಾ ಅದರ ವಿರುದ್ಧ ಇಸ್ರೇಲ್ ಸೇನೆಯು ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಅದು ಹೇಳಿದೆ.

ಕಳೆದ ಎರಡು ವರ್ಷಗಳಲ್ಲಿ, ಲೆಬನಾನ್ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಹಿಜ್ಬುಲ್ಲಾ ಗುಂಪಿನ ಹಲವಾರು ಅಧಿಕಾರಿಗಳು ಹಾಗೂ ಹಮಾಸ್​ನ ಸದಸ್ಯರು ಸಾವನ್ನಪ್ಪಿದ್ದಾರೆ. ಜನವರಿ 2, 2024 ರಂದು ಬೈರುತ್‌ನ ದಕ್ಷಿಣ ಉಪನಗರದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಹಮಾಸ್‌ನ ಮುಖ್ಯಸ್ಥ ಮತ್ತು ಗುಂಪಿನ ಮಿಲಿಟರಿ ವಿಭಾಗದ ಸಂಸ್ಥಾಪಕ ಸಲೇಹ್ ಅರೌರಿ ಕೊಲ್ಲಲ್ಪಟ್ಟಿದ್ದರು.

ಮತ್ತಷ್ಟು ಓದಿ: ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ; 4 ಪತ್ರಕರ್ತರು ಸೇರಿ 15 ಜನ ಸಾವು

ಅಂದಿನಿಂದ ಹಲವಾರು ಇತರ ಹಮಾಸ್ ಅಧಿಕಾರಿಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಇದು ಕಾರಣವಾಯಿತು, ಇದು ಹತ್ತಾರು ಸಾವಿರ ಪ್ಯಾಲೆಸ್ತೀನಿಯರನ್ನು ಕೊಂದಿತ್ತು ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ಒಂದು ದಿನದ ನಂತರ, ಹಿಜ್ಬುಲ್ಲಾ ಗಡಿಯುದ್ದಕ್ಕೂ ಇಸ್ರೇಲಿ ಪೋಸ್ಟ್‌ಗಳ ಕಡೆಗೆ ರಾಕೆಟ್‌ಗಳನ್ನು ಹಾರಿಸಲು ಪ್ರಾರಂಭಿಸಿತು. ಇಸ್ರೇಲ್ ಲೆಬನಾನ್‌ನಲ್ಲಿ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯೊಂದಿಗೆ ಪ್ರತಿಕ್ರಿಯಿಸಿತು ಮತ್ತು ಎರಡೂ ಕಡೆಯವರು ಉಲ್ಬಣಗೊಳ್ಳುತ್ತಿರುವ ಸಂಘರ್ಷದಲ್ಲಿ ಸಿಲುಕಿಕೊಂಡಿದ್ದರು. ಇದು ಸೆಪ್ಟೆಂಬರ್ 2024 ರ ಅಂತ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ