AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದೊಂದಿಗಿನ ವ್ಯಾಪಾರ ಏಕಪಕ್ಷೀಯ ವಿಪತ್ತು; ಡೊನಾಲ್ಡ್ ಟ್ರಂಪ್

ಅಮೆರಿಕದ ಮೇಲಿನ ಸುಂಕವನ್ನು ಭಾರತ ಶೂನ್ಯಕ್ಕೆ ಇಳಿಸಲು ಮುಂದಾಗಿದೆ. ಆದರೆ, ಈಗಾಗಲೇ ಬಹಳ ತಡವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದ ಜೊತೆಗಿನ ಸಂಬಂಧಗಳ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್ ಭಾರತದೊಂದಿಗಿನ ವ್ಯಾಪಾರ 'ಏಕಪಕ್ಷೀಯ ವಿಪತ್ತು' ಎಂದು ಹೇಳಿದ್ದಾರೆ. ಚೀನಾದ ಶೃಂಗಸಭೆಯಲ್ಲಿ ರಷ್ಯಾ, ಚೀನಾ ಅಧ್ಯಕ್ಷರ ಜೊತೆ ಮೋದಿ ಆತ್ಮೀಯವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಭಾರತದೊಂದಿಗಿನ ವ್ಯಾಪಾರ ಏಕಪಕ್ಷೀಯ ವಿಪತ್ತು; ಡೊನಾಲ್ಡ್ ಟ್ರಂಪ್
Trump
ಸುಷ್ಮಾ ಚಕ್ರೆ
|

Updated on: Sep 01, 2025 | 9:16 PM

Share

ವಾಷಿಂಗ್ಟನ್, ಸೆಪ್ಟೆಂಬರ್ 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಇಂದು ಭಾರತ-ಅಮೆರಿಕ ವ್ಯಾಪಾರವನ್ನು “ಏಕಪಕ್ಷೀಯ ವಿಪತ್ತು” ಎಂದು ಕರೆದಿದ್ದಾರೆ. ಹಾಗೇ, ಭಾರತವು ಅಮೆರಿಕದ ಸರಕುಗಳ ಮೇಲಿನ ತನ್ನ ಆಮದು ತೆರಿಗೆಯನ್ನು ಶೂನ್ಯಕ್ಕೆ ಇಳಿಸಲು ಮುಂದಾಗಿದೆ. ಆದರೆ, ಭಾರತ ಈ ನಿರ್ಧಾರ ತೆಗೆದುಕೊಳ್ಳುವುದು ಬಹಳ ತಡವಾಗಿದೆ ಎಂದಿದ್ದಾರೆ. ಅಮೆರಿಕ ಭಾರತದ ಮೇಲೆ ಶೇ. 50ರಷ್ಟು ಆಮದು ಸುಂಕ ವಿಧಿಸಿದೆ. ಇದರ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಸುಂಕ ನೀತಿಗೆ ಟಾಂಗ್ ನೀಡಲೆಂಬಂತೆ ಚೀನಾದ ಶೃಂಗಸಭೆಯಲ್ಲಿ ರಷ್ಯನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದು, ಖಾಸಗಿಯಾಗಿ ಮಾತುಕತೆಯನ್ನೂ ನಡೆಸಿದ್ದಾರೆ.

ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ ಟ್ರಂಪ್ ಭಾರತೀಯ ಆಮದುಗಳ ಮೇಲೆ 50% ಸುಂಕ ವಿಧಿಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡಿ ಅಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ ಟ್ರಂಪ್ ಅವರ ಈ ಹೇಳಿಕೆಗಳು ಬಂದಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷ ಕಾದ ಪುಟಿನ್; ಟ್ರೆಂಡ್ ಆಯ್ತು ಫೋಟೋ

“ಕೆಲವು ಜನರು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ನಾವು ಭಾರತದೊಂದಿಗೆ ಬಹಳ ಕಡಿಮೆ ವ್ಯವಹಾರ ಮಾಡುತ್ತೇವೆ, ಆದರೆ ಅವರು ನಮ್ಮೊಂದಿಗೆ ಅಪಾರ ಪ್ರಮಾಣದ ವ್ಯವಹಾರ ಮಾಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ನಮಗೆ ಬೃಹತ್ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಾರೆ. ನಾವು ಅವರ ಅತಿದೊಡ್ಡ “ಕ್ಲೈಂಟ್”. ಆದರೆ ನಾವು ಭಾರತಕ್ಕೆ ಬಹಳ ಕಡಿಮೆ ಮಾರಾಟ ಮಾಡುತ್ತೇವೆ. ಈ ವ್ಯಾಪಾರವೊಂದು ಏಕಪಕ್ಷೀಯ ವಿಪತ್ತು ಎಂದಿದ್ದಾರೆ.

“ಭಾರತವು ಇಲ್ಲಿಯವರೆಗೆ ಯಾವುದೇ ದೇಶಕ್ಕಿಂತ ಹೆಚ್ಚಿನ ಸುಂಕಗಳನ್ನು ನಮಗೆ ವಿಧಿಸಿದೆ. ಇದು ಸಂಪೂರ್ಣವಾಗಿ ಏಕಪಕ್ಷೀಯ ವಿಪತ್ತು! ಅಲ್ಲದೆ, ಭಾರತವು ತನ್ನ ಹೆಚ್ಚಿನ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತದೆ, ಯುಎಸ್‌ನಿಂದ ಬಹಳ ಕಡಿಮೆ ಖರೀದಿ ಮಾಡುತ್ತದೆ. ಅವರು ಈಗ ತಮ್ಮ ಸುಂಕಗಳನ್ನು ಶೂನ್ಯಕ್ಕೆ ಇಳಿಸಲು ಮುಂದಾಗಿದ್ದಾರೆ, ಆದರೆ ಅದು ಬಹಳ ತಡವಾಗಿದೆ. ಅವರು ವರ್ಷಗಳ ಹಿಂದೆಯೇ ಹಾಗೆ ಮಾಡಬೇಕಾಗಿತ್ತು” ಎಂದು ಟ್ರಂಪ್ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ