AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Japan Earthquake: ಜಪಾನ್​ನಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ, 6.7 ತೀವ್ರತೆಯ ಭೂಕಂಪ

ಜಪಾನ್​ನಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ರಷ್ಟು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 5 ಬಾರಿ ಭೂಮಿ ಕಂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ ಆದರೆ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳು ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Japan Earthquake: ಜಪಾನ್​ನಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ, 6.7 ತೀವ್ರತೆಯ ಭೂಕಂಪ
ಭೂಕಂಪ
ನಯನಾ ರಾಜೀವ್
|

Updated on:Dec 12, 2025 | 10:04 AM

Share

ಜಪಾನ್, ಡಿಸೆಂಬರ್ 12: ಜಪಾನ್​ನಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ರಷ್ಟು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 5 ಬಾರಿ ಭೂಮಿ ಕಂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾನಿಯ ಪ್ರಮಾಣ ಇನ್ನೂ ತಿಳಿದುಬಂದಿಲ್ಲ ಆದರೆ 33 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳು ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್  ಆಳದಲ್ಲಿ ಇತ್ತು. ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಕಳೆದ 24 ಗಂಟೆಗಳಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಐದನೇ ಭೂಕಂಪ ಇದಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, ಶುಕ್ರವಾರ ಈಶಾನ್ಯ ಜಪಾನ್​ನಲ್ಲಿ 6.7 ತೀವ್ರತೆಯ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಈ ವಾರದ ಆರಂಭದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಪೆಸಿಫಿಕ್ ಮಹಾಸಾಗರದ ಕರಾವಳಿಯಲ್ಲಿ ಬಿರುಕುಗಳು, ಸಣ್ಣ ಹಾನಿ ಮತ್ತು ಸುನಾಮಿಯನ್ನು ಉಂಟು ಮಾಡಿತ್ತು. ಜಪಾನ್‌ನ ಪ್ರಮುಖ ದ್ವೀಪವಾದ ಹೊನ್ಶುವಿನ ಉತ್ತರದ ತುದಿಯಲ್ಲಿರುವ ಅಮೋರಿ ಕರಾವಳಿಯಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 34 ಜನರು ಗಾಯಗೊಂಡಿದ್ದಾರೆ.

ಮತ್ತಷ್ಟು ಒದಿ: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ, 7 ಮಂದಿ ಸಾವು, ಮನೆಗಳು ನೆಲಸಮ

ಭೂಕಂಪದ ನಂತರ ಜಪಾನ್ ಹವಾಮಾನ ಸಂಸ್ಥೆಯು 1 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಎಚ್ಚರಿಕೆ ನೀಡಿದೆ ಎಂದು ಜಪಾನಿನ ಮಾಧ್ಯಮಗಳು ತಿಳಿಸಿವೆ. ಹಲವಾರು ಕರಾವಳಿ ಪ್ರದೇಶಗಳು ಮಧ್ಯಾಹ್ನದವರೆಗೂ ನಿರಂತರ ಎಚ್ಚರಿಕೆಯಲ್ಲಿವೆ.ಹೊಕ್ಕೈಡೋದ ಮಧ್ಯ ಪೆಸಿಫಿಕ್ ಕರಾವಳಿ, ಅಮೋರಿ ಪ್ರಿಫೆಕ್ಚರ್, ಇವಾಟೆ ಪ್ರಿಫೆಕ್ಚರ್ ಮತ್ತು ಮಿಯಾಗಿ ಪ್ರಿಫೆಕ್ಚರ್‌ಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ.

ಭೂಕಂಪದ ನಂತರ, ಹಲವಾರು ರೈಲುಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ಕರಾವಳಿ ಹೆದ್ದಾರಿಗಳನ್ನು ಮುಚ್ಚಲಾಯಿತು. ಸ್ಥಳೀಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು, ಜನರು ತಕ್ಷಣ ತಮ್ಮ ಮನೆಗಳಿಂದ ಹೊರಬಂದು ತೆರೆದ ಪ್ರದೇಶಗಳಲ್ಲಿ ಸೇರಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:04 am, Fri, 12 December 25