Joe Biden: ರಷ್ಯಾವನ್ನು ಎಂದೂ ಗೆಲ್ಲಲು ಬಿಡುವುದಿಲ್ಲ, ಉಕ್ರೇನ್ ಜತೆ ಸದಾ ನಾವಿರುತ್ತೇವೆ: ಜೋ ಬೈಡನ್
ರಷ್ಯಾವನ್ನು ಎಂದಿಗೂ ಗೆಲ್ಲಲು ಬಿಡುವುದಿಲ್ಲ, ಉಕ್ರೇನ್ ಜತೆ ಸದಾ ನಾವಿರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ರಷ್ಯಾವನ್ನು ಎಂದಿಗೂ ಗೆಲ್ಲಲು ಬಿಡುವುದಿಲ್ಲ, ಉಕ್ರೇನ್ ಜತೆ ಸದಾ ನಾವಿರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಉಕ್ರೇನ್‌ಗೆ ಜೋ ಬೈಡನ್ ಭೇಟಿಕೊಟ್ಟ ಬಳಿಕ ಪುಟಿನ್ ಕಣ್ಣು ಕೆಂಪಾಗಿತ್ತು, ನಾವು ಇಷ್ಟಕ್ಕೇ ಬಿಡುವುದಿಲ್ಲ, ಉಕ್ರೇನ್ ಮೇಲೆ ಮತ್ತೆ ಯುದ್ಧ ಸಾರುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು. ಈ ಕುರಿತು ಮಾತನಾಡಿರುವ ಜೋ ಬೈಡನ್ ಎಂದಿಗೂ ಉಕ್ರೇನ್ನನ್ನು ರಷ್ಯಾಗೆ ವಶಪಡಿಸಿಕೊಳ್ಳಲು ಬಿಡುವುದಿಲ್ಲ, ಯುದ್ಧದಲ್ಲಿ ಅವರು ಜಯಶಾಲಿಯಾಗುವುದಿಲ್ಲ, ಉಕ್ರೇನ್ ಜತೆ ಅಮೆರಿಕ ಸೇರಿದಂತೆ ಇತರೆ ಮಿತ್ರ ರಾಷ್ಟ್ರಗಳು ಇವೆ ಎಂದು ಭರವಸೆ ನೀಡಿದ್ದಾರೆ.
ತಮ್ಮ ನೆರೆಹೊರೆಯವರೊಂದಿಗೆ ಶಾಂತಿಯಿಂದ ಬದುಕಲು ಬಯಸುವ ಲಕ್ಷಾಂತರ ರಷ್ಯಾದ ನಾಗರಿಕರು ಶತ್ರುಗಳಲ್ಲ. ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ಉಕ್ರೇನ್ ಭೇಟಿಯನ್ನು ಗೌಪ್ಯವಾಗಿ ಆಯೋಜಿಸಲಾಗಿತ್ತು.
ಮತ್ತಷ್ಟು ಓದಿ: Russia Ukraine War: ನಾವು ಮತ್ತೆ ಉಕ್ರೇನ್ ಮೇಲೆ ದಾಳಿ ಮಾಡುತ್ತೇವೆ, ಪರೋಕ್ಷವಾಗಿ ಅಮೆರಿಕ ವಿರುದ್ಧ ಗುಡುಗಿದ ಪುಟಿನ್
ಉಕ್ರೇನಿಯನ್ ಜನರನ್ನು ವೈಮಾನಿಕ ಬಾಂಬ್ ದಾಳಿಯಿಂದ ರಕ್ಷಿಸಲು ಫಿರಂಗಿ, ಮದ್ದು-ಗುಂಡುಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ವಾಯು ಕಣ್ಗಾವಲು ರಾಡರ್‌ಗಳು ಸೇರಿದಂತೆ ನಿರ್ಣಾಯಕ ಸಲಕರಣೆಗಳನ್ನು ಪೂರೈಸುತ್ತೇನೆ ಎಂಬುದಾಗಿ ಶ್ವೇತಭವನದ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಳಿಕ ಝಲೆನ್ಸ್ಕಿ, ಬೈಡನ್ ಭೇಟಿಯನ್ನು ಬೆಂಬಲದ ಸಂಕೇತ ಸ್ವಾಗತಿಸಿದ್ದಾರೆ. ಈ ಬೆಳವಣಿಗೆ ರಷ್ಯಾಗೆ ಮತ್ತಷ್ಟು ಕೋಪ ಉಂಟುಮಾಡಿದೆ.
ಇತ್ತೀಚೆಗೆ ಬ್ರಿಟನ್ ಸಹ ಉಕ್ರೇನ್‌ಗೆ ಸೇನಾ ನೆರವು ಘೋಷಣೆ ಮಾಡಿತು. ರಷ್ಯಾವನ್ನು ಹಿಮ್ಮೆಟ್ಟಿಸಲು ಮೇ ತಿಂಗಳ ವೇಳೆಗೆ ಯುದ್ಧ ವಿಮಾನಗಳು ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಕೀವ್‌ಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:19 am, Wed, 22 February 23