ಮಹಿಳೆ ಔಷಧಿ ಆರ್ಡರ್ ಮಾಡಿದ್ರೆ ಬಾಕ್ಸ್​​ನಲ್ಲಿ ಬಂದಿದ್ದು ಮಾನವನ ದೇಹದ ಅಂಗಗಳು

ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್​ ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಭಾಗಗಳಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್​​ ಜತೆಗೆ ಇಟ್ಟಿರುವುದು ಕಂಡುಬಂದಿದೆ.

ಮಹಿಳೆ ಔಷಧಿ ಆರ್ಡರ್ ಮಾಡಿದ್ರೆ ಬಾಕ್ಸ್​​ನಲ್ಲಿ ಬಂದಿದ್ದು ಮಾನವನ ದೇಹದ ಅಂಗಗಳು
ಪಾರ್ಸೆಲ್

Updated on: Nov 04, 2025 | 1:23 PM

ವಾಷಿಂಗ್ಟನ್, ನವೆಂಬರ್ 04: ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್​ ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. 

ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್​​ ಜತೆಗೆ ಇಟ್ಟಿರುವುದು ಕಂಡುಬಂದಿದೆ. ಕೆಂಟುಕಿಯ ಹಾಪ್ಕಿನ್ಸ್‌ವಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಬುಧವಾರ ಪಾರ್ಸೆಲ್ ಪಡೆದ ನಂತರ, ಪೊಲೀಸರಿಗೆ ಕರೆ ಮಾಡಿದ್ದಾರೆ. ನಾವು ತುರ್ತು ಔಷಧಿಗಳನ್ನು ನಿರೀಕ್ಷಿಸುತ್ತಿದ್ದೆವು ಅವರು ಎರಡು ಬಾಕ್ಸ್​ಗಳನ್ನು ನೀಡಿದ್ದರು.

ಒಂದು ಪೆಟ್ಟಿಗೆಯಲ್ಲಿ ಕಸಿಗೆ ಬೇಕಾದ ಮಾನವ ದೇಹದ ಬಿಡಿ ಭಾಗಗಳಿದ್ದವು. ಅದು ಎಲ್ಲಿಗೆ ಹೋಗಬೇಕಿತ್ತು ಎಂಬ ಅರಿವಿಲ್ಲ.ಕ್ರಿಶ್ಚಿಯನ್ ಕೌಂಟಿ ಕರೋನರ್ ಸ್ಕಾಟ್ ಡೇನಿಯಲ್ ಸ್ಥಳಕ್ಕೆ ಬಂದು ಅವಶೇಷಗಳನ್ನು ವಶಪಡಿಸಿಕೊಂಡರು. ಡೇನಿಯಲ್ ಆ ಪ್ಯಾಕೇಜ್ ಅನ್ನು ಸ್ಥಳೀಯ ಶವಾಗಾರಕ್ಕೆ ತೆಗೆದುಕೊಂಡು ಹೋದರು, ಅಲ್ಲಿ ಮರುದಿನ ಬೆಳಗ್ಗೆ ಕೊರಿಯರ್ ಮೂಲಕ ಅದನ್ನು ಮರಳಿ ಪಡೆಯಲಾಯಿತು.

ಮತ್ತಷ್ಟು ಓದಿ:  ಮೆದುಳು ಮಾತ್ರವಲ್ಲ ದೇಹದ ಬೇರೆ ಭಾಗಗಳೂ ನೆನಪುಗಳನ್ನು ಸಂಗ್ರಹಿಸುತ್ತವೆ: ಹೊಸ ಸಂಶೋಧನೆ

ದೇಹದ ಭಾಗಗಳು ನಾಲ್ಕು ವಿಭಿನ್ನ ದಾನಿಗಳಿಂದ ಬಂದಿದ್ದವು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದಕ್ಕಾಗಿ ಡೇನಿಯಲ್ ಆ ಮಹಿಳೆಯನ್ನು ಹೊಗಳಿದ್ದಾರೆ.

ಅಧಿಕಾರಿಗಳನ್ನು ಕರೆಯುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ. ಯಾರದ್ದೋ ಶಸ್ತ್ರಚಿಕಿತ್ಸೆಗೆಂದು ಕಳುಹಿಸಲಾಗಿದ್ದ ದೇಹದ ಅಂಗಾಂಗಗಳು ಈ ಮಹಿಳೆಗೆ ತಲುಪಿದ್ದವು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us