ಯಾವ ದೇಶದ ಪ್ರಧಾನಿ ಹೆಚ್ಚು ಓದಿದ್ದು? ವಿವಿಧ ದೇಶಗಳ ಪ್ರಧಾನಿಗಳ ಶೈಕ್ಷಣಿಕ ಅರ್ಹತೆ ಏನು? ಇಲ್ಲಿದೆ ಮಾಹಿತಿ

| Updated By: ರಶ್ಮಿ ಕಲ್ಲಕಟ್ಟ

Updated on: May 25, 2022 | 3:31 PM

ಪ್ರಧಾನಿಯಾಗುವ ಮುನ್ನ ಚಹಾ ಮಾರುತ್ತಿದ್ದರು ಮೋದಿ, ಕೆನಡಾದ ಪ್ರಧಾನಿ ಟ್ರುಡೊ ಶಿಕ್ಷಕರಾಗಿದ್ದರು. ಶ್ರೀಲಂಕಾದ ಪ್ರಧಾನಿ ಸುಪ್ರೀಂಕೋರ್ಟ್‌ನ ವಕೀಲರಾಗಿದ್ದರು.ಜಗತ್ತಿನಾದ್ಯಂತವಿರುವ ವಿವಿಧ ದೇಶಗಳ ಪ್ರಧಾನಿಯ ಶೈಕ್ಷಣಿಕ ಅರ್ಹತೆ ಇಲ್ಲಿದೆ

ಯಾವ ದೇಶದ ಪ್ರಧಾನಿ ಹೆಚ್ಚು ಓದಿದ್ದು? ವಿವಿಧ ದೇಶಗಳ ಪ್ರಧಾನಿಗಳ ಶೈಕ್ಷಣಿಕ ಅರ್ಹತೆ ಏನು? ಇಲ್ಲಿದೆ ಮಾಹಿತಿ
ನರೇಂದ್ರ ಮೋದಿ- ಬೋರಿಸ್ ಜಾನ್ಸನ್- ರಾನಿಲ್ ವಿಕ್ರಮಸಿಂಘೆ
Follow us on

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುವುದರಿಂದ ಹಿಡಿದು ಚಹಾ ಮಾರಾಟಗಾರನವರೆಗೆ ಪ್ರಪಂಚದ ವಿವಿಧ ದೇಶಗಳ  ಪ್ರಧಾನ ಮಂತ್ರಿಗಳು ವಿವಿಧ ಹಿನ್ನೆಲೆಗಳಿಂದ ಬಂದವರು. ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್‌ನಿಂದ (Anthony Albanese) ಹಿಡಿದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್‌ವರೆಗೆ(Boris Johnson) ವಿವಿಧ ದೇಶಗಳ ಪ್ರಧಾನಿಗಳ ಶೈಕ್ಷಣಿಕ ಅರ್ಹತೆ ಏನು?  ಪ್ರಧಾನಿಯಾಗುವುದಕ್ಕಿಂತ ಮುನ್ನ ಅವರು ಯಾವೆಲ್ಲ ಕೆಲಸಗಳನ್ನು ಮಾಡಿದ್ದರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್

ಆಸ್ಟ್ರೇಲಿಯಾದ ನೂತನ ಪ್ರಧಾನ ಆಂಥೋನಿ ಅಲ್ಬನೀಸ್ ತನ್ನ ತಾಯಿ ಮತ್ತು ತಾಯಿಯ ಅಜ್ಜಿಯರೊಂದಿಗೆ ಸಿಡ್ನಿ ಸಿಟಿ ಕೌನ್ಸಿಲ್ ಹೋಮ್‌ನಲ್ಲಿ ಇನ್ನರ್ ವೆಸ್ಟ್ ಉಪನಗರ ಕ್ಯಾಂಪರ್‌ಡೌನ್‌ನಲ್ಲಿ ಬೆಳೆದರು. ಕ್ಯಾಂಪರ್‌ಡೌನ್‌ನಲ್ಲಿರುವ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಂತರ ಸೇಂಟ್ ಮೇರಿಸ್ ಕ್ಯಾಥೆಡ್ರಲ್ ಕಾಲೇಜಿಗೆ ಸೇರಿದರು. ಶಾಲಾ ಶಿಕ್ಷಣ ಮುಗಿಸಿದ ನಂತರ, ಅವರು ಎರಡು ವರ್ಷಗಳ ಕಾಲ ಕಾಮನ್ವೆಲ್ತ್ ಬ್ಯಾಂಕ್ ನಲ್ಲಿ ಕೆಲಸ ಮಾಡಿದರು. ನಂತರ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದರು. ವಿದ್ಯಾರ್ಥಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು ವಿದ್ಯಾರ್ಥಿಗಳ ಪ್ರತಿನಿಧಿ ಪರಿಷತ್ತಿಗೆ ಆಯ್ಕೆಯಾದರು. ಇವರು ಮೇ 23 ರಂದು ಆಸ್ಟ್ರೇಲಿಯಾದ ಪ್ರಧಾನಿಯಾಗಿ ಆಯ್ಕೆಯಾದರು.

ಇದನ್ನೂ ಓದಿ
8 Years of Modi Government: ಸಾಮಾಜಿಕ ಕ್ರಾಂತಿ ಸೃಷ್ಟಿಸಿರುವ ‘ಮನ್ ಕಿ ಬಾತ್’ ಐಡಿಯಾ ಪ್ರಧಾನಿ ಮೋದಿಯವರಿಗೆ ಹೊಳೆದಿದ್ದು 1998ರಲ್ಲಿ!
ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ
ಗೋಧಿ ರಫ್ತಿನ ಮೇಲಿನ ನಿಷೇಧವನ್ನು ಮರುಪರಿಶೀಲಿಸುವಂತೆ ಭಾರತಕ್ಕೆ ಒತ್ತಾಯಿಸಿದ ಐಎಂಎಫ್ ಮುಖ್ಯಸ್ಥೆ
Narendra Modi Horoscope: ಸೋಲೇ ಕಾಣದ ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ

ಶ್ರೀಲಂಕಾದ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ

ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ 1949 ರಲ್ಲಿ ಜನಿಸಿದರು. ರಾಯಲ್ ಪ್ರಿಪರೇಟರಿ ಸ್ಕೂಲ್ ಮತ್ತು ರಾಯಲ್ ಕಾಲೇಜ್, ಕೊಲಂಬೊದಿಂದ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಕೊಲಂಬೊ ವಿಶ್ವವಿದ್ಯಾಲಯಲ್ಲಿ ಕಾನೂನು ಪದವಿ ಪಡೆದರು. ಪದವಿಯ ಬಳಿಕ  ಅವರು 1972 ರಲ್ಲಿ ಶ್ರೀಲಂಕಾದ ಸುಪ್ರೀಂಕೋರ್ಟ್‌ನ ವಕೀಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.  ಐದು ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡಿದರು. ಅವರು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನಲ್ಲಿರುವ ಸೆಂಟರ್ ಫಾರ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನಲ್ಲಿ ರಾಬರ್ಟ್ ಇ ವಿಲ್ಹೆಲ್ಮ್ ಫೆಲೋ ಆಗಿದ್ದಾರೆ. ಆರ್ಥಿಕತೆ, ಶಿಕ್ಷಣ ಮತ್ತು ಮಾನವ ಹಕ್ಕುಗಳಲ್ಲಿ ಸುಧಾರಣೆಗಳನ್ನು ತರಲು ಅವರು ನೀಡಿದ ಕೊಡುಗೆಗಳಿಗಾಗಿ ಅವರು 2017 ರಲ್ಲಿ ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಅರ್ಡೆರ್ನ್

ಹ್ಯಾಮಿಲ್ಟನ್‌ನಲ್ಲಿ ಜನಿಸಿದ ಅರ್ಡೆರ್ನ್ ಮೊರಿನ್ಸ್‌ವಿಲ್ಲೆ ಮತ್ತು ಮುರುಪಾರಾದಲ್ಲಿ ಬೆಳೆದರು. ಅಲ್ಲಿನ ಸ್ಟೇಟ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ ಅವರು ಮೊರಿನ್ಸ್ವಿಲ್ಲೆ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ಶಾಲೆಯ ಟ್ರಸ್ಟಿಗಳ ಮಂಡಳಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿದ್ದರು. ಅರ್ಡೆರ್ನ್,  ವೈಕಾಟೊ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. 2001 ರಲ್ಲಿ ರಾಜಕೀಯ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ಬ್ಯಾಚುಲರ್ ಆಫ್ ಕಮ್ಯುನಿಕೇಷನ್ ಸ್ಟಡೀಸ್ (BCS) ನೊಂದಿಗೆ ಪದವಿ ಪಡೆದರು. 2001 ರಲ್ಲಿ ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ನಂತರ ಸಂಶೋಧಕರಾಗಿ ಫಿಲ್ ಗಾಫ್ ಮತ್ತು ಹೆಲೆನ್ ಕ್ಲಾರ್ಕ್ ಅವರ ಕಚೇರಿಗಳಲ್ಲಿ ಕೆಲಸ ಮಾಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ದಾಮೋದರದಾಸ್ ಮೋದಿ ಸೆಪ್ಟೆಂಬರ್ 17, 1950 ರಂದು ಇಂದಿನ ಗುಜರಾತ್ ಆಗಿರುವ ಬಾಂಬೆ ರಾಜ್ಯದ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ ಜನಿಸಿದರು. ಅವರ ಹೆತ್ತವರಿಗೆ ಆರು ಮಕ್ಕಳಲ್ಲಿ ಮೂರನೆಯವರು ಮೋದಿ. ಬಾಲ್ಯದಲ್ಲಿ ಅವರು ವಡ್ನಗರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿರುವ ತಮ್ಮ ತಂದೆಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು 1967 ರಲ್ಲಿ ವಡ್ನಗರದಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಫಿನ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಸನ್ನಾ ಮರಿನ್

ನವೆಂಬರ್ 16, 1985 ರಂದು ಹೆಲ್ಸಿಂಕಿಯಲ್ಲಿ ಜನಿಸಿದ ಸನ್ನಾ ಮಿರೆಲ್ಲಾ ಮರಿನ್, 2004 ರಲ್ಲಿ ಪಿರ್ಕ್ಕಲಾ ಹೈಸ್ಕೂಲ್‌ನಿಂದ ಪದವಿ ಪಡೆದರು. ಅವರು 2006 ರಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಯೂತ್‌ಗೆ ಸೇರಿದ ಅವರು 2010 ರಿಂದ 2012 ರವರೆಗೆ ಅದರ ಮೊದಲ ಉಪಾಧ್ಯಕ್ಷರಾದರು. ಬೇಕರಿಯಲ್ಲಿ ಮತ್ತು ಕ್ಯಾಷಿಯರ್ ಆಗಿ ಕೆಲಸ ಮಾಡಿದ ಅವರು ಟಂಪೆರೆ ವಿಶ್ವವಿದ್ಯಾಲಯದಿಂದ ಆಡಳಿತ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್

ಅಲೆಕ್ಸಾಂಡರ್ ಬೋರಿಸ್ ಡಿ ಪಿಫೆಲ್ ಜಾನ್ಸನ್ ಅವರು ಜೂನ್ 19, 1964 ರಂದು ಜನಿಸಿದರು. ವಿನ್ಸ್‌ಫೋರ್ಡ್ ವಿಲೇಜ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಜಾನ್ಸನ್ ಲಂಡನ್‌ನ ಪ್ರೈಮ್ರೋಸ್ ಹಿಲ್ ಪ್ರಾಥಮಿಕ ಶಾಲೆಗೆ ಸೇರಿದರು. ನಂತರ ಅವರ ಕುಟುಂಬ ಬ್ರಸೆಲ್ಸ್​​​ಗೆ ಸ್ಥಳಾಂತರಗೊಂಡಿತು, ಅಲ್ಲಿ ಅವರು ಯುರೋಪಿಯನ್ ಶಾಲೆಗೆ ಸೇರಿದರು. ಇದಾದ ನಂತರ ಅವರು ಪೂರ್ವ ಸಸೆಕ್ಸ್‌ನಲ್ಲಿರುವ ಪ್ರಿಪರೇಟರಿ ಬೋರ್ಡಿಂಗ್ ಶಾಲೆಯಾದ ಆಶ್‌ಡೌನ್ ಹೌಸ್‌ನಲ್ಲಿ ಅಧ್ಯಯನ ಮಾಡಿದರು. ಬರ್ಕ್‌ಷೈರ್‌ನ ವಿಂಡ್ಸರ್ ಬಳಿಯ ಬೋರ್ಡಿಂಗ್ ಶಾಲೆಯಾದ ಎಟನ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಜಾನ್ಸನ್ ಕಿಂಗ್ಸ್ ಸ್ಕಾಲರ್‌ಶಿಪ್ ಪಡೆದರು. ಶಾಲಾ ಶಿಕ್ಷಣದ ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ

ಕೆನಡಾದ ಒಂಟಾರಿಯೊದ ಒಟ್ಟಾವಾದಲ್ಲಿ ಡಿಸೆಂಬರ್ 25, 1971 ರಂದು ಜನಿಸಿದ ಜಸ್ಟಿನ್ ಟ್ರುಡೊ ಅವರು 2015ರಲ್ಲಿ ಕೆನಡಾದ ಪ್ರಧಾನ ಮಂತ್ರಿಯಾದರು. ಕಾಲೇಜ್ ಜೀನ್-ಡಿ-ಬ್ರೆಬ್ಯೂಫ್‌ನಲ್ಲಿ ಅಧ್ಯಯನ ಮಾಡಿದ ನಂತರ, ಅವರು 1994 ರಲ್ಲಿ ಮೆಕ್‌ಗಿಲ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಬಿಎ ಪದವಿ ಗಳಿಸಿದರು.  1998 ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಬಿಇಡಿ ಪದವಿಯನ್ನು ಗಳಿಸಿದ ಅವರು ಸ್ನೋಬೋರ್ಡ್ ಬೋಧಕರಾಗಿ ಕೆಲಸ ಮಾಡಿದರು. ಅವರು ರಾಜಕೀಯಕ್ಕೆ ಸೇರುವ ಮೊದಲು ವ್ಯಾಂಕೋವರ್‌ನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ