‘ಮತ್ತೊಮ್ಮೆ ತಾಲಿಬಾನ್​​ನ್ನು ಶ್ರೇಷ್ಠ ಮಾಡೋಣ ‘: ಅಮೆರಿಕದ ಜಾಹೀರಾತು ಫಲಕದಲ್ಲಿ ಉಗ್ರನಂತೆ ಅಧ್ಯಕ್ಷ ಬಿಡೆನ್​​ನ್ನು ಚಿತ್ರಿಸಿ ಆಕ್ರೋಶ

Joe Biden ವರದಿಗಳ ಪ್ರಕಾರ, ಈ ಜಾಹೀರಾತು ಫಲಕಗಳಿಗ ಪೆನ್ಸಿಲ್ವೇನಿಯಾದ ಮಾಜಿ ಸೆನೆಟರ್ ಸ್ಕಾಟ್ ವ್ಯಾಗ್ನರ್ ಖರ್ಚು ಮಾಡಿದ್ದು ಅಫ್ಘಾನಿಸ್ತಾನ ಪರಿಸ್ಥಿತಿಗೆ ಅಮೆರಿಕ ಪ್ರತಿಕ್ರಿಯಿಸಿರುವ ರೀತಿ ಬಗ್ಗೆ ತನ್ನ ಕೋಪವನ್ನು ಈ ರೀತಿ ಪ್ರಕಟಿಸಿದ್ದಾರೆ.

'ಮತ್ತೊಮ್ಮೆ ತಾಲಿಬಾನ್​​ನ್ನು ಶ್ರೇಷ್ಠ ಮಾಡೋಣ ': ಅಮೆರಿಕದ ಜಾಹೀರಾತು ಫಲಕದಲ್ಲಿ ಉಗ್ರನಂತೆ ಅಧ್ಯಕ್ಷ ಬಿಡೆನ್​​ನ್ನು ಚಿತ್ರಿಸಿ ಆಕ್ರೋಶ
ಜಾಹೀರಾತು ಫಲಕ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 17, 2021 | 3:39 PM

ವಾಷಿಂಗ್ಟನ್: ಯುದ್ಧಪೀಡಿತ ಅಫ್ಘಾನಿಸ್ತಾನದಿಂದ (Afghanistan)ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿ ಸುಮಾರು 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿದ ನಂತರ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್​​ನ್ನು (Joe Biden )ಉಗ್ರನಂತೆ ಚಿತ್ರಿಸಿರುವ ಜಾಹಿರಾತು ಫಲಕಗಳು ಪೆನ್ಸಿಲ್ವೇನಿಯಾದಾದ್ಯಂತ (Pennsylvania) ತಲೆ ಎತ್ತಿದೆ. ಮತ್ತೊಮ್ಮೆ ತಾಲಿಬಾನ್ ಅನ್ನು ಶ್ರೇಷ್ಠ ಮಾಡೋಣ ಎಂಬ ಬರಹವೂ ಈ ಜಾಹೀರಾತು ಫಲಕದಲ್ಲಿದೆ. ವರದಿಗಳ ಪ್ರಕಾರ, ಈ ಜಾಹೀರಾತು ಫಲಕಗಳಿಗ ಪೆನ್ಸಿಲ್ವೇನಿಯಾದ ಮಾಜಿ ಸೆನೆಟರ್ ಸ್ಕಾಟ್ ವ್ಯಾಗ್ನರ್ ಖರ್ಚು ಮಾಡಿದ್ದು ಅಫ್ಘಾನಿಸ್ತಾನ ಪರಿಸ್ಥಿತಿಗೆ ಅಮೆರಿಕ ಪ್ರತಿಕ್ರಿಯಿಸಿರುವ ರೀತಿ ಬಗ್ಗೆ ತನ್ನ ಕೋಪವನ್ನು ಈ ರೀತಿ ಪ್ರಕಟಿಸಿದ್ದಾರೆ. ಇದನ್ನು ಪ್ರದರ್ಶಿಸಲು ಸುಮಾರು ₹ 15,000 ವೆಚ್ಚದಲ್ಲಿ ಹೆದ್ದಾರಿಗಳಲ್ಲಿ ಒಂದು ಡಜನ್ ಜಾಹೀರಾತು ಫಲಕಗಳನ್ನು ಬಾಡಿಗೆಗೆ ಪಡೆದಿದ್ದಾರೆ.

ಅಫ್ಘಾನಿಸ್ತಾನ ಯುದ್ಧದಲ್ಲಿ ಹೋರಾಡಿದ ಆ ಅನುಭವಿಗಳಿಗೆ ನೀವು ಏನು ಹೇಳುತ್ತೀರಿ? ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮೂಲಕ ಇದು ವಿಯೆಟ್ನಾಂನಂತಿದೆ, ಅದಕ್ಕಿಂತಲೂ ಕೆಟ್ಟದಾಗಿದೆ ಎಂದು ವ್ಯಾಗ್ನರ್ ಹೇಳಿರುವುದಾಗಿ ಯಾರ್ಕ್ ಡೈಲಿ ರೆಕಾರ್ಡ್‌ ವರದಿ ಮಾಡಿದೆ.

ಯಾರ್ಕ್ ಡೈಲಿ ರೆಕಾರ್ಡ್ ವರದಿ ಪ್ರಕಾರ ಮಾಜಿ ಸೆನೆಟರ್ ಹಲವಾರು ಅನುಭವಿಗಳನ್ನು ಭೇಟಿಯಾದರು. ಅವರು ಅಫ್ಘಾನಿಸ್ತಾನದಲ್ಲಿ ನಡೆದ ಸುದೀರ್ಘ ಯುದ್ಧದಲ್ಲಿ ಅಮೆರಿಕಕ್ಕೆ ಸೇವೆ ಸಲ್ಲಿಸಿದರು. ಈ ಸೈನಿಕರಲ್ಲಿ ಅನೇಕರು ತಮ್ಮ ಇಡೀ ಜೀವನ ಮತ್ತು ಮನಸ್ಸನ್ನು ತ್ಯಾಗ ಮಾಡಿದ್ದಾರೆ ಎಂದು ವ್ಯಾಗ್ನರ್ ಹೇಳಿದರು. ಇತ್ತೀಚೆ ಪ್ರಚೋದನಾಕಾರಿ ರೀತಿಯಲ್ಲಿ ಸೈನ್ಯವನ್ನು ಹಿಂಪಡೆದಿರುವುದನ್ನು ಟೀಕಿಸಲು ನಾನು ಹಿಂಜರಿಯುವುದಿಲ್ಲ ಎಂದು ವ್ಯಾಗ್ನರ್ ಹೇಳಿದ್ದಾರೆ.

“ತಾಲಿಬಾನ್ ಅನ್ನು ಮತ್ತೊಮ್ಮೆ ಶ್ರೇಷ್ಠವಾಗಿ ಮಾಡುವುದು” ಎಂಬ ಪದವು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ಘೋಷವಾಕ್ಯವಾಗಿತ್ತು. “ಮೇಕ್ ಅಮೇರಿಕಾ ಗ್ರೇಟ್ ಎಗೇನ್ ಎಂದು ಟ್ರಂಪ್ ಬೆಂಬಲಿಗರು ಘೋಷಣೆ ಕೂಗುತ್ತಿದರು. ತಾಲಿಬಾನ್ ವಸ್ತ್ರವನ್ನು ಧರಿಸಿರುವ ಮತ್ತು ರಾಕೆಟ್ ಲಾಂಚರ್ ಹಿಡಿದಿರುವ ಜೋ ಬಿಡೆನ್ ಜೊತೆಗಿನ ಚಿತ್ರವು ಯುದ್ಧದಿಂದ ಹಾನಿಗೊಳಗಾದ ಭೂಮಿಯಿಂದ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರರಾಷ್ಟ್ರಗಳ ನಿರ್ಗಮನದ ನಂತರ ಅಫ್ಘಾನಿಸ್ತಾನದಲ್ಲಿ ಉಂಟಾದ ಗೊಂದಲಮಯ ಪರಿಸ್ಥಿತಿಗೆ ಅಮೆರಿಕ ಅಧ್ಯಕ್ಷರನ್ನು ದೂಷಿಸುವುದಾಗಿದೆ.

ಆದಾಗ್ಯೂ, ಮಾಜಿ ಪೆನ್ಸಿಲ್ವೇನಿಯಾದ ಸೆನೆಟರ್, ತಾನು ಟ್ರಂಪ್ ಬೆಂಬಲಿಗನಲ್ಲ ಎಂದು ಸ್ಪಷ್ಟಪಡಿಸಿದರು ಮತ್ತು ಅವರು ಅಫ್ಘಾನಿಸ್ತಾನದಿಂದ ಹೊರಬಂದಿದ್ದರೆ ಅಮೆರಿಕದ ಮಾಜಿ ಅಧ್ಯಕ್ಷರನ್ನು ಇದೇ ರೀತಿ ತಿರಸ್ಕರಿಸುತ್ತಿದ್ದರು. “ಟ್ರಂಪ್ ಅದೇ ರೀತಿ ಮಾಡಿದ್ದರೆ, ನಾನು ಅವರನ್ನು ಇದೇ ರೀತಿ ನೋಡುತ್ತಿದ್ದೆ” ಎಂದು ವ್ಯಾಗ್ನರ್ ನೇರವಾಗಿ ಹೇಳಿದರು.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ತಾಲಿಬಾನ್ ವಶಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಮಿಂಚಿನ ವೇಗದ ದಾಳಿಯಿಂದಾಗಿ ತಾಲಿಬಾನ್ ಅಪ್ಘಾನ್ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಿತ್ತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ಧಗೊಂಡ ಈ ಸಿನಿಮಾ, ವೆಬ್​ ಸೀರಿಸ್​ಗಳನ್ನು ನೋಡಿದ್ದೀರಾ?

ಇದನ್ನೂ ಓದಿ: Taliban Rule In Afghanistan: ತಾಲಿಬಾನ್​ಗಳಿಂದ ನಲುಗಿದ ಪಂಜ್​ಶಿರ್​ನಲ್ಲಿ ಮುರಿದ ಕಾಲಿನ ಅಜ್ಜ, ಜತೆಗೊಂದು ಕತ್ತೆ

(Making Taliban great again Joe Biden portrayed as terrorist billboards have popped up across Pennsylvania)

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ