Sign In

By signing in or creating an account, you agree with Associated Broadcasting Company's Terms & Conditions and Privacy Policy.

Taliban Rule In Afghanistan: ತಾಲಿಬಾನ್​ಗಳಿಂದ ನಲುಗಿದ ಪಂಜ್​ಶಿರ್​ನಲ್ಲಿ ಮುರಿದ ಕಾಲಿನ ಅಜ್ಜ, ಜತೆಗೊಂದು ಕತ್ತೆ

ತಾಲಿಬಾನ್​ಗಳ ತೆಕ್ಕೆಗೆ ಅಫ್ಘಾನಿಸ್ತಾನದ ಪಂಜ್​ಶಿರ್​ ಬಂದ ಮೇಲೆ ಅಲ್ಲಿನ ಸ್ಥಿತಿ ಹೇಗಿದೆ ಎಂಬುದನ್ನು ಕಣ್ಣೆದುರು ನಿಲ್ಲುವಂತೆ ಕಟ್ಟಿಕೊಡುವ ವರದಿ ಇದು.

Taliban Rule In Afghanistan: ತಾಲಿಬಾನ್​ಗಳಿಂದ ನಲುಗಿದ ಪಂಜ್​ಶಿರ್​ನಲ್ಲಿ ಮುರಿದ ಕಾಲಿನ ಅಜ್ಜ, ಜತೆಗೊಂದು ಕತ್ತೆ
ತಾಲಿಬಾನ್​ ತೆಕ್ಕೆಯಲ್ಲಿ ಪಂಜ್​ಶಿರ್
Follow us
TV9 Web
| Updated By: preethi shettigar

Updated on: Sep 17, 2021 | 8:59 AM

ಇಡೀ ಅಫ್ಘಾನಿಸ್ತಾನ ಸುದ್ದಿಯಲ್ಲಿ ಇದ್ದದ್ದು ಒಂದು ಕಡೆಗಾದರೆ, ಪಂಜ್​ಶಿರ್​ ಕಥೆ ಬೇರೆ. ಏಕೆಂದರೆ, ಸುಲಭಕ್ಕೆ ಮಂಡಿಯೂರದೆ ಬಡಿದಾಡಿ, ಕೊನೆಗೆ ತಾಲಿಬಾನ್​ಗಳಿಗೆ ಗೆಲುವು ಸಿಕ್ಕಿಹೋಯಿತು. ಆದರೆ ಈಗ ಈ ಪಂಜ್​ಶಿರ್ ಕಣಿವೆ ಹೇಗಿದೆ ಗೊತ್ತೆ? ಹಲವು ಹಳ್ಳಿಗಳಲ್ಲಿ ವಯಸ್ಸಾದ ಹಿರಿಯರು ಮತ್ತು ಸಾಕು ಪ್ರಾಣಿಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಈಗಿನ ಅಲ್ಲಿನ ಸ್ಥಿತಿ-ಗತಿ ಬಗ್ಗೆ ಎಎಫ್​ಪಿ ವರದಿ ಮಾಡಿದೆ. ಅದನ್ನೇ ಈಗ ನಿಮ್ಮ ಮುಂದೆ ಇಡಲಾಗುತ್ತಿದೆ. ಮುಚ್ಚಿದ ಅಂಗಡಿಯ ಮುಂದೆ ಕೂತಿದ್ದ ಅಬ್ದುಲ್​ ಘಫೂರ್​, ಮರಳುಗಾಡಿನಂತಾದ ತಮ್ಮ ಹಳ್ಳಿಯನ್ನು ಪರಿಚಯ ಮಾಡಿಕೊಡುತ್ತಾ ಹೋಗುತ್ತಾರೆ. ಖೆಂಜ್ ಜಿಲ್ಲೆಯ ಕಲ್ಲು ಬೆಟ್ಟದ ಪಕ್ಕದಲ್ಲಿನ ಹಳ್ಳಿಯಲ್ಲಿ ಈ ಹಿಂದೆ ನೂರು ಕುಟುಂಬಗಳು ವಾಸವಿದ್ದವು. ಈಗ ಅಲ್ಲಿರೋದು ಮೂರೇ ಮೂರು. ಉಳಿದೆಲ್ಲರೂ ಹಳ್ಳಿ ತೊರೆದು ಹೋಗಿದ್ದಾರೆ, ಕಳೆದ ತಿಂಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ತಾಲಿಬಾನ್ ವಶವಾದ ಮೇಲೆ ಹಳ್ಳಿಗಳನ್ನು ತೊರೆದಿದ್ದಾರೆ.

ಮಲಸ್ಪಾದ ಹಸಿರು ಹುಲ್ಲುಗಾವಲಿನಲ್ಲಿ ಒಂದು ಕಾಲಕ್ಕೆ ಹಳ್ಳಿಗರು ಕೂತು ಪಟ್ಟಾಂಗ ಹೊಡೆಯುತ್ತಿದ್ದ ಜಾಗ ಖಾಲಿ ಖಾಲಿ. ಇವರ ಮಾತುಗಳಿಗೆ ಸಾಕ್ಷಿ ಎಂಬಂತಿದ್ದ ನದಿಯೂ ಕಳಾಹೀನವಾದಂತೆ ಕಾಣಿಸುತ್ತದೆ. ಈಗ ಇಲ್ಲಿರೋದು ಮುರಿದ ಕಾಲಿನ 67 ವರ್ಷದ ಖೋಲ್ ಮೊಹಮ್ಮದ್​ ಮತ್ತು ಒಂದು ಕತ್ತೆ. ಕೆಲ ಕುಟುಂಬದವರು ಇಲ್ಲಿದ್ದಾರೆ, ಆದರೆ ಇತರ ಎಂಬತ್ತು ಕುಟುಂಬ ಇಲ್ಲಿಂದ ಹೊರಟಿದೆ ಎಂದು ಅವರು ಹೇಳುತ್ತಾರೆ. ಈ ಪ್ರಾಂತ್ಯದಲ್ಲಿ ತಾಲಿಬಾನ್​ಗಳನ್ನು ಎದುರಿಸಿ, ಅವರ ದಾಳಿಗೆ ತತ್ತರಿಸಿದಂಥವು ಏಳು ಜಿಲ್ಲೆಗಳಿವೆ. ಇಲ್ಲಿನ ಯಾವುದೇ ಹಳ್ಳಿಗೆ ಕಾಲಿಟ್ಟರೂ ಹೆಸರು ಬದಲಾಗುತ್ತದೆಯೇ ವಿನಾ ಪರಿಸ್ಥಿತಿ ಒಂದೇ ಎಂಬಂತಿದೆ.

ಮಾರುಕಟ್ಟೆಗಳು ನಿರ್ಮಾನುಷ ಅಲ್ಲೊಂದು, ಇಲ್ಲೊಂದು ಎಂಬಂತೆ ಮಳಿಗೆಗಳಿವೆ. ಅದರಲ್ಲೂ ಬೇಕರಿಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ಜನಸಂದಣಿಯಿಂದ ಇರುತ್ತಿದ್ದ ವರ್ತಕರು, ಗ್ರಾಹಕರ ಚೌಕಾಶಿಯ ಮಾತುಗಳು ಕೇಳಿಬರುತ್ತಿದ್ದ ಮಾರುಕಟ್ಟೆಗಳು ನಿರ್ಮಾನುಷವಾಗಿವೆ. ವಯಸ್ಸಾದವರನ್ನು ಬಿಟ್ಟು ಯಾರೂ ಇಲ್ಲಿ ಉಳಿದಿಲ್ಲ. ಬಡವರಿಗೆ ಇಲ್ಲಿಂದ ಹೊರ ಹೋಗುವುದಕ್ಕೆ ಆಗಿಲ್ಲ. ಅಂಥವರಷ್ಟೇ ಕಾಣಸಿಗುತ್ತಾರೆ ಎನ್ನುತ್ತಾ ಮಾತಿಗಿಳಿದಿದ್ದು 30 ವರ್ಷದ ಅಬ್ದುಲ್ ವಜೀದ್. ಕುಟುಂಬದ ಮನೆಯನ್ನು ನೋಡಿಕೊಂಡು ಅವರು ಇಲ್ಲೇ ಉಳಿದಿದ್ದಾರೆ. ಬೆಟ್ಟ- ಗುಡ್ಡಗಳಿಂದಲೇ ತುಂಬಿರುವ ಈ ಕಣಿವೆಯಲ್ಲಿ ಬಿಡುವಿಲ್ಲದೆ ಓಡಾಡುತ್ತಿರುವವರು ಕಂಡರೆ ಅದು ಶಸ್ತ್ರಧಾರಿ ತಾಲಿಬಾನಿಗಳು.

ದೂಳು ತುಂಬಿದ ರಸ್ತೆಗಳಲ್ಲಿ ತಮ್ಮ ಪಿಕಪ್ ಟ್ರಕ್​ಗಳ ಮೂಲಕ ಪಹರೆ ಕಾಯುತ್ತಿದ್ದಾರೆ. ಇನ್ನು ರಸ್ತೆಗಳಲ್ಲಿ ನಾಕಾಬಂದಿ ಹಾಕಿದ್ದಾರೆ. ಅಫ್ಘಾನಿಸ್ತಾನದ ಉಳಿದೆಲ್ಲ ಪ್ರಾಂತ್ರಗಳು ಉಸಿರೆತ್ತದೆ ತಾಲಿಬಾನ್​ಗಳಿಗೆ ಶರಣಾದಾಗಲೂ ಅವರನ್ನು ಎದುರಿಸಿ ನಿಂತ ಪಂಜ್​ಶಿರ್​ ಹೋರಾಟಗಾರರ ಬಗ್ಗೆ ಭಾರೀ ಮೆಚ್ಚುಗೆ ಕೇಳಿಬರುತ್ತಿದೆ. ಮೊದಲಿಗೆ ಸೋವಿಯತ್​ ಮಿಲಿಟರಿಯಿಂದ ದಶಕಗಳ ಕಾಲ, ಆ ನಂತರ ನಾಗರಿಕ ದಂಗೆ ಕಾಲದಲ್ಲಿ, ಅದಾದ ಮೇಲೆ ಕಳೆದ ಸಾಲ ತಾಲಿಬಾನ್​ಗಳು ಆಡಳಿತ ನಡೆಸಿದ 1996ರಿಂದ 2001ರ ಮಧ್ಯೆ ಹೀಗೆ ವಿವಿಧ ಕಾಲ ಘಟ್ಟದಲ್ಲಿ ಪಂಜ್​ಶಿರ್​ ಪ್ರತಿರೋಧ ತೋರಿಸಿದೆ. 115 ಕಿಲೋಮೀಟರ್​ ಉದ್ದದ ಈ ಕಣಿವೆ ಸುತ್ತಲೂ ಮಂಜಿನಿಂದ ಆವೃತವಾಗುತ್ತದೆ. ಈ ಕಾರಣಕ್ಕೆ ಸಹಜವಾಗಿ ಸ್ಥಳೀಯರಿಗೆ ಹೋರಾಟಕ್ಕೆ ಹೆಚ್ಚು ಅನುಕೂಲಕರ ಸನ್ನಿವೇಶ ಸೃಷ್ಟಿ ಆಗುತ್ತದೆ.

ಭಾರೀ ಶಸ್ತ್ರಾಸ್ತ್ರಗಳು ಆದರೆ, ಅಫ್ಘಾನಿಸ್ತಾನದ ಇತರೆಡೆ ಭಾರೀ ವಿಜಯ ಸಾಧಿಸಿದ ತಾಲಿಬಾನ್​ಗಳ ಕೈಗೆ ಅತ್ಯಾಧುನಿಕವಾದ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿತು. ಅವುಗಳನ್ನೆಲ್ಲ ನಿರ್ಗಮಿತ ಅಮೆರಿಕ ಸೇನೆಯು ಅಫ್ಘನ್​ ಸೈನ್ಯಕ್ಕೆ ನೀಡಿತ್ತು. ಪಂಜ್​ಶಿರ್​ನಲ್ಲಿ ಏನೇ ಹೋರಾಟ ಮಾಡಿದರೂ ತಾಲಿಬಾನ್​ಗಳ ಶಕ್ತಿ ಮುಂದೆ ನಿಲ್ಲಲಾಗಲಿಲ್ಲ. ಈ ತಿಂಗಳ ಆರಂಭದಲ್ಲಿ ಪಂಜ್​ಶಿರ್​ನಲ್ಲಿ ತಮ್ಮ ಗೆಲುವನ್ನು ತಾಲಿಬಾನ್​ಗಳು ಘೋಷಿಸಿಕೊಂಡಿದ್ದಾರೆ.

ಪಂಜ್​ಶಿರ್​ಗೆ ತಾಲಿಬಾನ್​ಗಳ ಪ್ರವೇಶ ಭೀಕರವಾಗಿತ್ತು ಎಂಬುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ತನ್ನ ಕಾರಿನ ಚಕ್ರದ ಹಿಂದೆ ಬಚ್ಚಿಟ್ಟುಕೊಂಡಿದ್ದ ಒಬ್ಬ ಡ್ರೈವರ್​ನನ್ನು ಕೊಂದರು, ತನ್ನ ಮಕ್ಕಳ ಸಲುವಾಗಿ ಆಹಾರ ತರಲು ಹೋಗಿದ್ದ ತಂದೆಯನ್ನು ಕೊಂದರು ಎಂದು ಹಿರಿಯರೊಬ್ಬರು ತಮ್ಮ ಕಣ್ಣೆದುರು ಕಂಡಿದ್ದನ್ನು ಹೇಳುತ್ತಾರೆ. ಬಡಿದಾಟದಲ್ಲಿ ಪ್ರಾಣ ಕಳೆದುಕೊಂಡವರನ್ನು ಹೊರತುಪಡಿಸಿ, 19 ನಾಗರಿಕರನ್ನು ತಾಲಿಬಾನ್​ಗಳು ಕೊಂದರು ಎನ್ನುತ್ತಾರೆ ಪಂಜ್​ಶಿರ್​ ನಿವಾಸಿಗಳು. ನಮ್ಮ ಉದ್ಯಾನದ ತುದಿಯಲ್ಲಿ ತಾಲಿಬಾನ್​ಗಳು ಇರುವಾಗ ಕುಟುಂಬವನ್ನು ಬಿಟ್ಟು ಹೋಗೋದಾದರೂ ಹೇಗೆ ಎನ್ನುತ್ತಾರೆ 75 ವರ್ಷದ ಮೊಹಮ್ಮದ್ ಯೂನುಸ್. ಅವರು ಒಮರ್ಜ್​ನವರು. ಇಲ್ಲಿ ಜನರು ಮುಕ್ತವಾಗಿ ಬದುಲು ಆಗ್ತಿಲ್ಲ. ಕಾಬೂಲ್​ಗೆ ಹೋಗಲು ಆದ್ಯತೆ ನೀಡುತ್ತಿದ್ದಾರೆ.

ಆದರೆ, ಇಲ್ಲಿಂದ ಜನರು ಹೊರಗೆ ಹೋಗದಂತೆ ಹಾಗೂ ಕುಟುಂಬಸ್ಥರನ್ನು ವಾಪಸ್ ಕರೆತರುವಂತೆ ತಾಲಿಬಾನ್​ಗಳು ಒತ್ತಡ ಹಾಕುತ್ತಿದ್ದಾರೆ, ಇಲ್ಲಿನ ಜನರು ವಾಪಸ್​ ಬಂದು ತಮ್ಮಷ್ಟಕ್ಕೆ ಇರಬಹುದು ಎನ್ನುತ್ತಾನೆ ತಾಲಿಬಾನ್​ ಕಮ್ಯಾಂಡರ್. ಒಂದು ಕುಟುಂಬ ಸಾಮಾನು- ಸರಂಜಾಮುಗಳನ್ನು ಟ್ರಕ್​ನಲ್ಲಿ ಹೇರಿಕೊಂಡು ಹೊರಗೆ ಹೋಗಲು ಯತ್ನಿಸಿ, ವಾಪಸ್​ ಬರುತ್ತಿರುವುದು ಈ ವರದಿ ಮಾಡುವ ಸಂದರ್ಭದಲ್ಲಿ ಕಂಡುಬಂದಿದೆ. ತಾಲಿಬಾನ್​ಗಳಿಗೆ ಹಳ್ಳಿಗರು ಇಲ್ಲೇ ಇರುವುದು ಬೇಕು. ಏಕೆಂದರೆ, ತಮ್ಮ ಮೇಲೆ ಯಾರಾದರೂ ದಾಳಿ ಮಾಡುವುದಕ್ಕೆ ಬಂದರೆ ಇಲ್ಲಿನ ಜನರೇ ತಾಲಿಬಾನ್​ಗಳ ಪಾಲಿನ ರಕ್ಷಣೆ. ಅವರನ್ನೇ ತಮ್ಮ ರಕ್ಷಣೆಯ ಮಾನವ ಗೋಡೆಗಳನ್ನಾಗಿ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: Afghanistan Updates: ತಾಲಿಬಾನ್​ ಸಂಘಟನೆಯ ಹುಟ್ಟೂರು ಕಂದಹಾರ್​ನಲ್ಲೇ ತಾಲಿಬಾನಿಗಳ ವಿರುದ್ಧ ಜನಾಕ್ರೋಶ

(Panjshir In Afghanistan Become Ghost City After Taliban Announced Victory Here)

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ