AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ಚೀನಾದಲ್ಲಿ ಜನಸಂದಣಿಯತ್ತ ಕಾರು ನುಗ್ಗಿಸಿದ ವ್ಯಕ್ತಿ; ಐವರು ಸಾವು, 13 ಮಂದಿಗೆ ಗಾಯ

ಪೊಲೀಸರು 22 ವರ್ಷದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಅಪಘಾತದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈತ ಗುವಾಂಗ್‌ಝೌನಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಜನರು ವ್ಯಾಪಕವಾಗಿ ಖಂಡಿಸಿದ್ದಾರೆ.

Watch ಚೀನಾದಲ್ಲಿ ಜನಸಂದಣಿಯತ್ತ ಕಾರು ನುಗ್ಗಿಸಿದ ವ್ಯಕ್ತಿ; ಐವರು ಸಾವು, 13 ಮಂದಿಗೆ ಗಾಯ
ಚೀನಾದಲ್ಲಿ ಜನರೆಡೆ ನುಗ್ಗಿದ ಕಾರು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 13, 2023 | 1:04 PM

Share

ಚೀನಾದ (China) ಗುವಾಂಗ್‌ಝೌನಲ್ಲಿ (Guangzhou) ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಕಾರು ಚಲಾಯಿಸಿದ್ದು ಐವರು ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಆತ ಕಾರನ್ನು ಜನರ ಮೇಲೆ ನುಗ್ಗಿಸಿದ ನಂತರ ಗಾಳಿಯಲ್ಲಿ ನೋಟುಗಳನ್ನು ಎಸೆದಿದ್ದಾನೆ.ಪೊಲೀಸರು 22 ವರ್ಷದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಅಪಘಾತದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈತ ಗುವಾಂಗ್‌ಝೌನಲ್ಲಿ ಉದ್ದೇಶಪೂರ್ವಕವಾಗಿ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಜನರು ವ್ಯಾಪಕವಾಗಿ ಖಂಡಿಸಿದ್ದಾರೆ. 19 ಮಿಲಿಯನ್‌ನ ದಕ್ಷಿಣ ನಗರದ ಜನನಿಬಿಡ ಜಂಕ್ಷನ್‌ನಲ್ಲಿ ಬುಧವಾರ ಸಂಜೆಯ ಜನದಟ್ಟಣೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅಪಘಾತ ಸಂಭವಿಸಿದ ಸ್ವಲ್ಪ ಸಮಯದ ನಂತರ ಚಾಲಕನು ಕಾರಿನಿಂದ ಇಳಿದು ನೋಟುಗಳನ್ನು ಕಾರಿನೊಳಗೆ ಎಸೆದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳು ತೋರಿಸಿವೆ.

ಟ್ರಾಫಿಕ್ ಲೈಟ್‌ಗಾಗಿ ಕಾಯುತ್ತಿದ್ದ ಜನರ ಮೇಲೆ ಆತ ಉದ್ದೇಶಪೂರ್ವಕವಾಗಿ ಕಾರು ನುಗ್ಗಿಸಿದ್ದಾನೆ. ದುರುದ್ದೇಶದಿಂದ ಆತ ಜನರ ಮೇಲೆ ಕಾರನ್ನು ಡಿಕ್ಕಿ ಹೊಡೆದಿದ್ದಾನೆ. ಅದರ ನಂತರ, ಅವರು ಯು-ಟರ್ನ್ ಮಾಡಿ ಮತ್ತೊಮ್ಮೆ ಕಾರಿನಿಂದ ಗುದ್ದಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಔಟ್ಲೆಟ್ ಹಾಂಗ್ಕ್ಸಿನ್ ನ್ಯೂಸ್​​​ಗೆ ತಿಳಿಸಿದರು.

“ಅವನು ತುಂಬಾ ವೇಗವಾಗಿ ಓಡಿಸುತ್ತಿರಲಿಲ್ಲ, ಆದರೆ ಜನರಿಗೆ ಅಲ್ಲಿಂದಕ್ಕೆ ಓಡಿಹೋಗಲು ಸಾಧ್ಯವಾಗಲಿಲ್ಲ ಏಕೆಂದರೆ ಕಾರು ಉದ್ದೇಶಪೂರ್ವಕವಾಗಿ ತಮ್ಮತ್ತ ನುಗ್ಗುತ್ತಿದೆ ಎಂದು ಅವರಿಗೆ ತಿಳಿಯಲಿಲ್ಲ.ಚಾಲಕನನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಅಪಘಾತವು ಪ್ರಸ್ತುತ ಸಂಪೂರ್ಣ ತನಿಖೆಯ ವಿಷಯವಾಗಿದೆ ಎಂದು ಗುವಾಂಗ್‌ಝೌ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.

ಆ ವ್ಯಕ್ತಿ ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ಅವರ ಮೋಟಾರ್‌ಸೈಕಲ್‌ಗೆ ಗುದ್ದಿದ್ದಾನೆ ಎಂದು ವರದಿ ಸೂಚಿಸುತ್ತದೆ, ಆದರೆ ಅದೃಷ್ಟವಶಾತ್ ಅಧಿಕಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: Viral News: 10 ವರ್ಷದ ಬಾಲಕನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿದ ತ್ರಿಪುರಾ ಸಿಎಂ

ಈ ಘಟನೆಯು ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ಕುಟುಂಬ ಪುನರ್ಮಿಲನದ ಸಮಯವಾದ ಚೀನೀ ಹೊಸ ವರ್ಷದ ಮುನ್ನಾದಿನದಂದು ಸಂಭವಿಸಿದೆ ಎಂದು ಹಲವರು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಈ ವಾರದ ಆರಂಭದಲ್ಲಿ, ಶಾಂಘೈನಲ್ಲಿನ ಹೋಟೆಲ್ ಅತಿಥಿಯೊಬ್ಬರು ತನ್ನ ಲ್ಯಾಪ್‌ಟಾಪ್ ಕಾಣೆಯಾದ ಬಗ್ಗೆ ಸಿಬ್ಬಂದಿಯೊಂದಿಗೆ ವಾದದ ನಂತರ ಉದ್ದೇಶಪೂರ್ವಕವಾಗಿ ತನ್ನ ಬಿಳಿ ಸ್ಪೋರ್ಟ್ಸ್ ಕಾರನ್ನು ಲಾಬಿಗೆ ಗುದ್ದಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Fri, 13 January 23