Video: ಇರಾಕ್ನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಸಮೀಪವೇ ಅಪ್ಪಳಿಸಿದ 12 ಕ್ಷಿಪಣಿಗಳು; ಮತ್ತೊಂದು ಯುದ್ಧ ಪ್ರಾರಂಭ?
ಪಣಿ ಸ್ಫೋಟದಿಂದ, ಎರ್ಬಿಲ್ ನಲ್ಲಿ ಯುಎಸ್ ದೂತಾವಾಸದ ಕಚೇರಿ ಸಮೀಪವೇ ಇರುವ ಕುರ್ದಿಸ್ತಾನ್ 24 ಎಂಬ ಸುದ್ದಿ ಚಾನಲ್ ಕಚೇರಿಗೆ ಹಾನಿಯಾಗಿದೆ. ಸ್ಟುಡಿಯೋದ ಗಾಜುಗಳು ಒಡೆಯಲ್ಪಟ್ಟಿವೆ. ಅಲ್ಲಿ ಮೇಲ್ಛಾವಣಿ ಸ್ವಲ್ಪಭಾಗ ಕುಸಿದಿದೆ.
ಇರಾಕ್ನ ಉತ್ತರಭಾಗದ ನಗರವಾದ ಎರ್ಬಿಲ್ನಲ್ಲಿ ಯುಎಸ್ ರಾಯಭಾರಿ ಕಚೇರಿ ಸಮೀಪವೇ 12 ಕ್ಷಿಪಣಿಗಳ ದಾಳಿಯಾಗಿದೆ ಎಂದು ಅಲ್ಲಿನ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಎರ್ಬಿಲ್ ನಗರ ಇರಾಕ್ನ ಕುರ್ದೇಷಿಯ ರಾಜಧಾನಿ ಆಗಿದೆ. ಈ ಕ್ಷಿಪಣಿಗಳನ್ನು ನೆರೆರಾಷ್ಟ್ರ ಇರಾನ್ನಿಂದ ಉಡಾಯಿಸಲಾಗಿದೆ ಎಂದು ಯುಎಸ್ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾಗಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕ್ಷಿಪಣಿ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ. ರಾಯಭಾರಿ ಕಚೇರಿ ಕಟ್ಟಡಕ್ಕೆ, ಸುತ್ತಲಿನ ಯಾವುದೇ ಸರ್ಕಾರಿ ಕಚೇರಿ ಕಟ್ಟಗಳಿಗೂ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ಯುಎಸ್ ದೂತಾವಾಸ ಕಚೇರಿಯನ್ನೇ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ನಡೆಸಿದ ಬಗ್ಗೆ ಯಾವುದೇ ಪುರಾವೆಯಿಲ್ಲ. ಯಾಕೆಂದರೆ ಆ ಕಟ್ಟಡ ಹೊಸದು ಮತ್ತು ಸದ್ಯ ಖಾಲಿ ಇದೆ ಎಂದೂ ಯುಎಸ್ ಡಿಫೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುಎಸ್ ರಾಯಭಾರಿ ಕಚೇರಿ ಮತ್ತು ಎರ್ಬಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಮೀಪವೇ ಇರುವ ಪ್ರದೇಶಗಳಲ್ಲಿ ಕ್ಷಿಪಣಿ ಸ್ಫೋಟವಾಗಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈಗಾಗಲೇ ಒಂದು ಯುದ್ಧ ಉಕ್ರೇನ್ನಲ್ಲಿ ನಡೆಯುತ್ತಿದ್ದು, ಇದು ಇನ್ನೊಂದು ಯುದ್ಧದ ಮುನ್ಸೂಚನೆಯಾ ಎಂಬ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇರಾನ್ನಿಂದಲೇ ಬಂದಿದ್ದಾಗಿ ಇರಾಕ್ ಕೂಡ ದೃಢಪಡಿಸಿದೆ. ಈ ದಾಳಿಯನ್ನು ಯುಎಸ್ ತೀವ್ರವಾಗಿ ಖಂಡಿಸಿದೆ. ಇರಾನ್ನಿಂದ ನಡೆಸಲಾದ ಕ್ಷಿಪಣಿ ದಾಳಿ ಇರಾಕ್ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥದ್ದು. ಹಿಂಸಾಚಾರವನ್ನು ಪ್ರಚೋದಿಸುವಂಥದ್ದು ಎಂದು ಹೇಳಿದೆ.
? IRAQ : #VIDEO HUGE EXPLOSION IN ERBIL CITY MINUTES AGO !?
The targeted area NOT CONFIRMED YET, but it is said that the targets were allegedly US Embassy & Erbil Intl. Airport. Hit or not unknown yet.#BreakingNews #Erbil #USEmbassy #Explosion pic.twitter.com/Ztht9kCCSx
— loveworld (@LoveWorld_Peopl) March 12, 2022
ಸುದ್ದಿ ಮಾಧ್ಯಮ ಕಚೇರಿಗೆ ಹಾನಿ !: ಈ ಕ್ಷಿಪಣಿ ಸ್ಫೋಟದಿಂದ, ಎರ್ಬಿಲ್ ನಲ್ಲಿ ಯುಎಸ್ ದೂತಾವಾಸದ ಕಚೇರಿ ಸಮೀಪವೇ ಇರುವ ಕುರ್ದಿಸ್ತಾನ್ 24 ಎಂಬ ಸುದ್ದಿ ಚಾನಲ್ ಕಚೇರಿಗೆ ಹಾನಿಯಾಗಿದೆ. ಸ್ಟುಡಿಯೋದ ಗಾಜುಗಳು ಒಡೆಯಲ್ಪಟ್ಟಿವೆ. ಅಲ್ಲಿ ಮೇಲ್ಛಾವಣಿ ಸ್ವಲ್ಪಭಾಗ ಕುಸಿದಿದೆ. ಒಂದು ವಾರದ ಹಿಂದೆ ಇಸ್ರೇಲ್ ದಾಳಿ ನಡೆಸಿ, ಇರಾನ್ ರೆವಲ್ಯೂಷನರಿ ಗಾರ್ಡ್ನ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು .ಆ ದಾಳಿಯನ್ನು ಇರಾನ್ ತೀವ್ರವಾಗಿ ವಿರೋಧಿಸಿತ್ತು ಮತ್ತು ಪ್ರತೀಕಾರದ ಪ್ರತಿಜ್ಞೆ ಮಾಡಿತ್ತು. ಇನ್ನು 2020ರ ಜನವರಿಯಲ್ಲಿ ಇರಾಕ್ನಲ್ಲಿದ್ದ ಯುಎಸ್ ಸೇನಾ ಪಡೆ ಇರಾನ್ ಮಿಲಿಟರಿ ಕಮಾಂಡರ್ ಖಾಸೀಮ್ ಸೊಲೈಮಾನಿಯನ್ನು ಹತ್ಯೆಗೈದಿದ್ದವು. ಅದಾದ ಬಳಿಕ ಯುಎಸ್ ಸೇನಾ ಪಡೆಯನ್ನು ಟಾರ್ಗೆಟ್ ಮಾಡಿ, ಇರಾನ್ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಯುಎಸ್ ಸಿಬ್ಬಂದಿ ಹಲವರು ಗಾಯಗೊಂಡಿದ್ದರು. ಆದರೆ ಸದ್ಯದ ಕ್ಷಿಪಣಿ ದಾಳಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ಮುಕುಲ್ ವಾಸ್ನಿಕ್ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಜಿ 23 ನಾಯಕರ ಒತ್ತಾಯ; ಆದರೆ ಆಗಿದ್ದೇನು?
Published On - 3:12 pm, Sun, 13 March 22