AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಲಿಪೈನ್ಸ್​ನಲ್ಲಿ ಭೀಕರ ಚಂಡಮಾರುತ, ಮೃತರ ಸಂಖ್ಯೆ 41ಕ್ಕೆ ಏರಿಕೆ

ಮಲಿನಾ: ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರಿಸಿ ಹೋಗಿದೆ. ಕಳೆದ ವಾರ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಚಂಡಮಾರುತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 28 ಜನ ಗಾಯಗೊಂಡಿದ್ದು, 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಹೆಚ್ಚಿನ ಸಂತ್ರಸ್ತರು ಫಿಲಿಪೈನ್ಸ್​ನ ಆಡಳಿತ ಪ್ರದೇಶ ವೆಸ್ಟರ್ನ್​ ವಿಸಯಾಸ್​ ಪ್ರದೇಶದ ನಿವಾಸಿಗಳಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಇಲ್ಲಿನ ನಿವಾಸಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 24ರಂದು ಫಿಲಿಪೈನ್ಸ್​ನ ಕೇಂದ್ರ ಭಾಗದಲ್ಲಿ ಚಂಡಮಾರುತ ಅಪ್ಪಳಿಸಿತ್ತು. ಇದರಿಂದ 2000 ಕ್ಕೂ ಹೆಚ್ಚು ಮನೆಗಳು ಮತ್ತು 55ಕ್ಕೂ […]

ಫಿಲಿಪೈನ್ಸ್​ನಲ್ಲಿ ಭೀಕರ ಚಂಡಮಾರುತ, ಮೃತರ ಸಂಖ್ಯೆ 41ಕ್ಕೆ ಏರಿಕೆ
ಸಾಧು ಶ್ರೀನಾಥ್​
|

Updated on: Dec 29, 2019 | 1:41 PM

Share

ಮಲಿನಾ: ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರಿಸಿ ಹೋಗಿದೆ. ಕಳೆದ ವಾರ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಚಂಡಮಾರುತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 28 ಜನ ಗಾಯಗೊಂಡಿದ್ದು, 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ.

ಹೆಚ್ಚಿನ ಸಂತ್ರಸ್ತರು ಫಿಲಿಪೈನ್ಸ್​ನ ಆಡಳಿತ ಪ್ರದೇಶ ವೆಸ್ಟರ್ನ್​ ವಿಸಯಾಸ್​ ಪ್ರದೇಶದ ನಿವಾಸಿಗಳಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಇಲ್ಲಿನ ನಿವಾಸಿಗಳು ಮೃತಪಟ್ಟಿದ್ದಾರೆ. ಡಿಸೆಂಬರ್ 24ರಂದು ಫಿಲಿಪೈನ್ಸ್​ನ ಕೇಂದ್ರ ಭಾಗದಲ್ಲಿ ಚಂಡಮಾರುತ ಅಪ್ಪಳಿಸಿತ್ತು. ಇದರಿಂದ 2000 ಕ್ಕೂ ಹೆಚ್ಚು ಮನೆಗಳು ಮತ್ತು 55ಕ್ಕೂ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. 150ಕ್ಕೂ ಹೆಚ್ಚು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸುಮಾರು 44 ಸಾವಿರ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ರವಾನಿಸಲಾಗಿದೆ.